ಸದ್ದು ಮಾಡುತ್ತಿದೆ ಸರಿಗಮಪ ಚಾಂಪಿಯನ್​ಶಿಪ್​ನ ಕಲರ್​ಫುಲ್​ ​ಪ್ರೊಮೋ

ಸದ್ದು ಮಾಡುತ್ತಿದೆ ಸರಿಗಮಪ ಚಾಂಪಿಯನ್​ಶಿಪ್​ನ ಕಲರ್​ಫುಲ್​ ​ಪ್ರೊಮೋ

ಸರಿಗಮಪ ಕನ್ನಡದ ಟಾಪ್​ ರಿಯಾಲಿಟಿ ಶೋಗಳಲ್ಲಿ ಇದು ಕೂಡ ಒಂದು. ಸಾಕಷ್ಟು ವರ್ಷಗಳಿಂದ ಅದ್ಭುತವಾಗಿ ಮೂಡಿ ಬರ್ತಾಯಿದೆ ಈ ಕಾರ್ಯಕ್ರಮ.. ಮಾತ್ರವಲ್ಲದೆ ಎಷ್ಟೋ ಒಳ್ಳೆಯ ಗಾಯಕರನ್ನ ಕನ್ನಡ ಇಂಡಸ್ಟ್ರಿಗೆ ಕೊಟ್ಟಿರುವ ಹೆಮ್ಮೆ ಈ ಶೋಗೆ ಇದೆ.

ಸರಿಗಮಪ ಇದುವರೆಗೂ ಒಟ್ಟು 17 ಸೀಸನ್‌ಗಳನ್ನ ಭರ್ಜರಿಯಾಗಿ ನಡೆಸಿಕೊಟ್ಟಿದೆ. ಇದೀಗ 17 ಸೀಸನ್​ಗಳ ಕಂಟೆಸ್ಟೆಂಟ್​ಗಳನ್ನು ನೀವು ಒಂದೇ ವೇದಿಕೆಯಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.. ಹೌದು ಜೀ ವಾಹಿನಿಯಲ್ಲಿ ಸರಿಗಮಪ ಚಾಂಪಿಯನ್​ಶಿಪ್​ ಕಾರ್ಯಕ್ರಮ ಬರ್ತಾಯಿದೆ ಅನ್ನೊದನ್ನಾ ನಾವೂ ನಿಮಗೆ ತಿಳಿಸಿದ್ವಿ.. ಆದ್ರೇ ಇದೀಗ ಆ ಶೋ ಯಾವಾಗ ಲಾಂಚ್​ ಆಗತ್ತೆ? ಜಡ್ಜ್‌ಗಳು ಯಾರೆಲ್ಲಾ ಇರ್ತಾರೆ ಅನ್ನೋದು ಪ್ರೊಮೋದಲ್ಲಿ ರಿವೀಲ್ ಆಗಿದೆ.

blank

ಈ ಪ್ರೋಮೊ ನೋಡಿದ್ರೆ ಕಾರ್ಯಕ್ರಮದ ಮೇಲೇ ಎಕ್ಸ್​ಪೆಕ್ಟೇಷನ್​ ಹೆಚ್ಚಾಗೋದ್ರಲ್ಲಿ ನೋ ಡೌಟ್​.. ಕಾರಣ ಕಲರ್​ಫುಲ್​ ಸೆಟ್​​, ವಿಭಿನ್ನ ರೀತಿಯ ಉಡುಗೆ ತೊಡುಗೆಗಳು, ಜೊತೆಗೆ ಪ್ರೊಮೋ ಶುರುವಿನಲ್ಲಿಯೆ ದೇವರಿಗೆ ಪೂಜೆ.. ಇದೆಲ್ಲವೂ ನೋಡುಗರಿಗೆ ವ್ಹಾವ್​ ಅನಿಸೊದು ಪಕ್ಕಾ

ಇದನ್ನೂ ಓದಿ: ದಿ. ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿಗೆ ಈಗ ಧಾರಾವಾಹಿ ರೂಪ

ಈ ಶೊನಲ್ಲಿ , ನಾದಬ್ರಹ್ಮ ಹಂಸಲೇಖ​, ವಿಜಯ್​ ಪ್ರಕಾಶ್​ ಹಾಗೂ ಅರ್ಜುನ್​ಜನ್ಯ ಮುಖ್ಯ ಜಡ್ಜ್‌ಗಳ ಸೀಟನ್ನ ಅಲಂಕರಿಸಲಿದ್ದಾರೆ. ಗಾಯಕರಾದ ಹೇಮಂತ್​, ಸುಚೇತನ್​, ಅನುರಾಧ ಭಟ್​, ಇಂದು ನಾಗ್​ರಾಜ್​, ಲಕ್ಷ್ಮಿ ನಾಗ್​ರಾಜ್​, ನಂದಿತಾ ಸೇರಿ ಒಟ್ಟು ಆರು ಜನ ಮೆಂಟರ್ಸ್​ ಇರಲಿದ್ದಾರೆ. ಈ ಆರು ಮೆಂಟರ್ಸ್ ಒಂದೊಂದು ಟೀಮ್ ರೆಪ್ರೆಸೆಂಟ್ ಮಾಡಲಿದ್ದಾರೆ.

blank

ಈ ಸೀಸನ್‌ನಲ್ಲಿ ವಿಶೇಷವಾಗಿ ತಂಡಗಳ ನಡುವೆ ಸಂಗೀತ ಸಮರ ನಡೆಯಲಿದೆ. 36 ಸ್ಪರ್ಧಿಗಳ ಭಾಗವಹಿಸಲಿದ್ದು, 6 ಸದಸ್ಯರ ಒಂದೊಂದು ತಂಡದಲ್ಲಿ ಇರಲಿದ್ದಾರೆ. ಈ ಕಾರ್ಯಕ್ರಮವನ್ನು ಅನುಶ್ರೀಯವರು ಹೋಸ್ಟ್​ ಮಾಡಲಿದ್ದಾರೆ..

ಇಷ್ಟೆಲ್ಲಾ ಸದ್ದು ಮಾಡ್ತಾಯಿರುವ ಸರಿಗಮಪ ಚಾಂಪಿಯನ್​ಶಿಪ್​ ಸೆಪ್ಟಂಬರ್​ 18 ರಂದು ಭರ್ಜರಿಯಾಗಿ ಲಾಂಚ್​ ಆಗಲಿದ್ದು ಪ್ರತಿ ಶನಿವಾರ ಹಾಗೂ ಭಾನುವಾರ ನಿಮ್ಮೆಲ್ಲರನ್ನು ಎಂಟರ್​ಟೈನ್​ ಮಾಡಲಿದೆ. 7.30ಕ್ಕೆ ಪ್ರಸಾರವಾಗ್ತಿದ್ದ ಡಿಕೆಡಿ ಬಹುಶಃ 9 ಗಂಟೆಗೆ ಪ್ರಸಾರವಾಗಲಿದೆ.

Source: newsfirstlive.com Source link