ಮೈತ್ರಿ ಬಗ್ಗೆ ಖರ್ಗೆ ಮಾತನಾಡಿದ್ರೆ ಸಾಲದು.. ನಾವೇನು ಕಾಂಗ್ರೆಸ್ ಅಡಿಯಾಳುಗಳಾ..?-ಹೆಚ್​ಡಿಕೆ ಕಿಡಿ

ಮೈತ್ರಿ ಬಗ್ಗೆ ಖರ್ಗೆ ಮಾತನಾಡಿದ್ರೆ ಸಾಲದು.. ನಾವೇನು ಕಾಂಗ್ರೆಸ್ ಅಡಿಯಾಳುಗಳಾ..?-ಹೆಚ್​ಡಿಕೆ ಕಿಡಿ

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್​ನವರು ಈಗಲೇ ಅಧಿಕಾರಕ್ಕೆ ಬಂದೆವೆಂಬ ಭ್ರಮೆಯಲ್ಲಿದ್ದಾರೆ. ಅವರು ಅಧಿಕಾರಕ್ಕೆ ಬರೋದಾದ್ರೆ ಬೇರೆ ಪಕ್ಷಗಳ ನಾಯಕರನ್ನ ಸೆಳೆಯುವ ಅವಶ್ಯಕತೆ ಇದೆಯಾ ? ಈಗ ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ದಯನೀಯವಾಗಿದೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ.. ಅವರು ಜೆಡಿಎಸ್ ಪಕ್ಷವನ್ನ ಮುಗಿಸಲು ಹೊರಟಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ- ಹೆಚ್​ಡಿಕೆ ಹೀಗಂದಿದ್ದೇಕೆ..?

ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆ ಪೈಪೋಟಿ ವಿಚಾರವಾಗಿ ಮಾತನಾಡಿ.. ನಮ್ಮ ನಿರ್ಧಾರವನ್ನ ಇನ್ನೂ ತಿಳಿಸಿಲ್ಲ. ನಮಗೆ ಸ್ಥಳೀಯ ಆಡಳಿತದಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಲ್ಲ.. 2023ರ ಚುನಾವಣೆ ತುಂಬಾ ಮುಖ್ಯವಾಗಿದೆ ಎಂದಿದ್ದಾರೆ.

ದೇವೇಗೌಡರ ಜೊತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ನಾಯಕರಲ್ಲವೇ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ..ಮಲ್ಲಿಕಾರ್ಜುನ ಖರ್ಗೆ ಸ್ಥಳೀಯ ವಿಚಾರವಾಗಿ ಮಾತ್ರ ಮಾತನಾಡಿದ್ದಾರೆ. ಅದು ಸ್ಥಳೀಯ ತೀರ್ಮಾನ ಅಷ್ಟೆ. ರಾಜ್ಯಮಟ್ಟದ ತೀರ್ಮಾನವಲ್ಲ. ಖರ್ಗೆ ಮಾತನಾಡಿದ ತಕ್ಷಣ ರಾಜ್ಯ ಕಾಂಗ್ರೆಸ್ ನಾಯಕರ ತೀರ್ಮಾನ ಆಗೋದಿಲ್ಲ. ಅವರ ಪಕ್ಷದ ಶಾಸಕಾಂಗ ಪಕ್ಷದ ನಾಯಕರೇನು ಆಕಾಶದಲ್ಲಿ ಇದ್ದಾರಾ? ನಾವೇನು ಅವರ ಅಡಿಯಾಳುಗಳಾ? ಯಾರೋ ಬೆಂಬಲ ಕೊಡಿ ಅಂದ ತಕ್ಷಣ ಕೊಡಲು ಆಗುತ್ತಾ..? ಖರ್ಗೆ ಅವರದ್ದು ವೈಯಕ್ತಿಕ ಮನವಿ ಅಷ್ಟೇ. ಅದು ರಾಜ್ಯ ಕಾಂಗ್ರೆಸ್ ನಾಯಕರ ತೀರ್ಮಾನವಲ್ಲ. ಖರ್ಗೆ ಮಾತನಾಡಿದ ತಕ್ಷಣ ನಾಯಕರು ಮಾತನಾಡಿದ್ದಾರೆ ಅಂತ ಉದ್ಧಟತನ ಯಾಕೆ ? ಬೇಕಾದರೆ ಬಹಿರಂಗವಾಗಿ ಹೇಳಲಿ ಮೈತ್ರಿಗೆ ಸಿದ್ಧವಿಲ್ಲವೆಂದು. ಯಾಕೆ ಏನೂ ಮಾತನಾಡುವುದಿಲ್ಲ..? ನಾವೇನು ಇವರ ಸ್ಲೇವ್ಸಾ..? ಎಂದು ಪ್ರಶ್ನಿಸಿದ್ದಾರೆ.

Source: newsfirstlive.com Source link