ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳಿದ ಲಸಿತ್​ ಮಲಿಂಗ..!

ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳಿದ ಲಸಿತ್​ ಮಲಿಂಗ..!

ಶ್ರೀಲಂಕಾದ ಹಿರಿಯ ವೇಗಿ ಲಸಿತ್ ಮಲಿಂಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್‌ ಮತ್ತು ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದ ಮಲಿಂಗ ಸದ್ಯ ಟಿ20 ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ರು. ಆದ್ರೆ, ವಿಶ್ವಕಪ್​ಗೆ ಪ್ರಕಟವಾದ ತಂಡದಲ್ಲಿ ಮಲಿಂಗಗೆ ಸ್ಥಾನ ಸಿಕ್ಕಿರಲಿಲ್ಲ. ಅದರ ಬೆನ್ನಲ್ಲೇ ಇದೀಗ ಮಾಲಿಂಗ ಕ್ರಿಕೆಟ್‌ ಜೀವನಕ್ಕೆ ಕೊನೆ ಹಾಡಿದ್ದಾರೆ. ಈ ಬಗ್ಗೆ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಪ್ರಯಾಣದುದ್ದಕ್ಕೂ ಯಾರೆಲ್ಲಾ ನನಗೆ ಬೆಂಬಲ ನೀಡಿದ್ದರೋ ಅವರಿಗೆಲ್ಲಾ ನಾನು ಋಣಿಯಾಗಿದ್ದೇನೆ ಹಾಗೂ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನನ್ನ ಅನುಭವಗಳನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಮಲಿಂಗ ಬರೆದುಕೊಂಡಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡದ ಪರ 30 ಟೆಸ್ಟ್ ಪಂದ್ಯಗಳಲ್ಲಿ 101 ವಿಕೆಟ್‌ಗಳು, 226 ಏಕದಿನ ಪಂದ್ಯಗಳಲ್ಲಿ 338 ವಿಕೆಟ್, 83 ಟಿ20ಐ ಪಂದ್ಯಗಳಲ್ಲಿ 107 ವಿಕೆಟ್‌ಗಳು ಮತ್ತು 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ಕಬಳಿಸಿದ್ರು.

Source: newsfirstlive.com Source link