ತಲೈವಿ ನಂತರ ಸೀತೆ ಪಾತ್ರದಲ್ಲಿ ಮಿಂಚಲು ಅಣಿಯಾದ ಕಂಗನಾ ರಾಣಾವತ್

ತಲೈವಿ ನಂತರ ಸೀತೆ ಪಾತ್ರದಲ್ಲಿ ಮಿಂಚಲು ಅಣಿಯಾದ ಕಂಗನಾ ರಾಣಾವತ್

ಮುಂಬೈ: ಬಾಲಿವುಡ್​ನ ಫೈರ್ ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುವ ಕಂಗನಾ ರಾಣಾವತ್ ತಲೈವಿ ನಂತರ ಇದೀಗ ಪೌರಾಣಿಕ ಸಿನಿಮಾವೊಂದರಲ್ಲಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತಾ ದಿ ಇನ್​ಕಾರ್ನೇಷನ್ ಸಿನಿಮಾದಲ್ಲಿ ಕಂಗನಾ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಸಿನಿಮಾ ಕಥೆಯನ್ನು ರಾಮಾಯಣವನ್ನು ಆಧರಿಸಿ ಬರೆಯಲಾಗಿದೆ. ಈ ಕಥೆಯನ್ನು ಕೆ.ವಿ. ವಿಜಯೇಂದ್ರ ಪ್ರಸಾದ್ ರಚಿಸಿದ್ದರೆ ಅಲೌಕಿಕ್ ದೇಸಾಯಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಇದನ್ನೂ ಓದಿ: ರಚಿತಾ ರಾಮ್​​ಗೆ ‘ತಲೈವಿ’ ಚಿತ್ರತಂಡ ವಿಶೇಷ ಗಿಫ್ಟ್​​​ ಕೊಟ್ಟಿದ್ದೇಕೆ..?

ಸಿನಿಮಾದ ಟೀಸರ್ ಪೋಸ್ಟರ್​ನ್ನು ಕಂಗನಾ ರಾಣಾವತ್ ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಪೋಸ್ಟ್​ಗೆ ಕ್ಯಾಪ್ಷನ್ ನೀಡಿರುವ ಕಂಗನಾ.. ಈ ಟ್ಯಾಲೆಂಟೆಡ್ ಟೀಮ್ ಮತ್ತು ಕಲಾವಿದರ ಟೀಮ್​ನಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗ್ತಿದೆ. ಸೀತಾರಾಮನ ಆಶೀರ್ವಾದ ಇರಲಿದೆ ಎಂದಿದ್ದಾರೆ.

ಇದನ್ನೂ ಓದಿ: ‘ತಲೈವಿ’ಗಾಗಿ ಕಂಗನಾ​ ತಮಿಳು ಕಲಿಯಲು ರಾಜಮೌಳಿ ತಂದೆ​​ ಮಾಡಿದ ಐಡಿಯಾ ಏನ್​ ಗೊತ್ತಾ?

ಇನ್ನು ಕಂಗನಾ ರಾಣಾವತ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನ ಕನ್ಫರ್ಮ್ ಮಾಡಿರುವ ಸಿನಿಮಾದ ನಿರ್ಮಾಪಕರಾದ ಸಲೋನಿ ಶರ್ಮಾ.. ಓರ್ವ ಮಹಿಳೆಯಾಗಿ ಕಂಗನಾ ರಾಣಾವತ್ ಅವರನ್ನು ನಮ್ಮ ವಿಎಫ್​ಎಕ್ಸ್ ಮ್ಯಾಗ್ನಸ್ ಒಪಸ್​ನ ಸೀತಾ ಸಿನಿಮಾಗೆ ಸ್ವಾಗತಿಸಲು ತುಂಬಾ ಖುಷಿಯಾಗ್ತಿದೆ. ಕಂಗನಾ ಭಾರತೀಯ ಮಹಿಳೆಯ ಧೈರ್ಯಕ್ಕೆ ಮುಕುಟವಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ತಲೈವಿ ಹೊಸ ಲುಕ್​ನಲ್ಲಿ ಕಂಗನಾ ರಣಾವತ್‌ ಥೇಟ್ ಜಯಲಲಿತಾ..!

ಈ ಹಿಂದೆ ಕರೀನಾ ಕಪೂರ್ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ ಕರೀನಾ ಕಪೂರ್ ಸಂಭಾವನೆ ಹೆಚ್ಚು ಕೇಳುತ್ತಿದ್ದಾರೆ ಎಂಬ ವಿಚಾರವೂ ಚರ್ಚೆಯಾಗಿತ್ತು. ಕರೀನಾ ಕಪೂರ್ ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಇದೇನಾ ಎಂಬುದು ಸ್ಪಷ್ಟವಾಗಿಲ್ಲ.

Source: newsfirstlive.com Source link