ಇಂಡಿಯಾದ ಡ್ಯಾನ್ಸ್ ಕಿಂಗ್ ಜೊತೆ ಅಪ್ಪು ಡ್ಯಾನ್ಸ್..! ಯಾವಾಗ ಅಪ್ಪು-ಪ್ರಭು ಕುಣಿತ ನೋಡೋ ಚಾನ್ಸ್..?

ಇಂಡಿಯಾದ ಡ್ಯಾನ್ಸ್ ಕಿಂಗ್ ಜೊತೆ ಅಪ್ಪು ಡ್ಯಾನ್ಸ್..! ಯಾವಾಗ ಅಪ್ಪು-ಪ್ರಭು ಕುಣಿತ ನೋಡೋ ಚಾನ್ಸ್..?

ಅಂತು ಇಂತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಸ್ತ ಅಭಿಮಾನಿಗಳ ಆಸೆ ಇನ್ನು ಕೆಲವೇ ದಿನಗಳಲ್ಲಿ ಈಡೇರುತ್ತಿದೆ.. ಭಾರತೀಯ ಸಿನಿಮಾ ರಂಗದ ಡ್ಯಾನ್ಸ್ ಕಿಂಗ್ ಪ್ರಭುದೇವ, ಕರ್ನಾಟಕ ಡ್ಯಾನ್ಸ್ ಕಿಂಗ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಸ್ಟ್ ಟೈಮ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನರ್ತಿಸುತ್ತಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ?

ಇಂಡಿಯನ್ ಡ್ಯಾನ್ಸ್ ಲೋಕಕ್ಕೆ ಒಂದು ಸಂಚಲನ ಹೊಸ ಸಂಕ್ರಮಣ ಪ್ರಭುದೇವ.. ಗುರುವನ್ನ ಶಿಷ್ಯ ಮೀರಿಸ ಬೇಕು , ತಂದೆಯನ್ನ ಮಗ ಮೀರಿಸ ಬೇಕು ಅಂತಾರೆ.. ಪ್ರಭುದೇವ ಡ್ಯಾನ್ಸ್ ವಿಚಾರದಲ್ಲಿ ತಂದೆ ಮತ್ತು ಗುರು ಇಬ್ಬರನ್ನ ಮೀರಿಸಿ ಬೆಳೆದು ಸಾಧನೆ ಶಿಖರವಾಗಿರೋರು..

blank

ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್​.. ಬಾಲ್ಯದಲ್ಲೇ ಕನ್ನಡ ಚಿತ್ರರಂಗದ ಬೆಟ್ಟದ ಹೂವಾಗಿ ರಾಷ್ಟ್ರ ಪ್ರಶಸ್ತಿಯನ್ನ ಪಡೆದ ಪ್ರತಿಭೆ.. ಇನ್ನು ಅಪ್ಪು ಅವರ ಡ್ಯಾನ್ಸ್ ಮತ್ತು ಫೈಟ್ಸ್​​ಗೆ ಕನ್ನಡದಲ್ಲಿ ಅಪ್ಪುಗೆ ಅಪ್ಪುನೇ ಸರಿಸಾಟಿ.. ಸ್ಯಾಂಡಲ್​ವುಡ್​​​ ಕುಣಿತಕ್ಕೆ ಕಾಗುಣಿತವಿದ್ದಂಗೆ ಅಪ್ಪು.. ಈ ಅಪ್ಪು ಮತ್ತು ಪ್ರಭುದೇವ ಒಂದು ಬಾರಿ ಆದ್ರು ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಇಬ್ಬರು ಒಂದೇ ಹಾಡಿಗೆ ಕುಣಿದು ಕುಪ್ಪಳಿಸ ಬೇಕು ಅನ್ನೋದು ಕೋಟಿ ಕೋಟಿ ಅಭಿಮಾನಿಗಳ ಕನಸಿನ ಆಸೆ.. ಕೊನೆಗೂ ಕೋಟಿ ಕನ್ನಡಿಗರ ಆ ಆಸೆಯ ಕನಸು ಈಗ ಈಡೇರೋ ಕಾಲ ಸನಿಹವಾಗುತ್ತಿದೆ.. ಇಂಡಿಯದ ಡ್ಯಾನ್ಸ್ ಕಿಂಗ್ ಜೊತೆ ಸ್ಯಾಂಡಲ್​​ವುಡ್ ಡ್ಯಾನ್ಸ್ ಕಿಂಗ್ ಕುಣಿಯುತ್ತಿದ್ದಾರೆ..

