ಹಿಂದಿ ದಿವಸವನ್ನು ಹಿಂದೆಯೂ ವಿರೋಧಿಸಿದ್ದೇನೆ, ಮುಂದೆಯೂ ವಿರೋಧಿಸುತ್ತೇನೆ- ಸಿದ್ದರಾಮಯ್ಯ

ಹಿಂದಿ ದಿವಸವನ್ನು ಹಿಂದೆಯೂ ವಿರೋಧಿಸಿದ್ದೇನೆ, ಮುಂದೆಯೂ ವಿರೋಧಿಸುತ್ತೇನೆ- ಸಿದ್ದರಾಮಯ್ಯ

ಬೆಂಗಳೂರು: ಹಿಂದಿ ದಿವಸ್ ಆಚರಣೆ ಹಿನ್ನೆಲೆ ಇಂದು ವಿಪಕ್ಷಗಳು ಹಾಗೂ ಕನ್ನಡಪರ ಸಂಘಟನೆಗಳು ಹಿಂದಿಹೇರಿಕೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದವು. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಕೂಡ #ಹಿಂದಿಹೇರಿಕೆನಿಲ್ಲಿಸಿ ಹೆಸರಿನಲ್ಲಿ ದೊಡ್ಡ ಮಟ್ಟದ ಆಂದೋಲನವೇ ನಡೆದಿದೆ.

ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಹಿಂದಿಹೇರಿಕೆಯ ವಿರುದ್ಧ ಚಾಟಿ ಬೀಸಿದ್ದಾರೆ. ಟ್ವೀಟ್ ಮೂಲಕ ಹಿಂದಿಹೇರಿಕೆ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ ಹಿಂದಿ ದಿವಸವನ್ನು ಹಿಂದೆಯೇ ವಿರೋಧಿಸಿದ್ದೇನೆ, ಮುಂದೆಯೂ ವಿರೋಧಿಸುತ್ತೇನೆ ಎಂದಿದ್ದಾರೆ.

ಯಾವುದೇ ಭಾಷೆಯ ಕಲಿಕೆಗೆ ವಿರೋಧ ಇಲ್ಲ. ಭಾಷೆಯನ್ನು ಬಲಾತ್ಕಾರವಾಗಿ ಹೇರುವ ಕುಟಿಲತೆಗೆ ವಿರೋಧ ಇದೆ. ವಿರೋಧಿಸುತ್ತಿರುವುದು ಹಿಂದಿ ಭಾಷೆಯನ್ನಲ್ಲ, ಅದರ ಹೇರಿಕೆಯ ರಾಜಕೀಯವನ್ನು. ಹಿಂದಿ ದಿವಸವನ್ನು ಹಿಂದೆಯೂ ವಿರೋಧಿಸಿದ್ದೇನೆ, ಮುಂದೆಯೂ ವಿರೋಧಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link