ಮೈಸೂರು ದೇವಸ್ಥಾನ ನೆಲಸಮ: ಅಸಲಿಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಇರೋದೇನು..?

ಮೈಸೂರು ದೇವಸ್ಥಾನ ನೆಲಸಮ: ಅಸಲಿಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಇರೋದೇನು..?

ಮೈಸೂರಿನಲ್ಲಿ ಹಿಂದೂ ದೇವಸ್ಥಾನ ನೆಲಸಮ ಮಾಡಿದ ವಿಚಾರ ರಾಜ್ಯದಾದ್ಯಂತ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿದೆ. ಪಕ್ಷಾತೀತವಾಗಿ ರಾಜಕೀಯ ನಾಯಕರು ದೇವಸ್ಥಾನ ನೆಲಸಮ ಮಾಡಿದ್ದನ್ನ ವಿರೋಧಿಸಿದ್ದಾರೆ. ಆದ್ರೆ ದೇವಸ್ಥಾನ ನೆಲಸಮ ಮಾಡಿದ ಅಧಿಕಾರಿಗಳು ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪು. ಹಾಗಾದ್ರೆ ಸುಪ್ರೀಂಕೋರ್ಟ್ ಆದೇಶದಲ್ಲಿ ಹೊರಡಿಸಿದ ತೀರ್ಪೇನು..?

ಇದನ್ನೂ ಓದಿ: ‘ದೇಗುಲ ಹಿಂದೂಗಳ ಭಾವನಾತ್ಮಕ ವಿಚಾರ ಮಾತ್ರವಲ್ಲ, ಕರ್ನಾಟಕದ ಪ್ರತಿಬಿಂಬ’- ಸಿಎಂ ಇಬ್ರಾಹಿಂ

ಸಾರ್ವಜನಿಕ ರಸ್ತೆ-ಫುಟ್ಪಾತ್, ಉದ್ಯಾನವನಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿರೋ ಧಾರ್ಮಿಕ ಕಟ್ಟಡಗಳು ಅಕ್ರಮ ಎಂದು 2009ರ ಸೆಪ್ಟೆಂಬರ್ 29 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಅನಧಿಕೃತ ಧಾರ್ಮಿಕ ಕಟ್ಟಡಗಳ ಕುರಿತು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ಹೊರಡಿಸಿದೆ. ಸರ್ಕಾರಿ ರಸ್ತೆ, ಪಾರ್ಕ್‌, ಮೈದಾನದಲ್ಲಿ ಧಾರ್ಮಿಕ ಕಟ್ಟಡಗಳನ್ನು ಕಟ್ಟಬಾರದು. ದೇವಾಲಯ, ಮಸೀದಿ, ಚರ್ಚ್‌ಗಳ ಅನಧಿಕೃತ ಕಟ್ಟಡ ಕಟ್ಟದಂತೆ ನಿರ್ಬಂಧವಿದೆ. 2009 ಸೆಪ್ಟೆಂಬರ್ 29ರ ಬಳಿಕ ಕಟ್ಟಿರುವ ಅನಧಿಕೃತ ಕಟ್ಟಡ ತೆರವು ಆಗಬೇಕು. 2009 ಸೆಪ್ಟೆಂಬರ್ 29ಕ್ಕೆ ಮುಂಚೆ ಕಟ್ಟಿದ ಅನಧಿಕೃತ ಕಟ್ಟಡಗಳ ಬಗ್ಗೆ ಆಯಾ ಜಿಲ್ಲಾಡಳಿತವೇ ಪರಿಶೀಲಿಸಲಿ. 2009ಕ್ಕಿಂತ ಹಳೇ ಕಟ್ಟಡ ಅನಧಿಕೃತ ಆಗಿದ್ದರೆ 3 ರೀತಿಯ ಕ್ರಮಕ್ಕೆ ಪರಿಶೀಲಿಸಿ.. ಕಟ್ಟಡ ನೆಲಸಮ ಮಾಡಬೇಕಾ? ಸ್ಥಳಾಂತರಿಸಬೇಕಾ? ಉಳಿಸಿಕೊಳ್ಳಬೇಕಾ..? ಇದನ್ಬ ಆಯಾ ಜಿಲ್ಲಾಡಳಿತ ಕೂಲಂಕುಷವಾಗಿ ಪರಿಶೀಲನೆ ಮಾಡಿ ತೀರ್ಮಾನಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ‘ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ನನಗೆ ಅತೀವ ನೋವು ತಂದಿದೆ’- ಸಿ.ಟಿ ರವಿ

ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಎಲ್ಲಾ ರಾಜ್ಯಗಳಿಗೂ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.  ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಉತ್ತರದಾಯಿಯನ್ನಾಗಿಸಿ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಸದ್ಯ ಸುಪ್ರೀಂಕೋರ್ಟ್ ತೀರ್ಪಿನ ಜಾರಿ ಹೇಗಿದೆ ಎಂದು ಕರ್ನಾಟಕ ಹೈಕೋರ್ಟ್ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ: ಚರ್ಚ್​​-ಮಸೀದಿ ಬಿಟ್ಟು ಕೇವಲ ದೇಗುಲ ಮಾತ್ರ ಟಾರ್ಗೆಟ್​ ಯಾಕೆ?- ಶಾಸಕ ರೇಣುಕಾಚಾರ್ಯ ಕಿಡಿ

2009 ಸೆಪ್ಟೆಂಬರ್ 29ರ ನಂತರದ ಅನಧಿಕೃತ ಕಟ್ಟಡಗಳ ಪಟ್ಟಿ ಆಯಾ ಜಿಲ್ಲಾಡಳಿತ ಸಿದ್ಧಪಡಿಸಬೇಕಿತ್ತು. ಪಟ್ಟಿ ಮಾಡಿದ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಆಯಾ ಜಿಲ್ಲಾಡಳಿತಗಳು ಕ್ರಮವಹಿಸಬೇಕಿತ್ತು. ಆದರೆ ಸುಪ್ರೀಂಕೋರ್ಟ್‌ ನಿರ್ದೇಶಿಸಿದ 12 ವರ್ಷಗಳ ನಂತರವೂ ಸಮರ್ಪಕ ಪಟ್ಟಿಯನ್ನೇ ಸಿದ್ಧಪಡಿಸಿಲ್ಲ. ಆದ್ದರಿಂದಲೇ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಆಯಾ ಜಿಲ್ಲಾಡಳಿತಗಳು ಗೊಂದಲದ ಕ್ರಮ ತೆಗೆದುಕೊಂಡಿವೆ. ಅನಧಿಕೃತ ಅಂದ್ರೆ ಸ್ಥಳೀಯ ಆಡಳಿತದ ಮಂಜೂರಾತಿ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿದ ಕಟ್ಟಡ ಎಂದು ಸುಪ್ರೀಂಕೋರ್ಟ್ ಹೇಳಿದೆ.

Source: newsfirstlive.com Source link