ಇಂಡಿಯಾದ ಡ್ಯಾನ್ಸ್ ಕಿಂಗ್ ಜೊತೆ ಅಪ್ಪು ಡ್ಯಾನ್ಸ್..!
ಯಾವಾಗ ಅಪ್ಪು-ಪ್ರಭು ಕುಣಿತ ನೋಡೋ ಚಾನ್ಸ್..?
ರಾಜ ಸುಂದರಂ ಅನ್ನೊ ಡ್ಯಾನ್ಸ್ ದಂತ ಕಥೆಯ ಮಗ ಅನ್ನೊ ಇಮೇಜ್​​ನೊಂದಿಗೆ ಚಿತ್ರರಂಗಕ್ಕೆ ಬಲಗಾಲಿಟ್ಟರು ಪ್ರಭುದೇವ.. ಅದ್ಭುತ ಡ್ಯಾನ್ಸ್ ಕೊರಿಯೋಗ್ರಫರ್ ಎಂದು ದಕ್ಷಿಣ ಭಾರತದಲ್ಲೇ ಹೆಸರು ಮಾಡಿದ್ರು.. ಡ್ಯಾನ್ಸ್ ಸೆನ್ಸೇಷನ್ ಮೆಗಾಸ್ಟಾರ್ ಚಿರಂಜೀವಿ ಅವ್ರ ಅದೇಷ್ಟೋ ಸಿನಿಮಾಗಳ ಹಾಡುಗಳಿಗೆ ಪ್ರಭುದೇವರ ಕುಣಿತದ ಶಕ್ತಿಯೇ ಭಕ್ತಿ.. ಒಬ್ಬ ಯಶಸ್ವಿ ಡ್ಯಾನ್ಸ್ ಕೊರಿಯೊಗ್ರಫರ್ ಆಗಿದ್ದಾಗಲೇ ಹೀರೋ ಆಗಿ ಮಿಂಚಿದವರು.. ಹೀರೋಆಗಿ ಮಿಂಚುತ್ತಿದ್ದಾಗಲೇ ಡೈರೆಕ್ಟರ್ ಆಗಿಯೂ ಸೈ ಅನ್ನಿಕೊಂಡವರು..

blank

ಈ ಭಾರತೀಯ ಚಿತ್ರರಂಗದ ತಾರೆ ಆಗಾಗ ಮೈಸೂರಿಗೆ ಬರ್ತಾರೆ , ಆಗಾಗ ಕನ್ನಡಿಗರನ್ನ ಕನ್ನಡದಲ್ಲೆ ಮಾತನಾಡಿಸುತ್ತಾರೆ.. ಪ್ರಭುದೇವ ಬಂದಾಗಲೆಲ್ಲ ಒಂದೇ ಪ್ರಶ್ನೆಗೆ ಮತ್ತೆ ನೀವು ಯಾವಾಗ ಕನ್ನಡದಲ್ಲಿ ನಟಿಸಿ ನರ್ತಿಸುತ್ತಿರಾ ಅಂತ.. ಜೊತೆಗೆ ನಮ್ಮ ಅಪ್ಪು ಜೊತೆ ನೀವು ಒಮ್ಮೆ ಕುಣಿಯ ಬೇಕು ಅಂತ ಕೇಳುತ್ತಿದ್ದರು.. ಅಭಿಮಾನಿಗಳ ಕೊರೆಕೆ ಈಗ ನೆರವೇರುತ್ತಿದೆ.. ಒಂದೇ ಸಿನಿಮಾ ಸೆಟ್​​ನಲ್ಲಿ ಒಂದೇ ಸಿನಿಮಾದ ಹಾಡಿಗೆ ಪ್ರಭುದೇವ ಮತ್ತು ಪುನೀತ್ ನರ್ತಿಸುತ್ತಿದ್ದಾರೆ..

ಯಾವ ಚಿತ್ರದಲ್ಲಿ ಪ್ರಭುದೇವ ಜೊತೆ ಪವರ್ ಕುಣಿತ..?
ಸದ್ದಿಲ್ಲದೆ ಶುರು ಪ್ರಭು ಮತ್ತು ಪುನೀತ್ ತಕಧಿಮಿತ..!

ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್.. ಈ ಇಬ್ಬರು ನಾಟ್ಯ ನಟರಾಜನ ಫೇವರೆಟ್ ಭಕ್ತರಿದ್ದಂಗೆ.. ಇಬ್ಬರು ಸೇರಿ ಕುಣಿದ್ರೆ ನಟರಾಜ ಧರೆಗಿಳಿದು ದರ್ಶನ ಕೊಟ್ರು ಕೊಡಬಹುದು.. ನೋಡಿ ಪ್ರೇಕ್ಷಕ ಪ್ರಭು ಪ್ರಸನ್ನನಾಗಬಹುದು.. ಆದ್ರೆ ಈ ಇಬ್ಬರನ್ನ ಒಂದು ಮಾಡೋ ಸಿನಿಮಾ ಬರಬೇಕಲ್ಲ.. ಅಟ್​​ಲಿಸ್ಟ್ ಪುನೀತ್ ಸಿನಿಮಾಕ್ಕೆ ಪ್ರಭುದೇವ ಕೊರಿಯೊಗ್ರಫಿಯಾದ್ರು ಮಾಡಬೇಕಲ್ಲ ಅಂತ ಅಭಿಮಾನಿ ದೇವರುಗಳು ಕನವರಿಸುತ್ತಿದ್ದರು..

