ಕಬ್ಜ, ಲಗಾಮ್​​ ಚಿತ್ರಗಳು ಕಂಪ್ಲೀಟ್​ ಆಗ್ತಿದಂತೆ ಡೈರೆಕ್ಷನ್​ ಕ್ಯಾಪ್​ ತೊಡ್ತಾರಂತೆ ಟೋಪಿವಾಲ

ಕಬ್ಜ, ಲಗಾಮ್​​ ಚಿತ್ರಗಳು ಕಂಪ್ಲೀಟ್​ ಆಗ್ತಿದಂತೆ ಡೈರೆಕ್ಷನ್​ ಕ್ಯಾಪ್​ ತೊಡ್ತಾರಂತೆ ಟೋಪಿವಾಲ

ಅಭಿಮಾನಿಗಳ ಚಕ್ರವರ್ತಿ ಉಪೇಂದ್ರ ಎಲ್ಲೇ ಹೋದ್ರು ಅವರಿಗೆ ಎದುರಾಗೋ ಪ್ರಶ್ನೆ ಒಂದೆ. ಅದೇನಪ್ಪ ಅಂದ್ರೆ ಯಾವಾಗ ಉಪೇಂದ್ರ ಡೈರೆಕ್ಷನ್​ ಮಾಡ್ತಾರೆ.. ಅಭಿಮಾನಿಗಳ ಈ ಪಶ್ನೆಗೆ ಹಾರಿಕೆ ಉತ್ತರ ಕೊಡುತ್ತ ಬರ್ತಿದ್ದ ಉಪ್ಪಿ, ಕೊನೆಗೂ ತಮ್ಮನ್ನು ಆರಾಧಿಸುವ ಅಭಿಮಾನಿ ದೇವರುಗಳ ಆಸೆ ಪೂರೈಸೋಕೆ ರೆಡಿಯಾಗಿದ್ದಾರೆ..ಅಷ್ಟೇ ಅಲ್ಲ ಉಪ್ಪಿ ಈ ಸಲ ಡೈರೆಕ್ಷನ್​ ಮಾಡೋ ಸಿನಿಮಾ ಬಗ್ಗೆ ಒಂದಷ್ಟು ಕ್ಲೂ ಕೂಡ ಬಿಟ್ಟು ಕೊಟ್ಟಿದ್ದಾರೆ….

ಸೂಪರ್​ ಸ್ಟಾರ್ ಉಪೇಂದ್ರ ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಿರ್ದೇಶಕರಲ್ಲಿ ಒಬ್ಬರು..ಈ ಬುದ್ಧಿವಂತ ನಿರ್ದೇಶಕನ ಕ್ಯಾಪ್​ ತೊಡ್ತಾರೆ ಅಂದ್ರೆ, ಆ ಚಿತ್ರಕ್ಕಾಗಿ ಇಡೀ ಚಿತ್ರರಂಗವೇ ಕಾಯುತ್ತೆ.. ಅದ್ರೆ ಉಪ್ಪಿ ಕಳೆದ ಕೆಲವು ವರ್ಷಗಳಿಂದ ಡೈರೆಕ್ಷನ್​ನಿಂದ ಕೊಂಚ ದೂರ ಉಳಿದಿದ್ದಾರೆ..ಅದರೆ ಉಪ್ಪಿ ಅಭಿಮಾನಿಗಳು ಕೆಲವು ವರ್ಷಗಳಿಂದ ಉಪ್ಪಿ ಬಳಿ ಡೈರೆಕ್ಷನ್ ಬೇಡಿಕೆ ಇಟ್ಟಿದ್ರು. ಕೊನೆಗೂ ಈಗ ಉಪ್ಪಿ ಅಭಿಮಾನಿಗಳ ಆಸೆ ಪೂರೈಸೋಕೆ ರೆಡಿಯಾಗಿದ್ದು, ಉಪ್ಪಿ, ತೆರೆ ಮರೆಯಲ್ಲೆ ಡೈರೆಕ್ಷನ್ ಮಾಡೊಕೆ ಸಜ್ಜಾಗ್ತಿದ್ದಾರೆ.

