ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಓವರ್​ ಟೇಕ್ ಮಾಡಲು ಹೋಗಿ ಇಬ್ಬರು ಸಾವು

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಓವರ್​ ಟೇಕ್ ಮಾಡಲು ಹೋಗಿ ಇಬ್ಬರು ಸಾವು

ಬೆಂಗಳೂರು: ನಗರದಲ್ಲಿ ಮತ್ತೊಂದು ಬೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಕಾರ್ ಮತ್ತು ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಬೊಮ್ಮನಹಳ್ಳಿ -ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಫ್ಲೈ ಮೇಲೆ ಚಲಿಸುವಾಗ ಅಪಘಾತ ನಡೆದಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಬ್ರಿಡ್ಜ್ ಮೇಲಿನ ಡಿವೈಡರ್​ಗೆ ಕಾರು ಮತ್ತು ಬೈಕ್ ಗುದ್ದಿವೆ. ಪ್ಲೈ ಓವರ್ ಮೇಲೆ ಕಾರು ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ದೇಹಗಳು ಛಿದ್ರವಾಗಿವೆ. ಪ್ಲೈ ಓವರ್ ಮೇಲೆ ಕಾರು ಕೂಡ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರರೂ ಸಹ ಭೇಟಿ ನೀಡಿದ್ದಾರೆ.

Source: newsfirstlive.com Source link