ಅಭಿಮಾನಿಗಳ ಆಸೆ ಈಡೇರುತ್ತಿದೆ.. ಪ್ರಭುದೇವ ಮತ್ತು ಪುನೀತ್ ಈಗಾಗಲೇ ಡ್ಯಾನ್ಸ್ ಶುರು ಹಚ್ಚಿಕೊಂಡಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋದಕ್ಕೆ ಉತ್ತರ ಪ್ರಭುದೇವ ಕಿರಿಯ ಸಹೋದರ ಮನಸೆಲ್ಲ ನೀನೆ ಖ್ಯಾತಿಯ ನಾಗೇಂದ್ರ ಪ್ರಸಾದ್ ನಿರ್ದೇಶನದ ಹೊಸ ಸಿನಿಮಾ..

blank

ಹೌದು.. ಚಿತ್ರ , ಮನಸೆಲ್ಲ ನೀನೇ ಖ್ಯಾತಿಯ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಡೈರೆಕ್ಷನ್​​ ಮಾಡ್ತಿರೋ ಸಿನಿಮಾದಲ್ಲಿ ಪ್ರಭುದೇವ ಜೊತೆ ಅಪ್ಪು ಡ್ಯಾನ್ಸ್ ಮಾಡ್ತಿದ್ದಾರೆ.. ನಟ ಕಮ್ ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಡೈರೆಕ್ಷನ್ ಮಾಡ್ತಿದ್ದಾರೆ , ಈ ಸಿನಿಮಾ ನಾಯಕ ಡಾರ್ಲಿಂಗ್ ಕೃಷ್ಣ ಅನ್ನೋ ವಿಚಾರವನ್ನ ಈ ವರ್ಷದ ಜನವರಿ ತಿಂಗಳೇ ನಾವು ನಿಮಗೆ ಒಪ್ಪಿಸಿದ್ವಿ.. ಈಗ ಇದರ ಮುಂದುವರೆದ ಭಾಗ.. ತಮಿಳಿನ ‘ಓ ಮೈ ಕಡವುಲೆ’ ಸಿನಿಮಾವನ್ನ ಕನ್ನಡಕ್ಕೆ ತಕ್ಕಹಾಗೆ ರಿಮೇಕ್ ಮಾಡ್ತಿದ್ದಾರೆ ನಾಗೇಂದ್ರ ಪ್ರಸಾದ್.. ಈ ಹೆಸರಿಡದ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆಸ್ಟ್ ರೋಲ್​ ಮಾಡ್ತಿದ್ದಾರೆ.. ಈಗ ಹಾಡೊಂದಕ್ಕೆ ಪ್ರಭುದೇವ ಅವರನ್ನ ಅವರ ತಮ್ಮ ನಾಗೇಂದ್ರ ಪ್ರಸಾದ್ ಕರೆಸಿ ಅಪ್ಪು ಜೊತೆ ಕುಣಿಸುತ್ತಿದ್ದಾರೆ.. ಬೆಂಗಳೂರಿನ ಹೆಚ್.ಎಂ.ಟಿ ಫ್ಯಾಕ್ಟ್ರಿಯಲ್ಲಿ ಶೂಟಿಂಗ್ ಪ್ರಾರಂಭವಾಗಿದೆ..

ಈ ಹಿಂದೆ ಕನ್ನಡ ಕೋಟ್ಯಾದಿಪತಿಯಲ್ಲಿ ಅಪ್ಪು ಮತ್ತು ಪ್ರಭುದೇವ ಚಿಕ್ಕದಾಗಿ ಕುಣಿದಿದ್ರು.. ಅದು ರಿಯಾಲಿಟಿ ಶೋ ಆದ್ರೆ ಇದು ಸಿನಿಮಾ.. ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್ ಒಂದೇ ಹಾಡಿಗೆ ಕುಣಿದ್ರೆ ಹೆಂಗಿರತ್ತೆ ನೀವೇ ಕಲ್ಪಿಸಿ ಕನಸುಕಾಣಿ.. ಮೈ ಜುಂ ಅನ್ನುತ್ತೆ ಅಲ್ವಾ.. ಮುಂದಿನ ದಿನಗಳಲ್ಲಿ ಈ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಹೊರ ಬಿಳಲಿದೆ..

Source: newsfirstlive.com Source link