ಭಜನಾ ಗೀತೆಗಳಿಂದ ಎದೆ ತುಂಬಿ ವೇದಿಕೆಯಲ್ಲಿ ಮನಸೂರೆಗೊಳ್ಳುತ್ತಿದ್ದಾರೆ ಹಳ್ಳಿ ಪ್ರತಿಭೆ ಶರಣಪ್ಪ

ಭಜನಾ ಗೀತೆಗಳಿಂದ ಎದೆ ತುಂಬಿ ವೇದಿಕೆಯಲ್ಲಿ ಮನಸೂರೆಗೊಳ್ಳುತ್ತಿದ್ದಾರೆ ಹಳ್ಳಿ ಪ್ರತಿಭೆ ಶರಣಪ್ಪ

ಕಮಲ ಕೆಸರಿನಲ್ಲಿ ಅರಳುತ್ತದೆಯಾದರು ಕೂಡ ಅದಕ್ಕಿರುವ ಘನತೆಯೇ ಬೇರೆ. ಹಾಗೇ ಕಡು ಬಡತನದ ನಡುವೆ ಸಾವಿನ ಮನೆಯಲ್ಲಿ ಭಜನೆಗಳನ್ನ ಹಾಡುತ್ತಾ ಉಪಜೀವನ ಸಾಗಿಸುತ್ತಿರುವ ಹಳ್ಳಿ ಹಕ್ಕಿ ಶೆಟ್ಟಪ್ಪ.

ಗದಗ ಜಿಲ್ಲೆಯ ಕುರುಗೋವಿನಕೊಪ್ಪ ಎಂಬ ಪುಟ್ಟ ಹಳ್ಳಿಯ ಪ್ರತಿಭೆ ಶೆ‍ಟ್ಟಪ್ಪ. ಯಾರ ಮನೆಯಲ್ಲಿಯೇ ಸಾವಾದರೂ ಶೆಟ್ಟಪ್ಪ ಅವರ ಹಾಡು ಮೊಳಗಲೇಬೇಕು ಅಷ್ಟು ಫೇಮಸ್ ಇವರ ಭಜನಾ ಗೀತೆಗಳು..ತಮ್ಮ ಹಾಡಿನ ಮೂಲಕ ಎದೆ ತುಂಬಿ ಹಾಡುವೆನು ವೇದಿಕೆಯನ್ನ ವಿಸ್ಮಿತರಾಗಿಸಿರುವ ಶೆಟ್ಟಪ್ಪ ಅವರಿಗೆ ಬೆನ್ನೆಲುಬಾಗಿ ನಿಂತಿರುವುದು ಅವರ ಪತ್ನಿ.

ಯಾಕೆ ಬಡದಾಡ್ತಿ ತಮ್ಮ ಅಂತಾ ಶೆಟ್ಟಪ್ಪ ಹಾಗೂ ಅವರ ಭಜನೆಯ ತಂಡ ಮನಸೂರೆಗೊಳ್ಳುವಂತೆ ಹಾಡಿ ಮತ್ತೊಮ್ಮೆ ಭಜನೆಯ ಶಕ್ತಿಯನ್ನ ಪ್ರೂವ್ ಮಾಡಿದ್ರು. ಒಟ್ನಲ್ಲಿ ಹಳ್ಳಿ ಸೊಗಡಿನ ಪ್ರತಿಭೆಗಳು ಎದೆ ತುಂಬಿ ಹಾಡುವೆನು ಮೂಲಕ ಮಿಂಚುತ್ತಿದ್ದು, ಇವರ ಸಾಧನೆ ಹೀಗೆ ಮುಂದುವರೆಯಲಿ..ನಮ್ಮ ಕಡೆಯಿಂದ ಶೆಟ್ಟಪ್ಪ ಅವರಿಗೆ ಆಲ್ ದಿ ಬೆಸ್ಟ್.

ಇದನ್ನೂ ಓದಿ: ಎದೆ ತುಂಬಿ ಹಾಡುವೆನು ಸೂರ್ಯಕಾಂತ್​ ಕರೆಗೆ ಓಗೊಟ್ಟ ಸಿಎಂ.. ಊರಿಗೆ ಬಂತು ಬಸ್​

Source: newsfirstlive.com Source link