blank

2015 ರಲ್ಲಿ ಬಂದ ಉಪ್ಪಿ2 ಚಿತ್ರದ ನಂತರ ರಿಯಲ್​ ಸ್ಟಾರ್ ಉಪೇಂದ್ರ ನಿರ್ದೇಶನದ ಜವಬ್ದಾರಿ ಹೊತ್ತಿಲ್ಲ.. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವುದರಲ್ಲೇ ಬ್ಯುಸಿಯಾಗಿರುವ ಉಪ್ಪಿ ಕೊನೆಗೂ ಲಾಕ್​ ಡೌನ್​ ಟೌಂ ಅಲ್ಲಿ ಮೂರು ಹೊಸ ಕತೆಗಳ ರೆಡಿ ಮಾಡಿಕೊಂಡಿದ್ದಾರಂತೆ…ಕೈಯಲ್ಲಿರುವ ಸಿನಿಮಾಗಳ ಶೂಟಿಂಗ್ ಮುಗಿಸಿ. ಸರಿಯಾದ ಟೈಂ ನೋಡ್ಕೊಂಡು ಉಪ್ಪಿ ಡೈರೆಕ್ಷನ್​ ಮಾಡುವ ಸಿನಿಮಾ ಅನೌನ್ಸ್​ ಮಾಡೋಕೆ ಪ್ಲಾನ್​ ಮಾಡಿಕೊಂಡಿರೋದಾಗಿ ಸ್ವತಃ ಉಪ್ಪಿಯೇ ಹೇಳಿದ್ದಾರೆ..

ಕಳೆದ ರಾತ್ರಿ ಉಪೆಂದ್ರ ಮಡದಿ ಪ್ರಿಯಾಂಕ ಅಭಿನಯದ 1980 ಚಿತ್ರದ ಟ್ರೈಲರ್​ ಲಾಂಚ್​ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು.. ಈ ವೇಳೆ ಎಂದಿನಂತೆ ಉಪ್ಪಿಗೆ ನಿಮ್ಮ ಡೈರೆಕ್ಷನ್​ ಯಾವಾಗಾ..? ಪ್ಯಾನ್​ ಇಂಡಿಯಾ ಸಿನಿಮಾ ಮಾಡ್ತಿರಾ? ಎಂಬ ಪ್ರಶ್ನೆಗಳು ಎದುರಾದವು.. ಈ ಪ್ರಶ್ನೆಗಳಿಗೆ ಬುದ್ಧಿವಂತಿಕೆಯ ಉತ್ತರ ಕೊಟ್ಟ ಉಪ್ಪಿ, ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ..

ಕಳೆದ ವರ್ಷವೇ ಚಿತ್ರದ ಕತೆ ಕೆಲಸದಲ್ಲಿ ತಲ್ಲೀನರಾಗಿರುವ ಉಪ್ಪಿ. ಕಬ್ಜ, ಲಗಾಮ್​​ ಚಿತ್ರಗಳು ಕಂಪ್ಲೀಟ್​ ಆಗ್ತಿದಂತೆ.. ಮುಂದಿನ ವರ್ಷ ಡೈರೆಕ್ಷನ್​ ಮಾಡುವ ಸಿನಿಮಾ ಅನೌನ್ಸ್​ ಮಾಡಲಿದ್ದಾರೆ.. ಅದರೆ ಚಿತ್ರದಲ್ಲಿ ಯಾವ ಸ್ಟಾರ್​ ಬಣ್ಣ ಹಚ್ಚಲಿದ್ದಾರೆ ಎಂಬುದರ ಬಗ್ಗೆ ಉಪ್ಪಿ ಸಖತ್​ ಸಸ್ಪೆನ್ಸ್​ ಮೇಂಟೈನ್ ಮಾಡಿದ್ದಾರೆ.

Source: newsfirstlive.com Source link