ಮೈಸೂರಿನಲ್ಲಿ ನೆಲಸಮವಾದ ದೇವಾಲಯದ ಇತಿಹಾಸವೇನು..? ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ

ಮೈಸೂರಿನಲ್ಲಿ ನೆಲಸಮವಾದ ದೇವಾಲಯದ ಇತಿಹಾಸವೇನು..? ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ

ಮೈಸೂರು: ನಂಜನಗೂಡು ದೇವಾಲಯವನ್ನು ನೆಲಸಮ ಮಾಡಿದ್ದರ ಬಗ್ಗೆ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ಒಂದೆಡೆ ಸಮರ್ಥನೆ ಮಾಡಿಕೊಳ್ತಿದ್ರೆ ಸ್ಥಳೀಯ ನಾಯಕರು ಏಕಾಏಕಿ ದೇವಸ್ಥಾನ ನೆಲಸಮ ಮಾಡಿದ್ದರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ನೆಲಸಮವಾದ ದೇವಸ್ಥಾನದ ಹಿಂದಿನ ಇತಿಹಾಸವೇನು..?  

ಮಹದೇವಮ್ಮ ದೇಗುಲ ಗಂಗರು, ಚೋಳರು, ಹೊಯ್ಸಳರ ಕಾಲದ ಪುರಾತನ ದೇವಾಲಯ. ಈ ಹಿಂದೆ ಹುಚ್ಚಗಣಿ ಗ್ರಾಮವನ್ನ ಹುಂಡಿ ಗ್ರಾಮ ಎಂದು ಕರೆಯಲಾಗುತ್ತಿತ್ತು. ವಕ್ಕಲಿಗ ಮತ್ತು ಕುರುಬ ಸಮುದಾಯದ 30 ಮನೆಗಳಿದ್ದವು. ಹರದನಹಳ್ಳಿ ಹುಚ್ಚಗನಿ ಗ್ರಾಮದ ನಡುವೆ ಈ ದೇವಾಲಯವಿದ್ದು. ಪೂರ್ವಜರು ವೀರಗಲ್ಲುಗಳಿಗೆ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದರಂತೆ. ಸುಮಾರು ನೂರು ವರ್ಷಗಳ ಹಿಂದೆ‌ ನರಸಿಂಹೇಗೌಡ, ಜವರೇಗೌಡ ಗ್ರಾಮದ‌ ಮುಖ್ಯಸ್ಥರು 10X10 ಅಡಿ ದೇವಾಲಯವನ್ನ ನಿರ್ಮಾಣ ಮಾಡಿದ್ದರಂತೆ. 1995 ರಲ್ಲಿ ಅಕ್ಕಪಕ್ಕದ ಗ್ರಾಮಸ್ಥರೆಲ್ಲಾ ಸೇರಿ ಹಣ ಸಂಗ್ರಹಿಸಿ 40 ಲಕ್ಷ ರೂ ವೆಚ್ಚದಲ್ಲಿ ದೇವಾಲಯವನ್ನ ಜೀರ್ಣೋದ್ಧಾರ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರು ದೇವಸ್ಥಾನ ನೆಲಸಮ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು..?

ದೇವಾಲಯದ ಮುಂಭಾಗ ಮತ್ತು ಹಿಂಭಾಗ ರಸ್ತೆ ಹಾದು‌ಹೋಗಿತ್ತು. ಗುಜರಾತ್‌ನಲ್ಲಿ ಹೈವೆ ಯೋಜನೆಗೆ ದರ್ಗಾ ಅಡ್ಡಿಯಾದಾಗ ಸುಪ್ರಿಂಕೋರ್ಟ್ ರಾಜ್ಯಸರ್ಕಾರಗಳಿಂದ ವರದಿ ಕೇಳಿತ್ತು. ಯಾವ ಯಾವ ದೇವಾಲಯಗಳು ಅಡ್ಡಿಯಾಗುತ್ತವೆ. ಯಾವ ಯಾವ ದೇಗುಲಗಳನ್ನ ಶಿಫ್ಟ್ ಮಾಡಬಹುದು. ಯಾವ ಯಾವ ದೇವಾಲಯಗಳನ್ನ ಸಕ್ರಮ ಮಾಡಬಹುದು ಅಂತ ಪಟ್ಟಿ ಮಾಡಿ ವರದಿ ನೀಡುವಂತೆ ಕೇಳಿತ್ತು.

2009 ರಲ್ಲಿ ಅಧಿಕಾರಿಗಳು ಸರ್ವೆ ಮಾಡಿ ದೇವಾಲಯಗಳ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದರು.2011 ರಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಆದೇಶದಂತೆ ಸಕ್ರಮ ಮಾಡಬಹುದಾದ, ತೆರವು ಮಾಡಬಹುದಾದ ದೇವಾಲಯಗಳ ಬಗ್ಗೆ ತಹಶೀಲ್ದಾರ್‌ಗಳು ವರದಿ ನೀಡಿದ್ದರು. ಅದರಂತೆ ಸ್ಥಳ ಪರಿಶೀಲನೆ ನಡೆಸಿದ ನಂಜನಗೂಡಿನ ಅಂದಿನ ತಹಶಿಲ್ದಾರ್  ಹುಚ್ಚಗನಿ ಗ್ರಾಮದ ಮಹದೇವಮ್ಮ ದೇವಾಲಯವನ್ನ 150-200 ವರ್ಷ ಹಳೆಯದಾಗಿದೆ. ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದು ಯಾವುದೇ ತಿರುಗಾಡುವ ರಸ್ತೆಯಲ್ಲಿಲ್ಲದ ಕಾರಣ ಅಧಿಕೃತಗೊಳಿಸಬಹುದು ಎಂದು ವರದಿ ನೀಡಿದ್ದರಂತೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ದೇವಾಲಯ ಸಕ್ರಮವಾಗಿರಲಿಲ್ಲ ಎನ್ನಲಾಗಿದೆ.

ಇದೀಗ ಸೆಪ್ಟೆಂಬರ್ 8 ರ ಮುಂಜಾನೆ ನಸುಕಿನ ಜಾವದಲ್ಲಿ ತಾಲ್ಲೂಕು ಆಡಳಿತ‌ ದೇವಾಲಯ ಡೆಮಾಲಿಷ್ ಮಾಡಿದೆ ಎಮದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Source: newsfirstlive.com Source link