ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದವನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದವನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಚಾಮರಾಜನಗರ: ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಲೈಂಗಿಕ‌ ದೌರ್ಜನ್ಯ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಆಗಸ್ಟ್ 2018 ರಲ್ಲಿ ಘಟನೆ ನಡೆದಿತ್ತು.. ಪ್ರೀತಿಸುತ್ತೇನೆಂದು ಅಪ್ರಾಪ್ತೆ ಬಾಲಕಿ ಕರೆದುಕೊಂಡು ಹೋಗಿದ್ದ ಆರೋಪಿ ಚಂದ್ರಶೇಖರ್.. ಕೆಲವು ಕಾಲ ಆಕೆಯೊಂದಿಗೇ ವಾಸವಿದ್ದ. ಚಂದ್ರು ಹಾಗು ಅಪ್ರಾಪ್ತೆ ಬಾಲಕಿಗೆ ಮಹಿಳೆಯೊಬ್ಬಳು ಆಶ್ರಯ‌ ನೀಡಿದ್ದಳು.. ಅಪ್ರಾಪ್ತೆ ಬಾಲಕಿಯ ತಾಯಿಯಿಂದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

114, 341, 363, 366, 368, 376 ಐಪಿಸಿ ಹಾಗೂ ಪೋಕ್ಸೋ ಕಾಯ್ದೆ ಕಲಂ 4,8,12,17 ರಡಿಯಲ್ಲಿ ಪೊಲೀಸರಿಂದ ದೋಷರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ವಾದ ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು‌ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನ್ ಪುರಿ.. ಆರೋಪಿ A1 ಚಂದ್ರುಗೆ 20 ವರ್ಷ‌ ಕಠಿಣ ಶಿಕ್ಷೆ, 6 ಲಕ್ಷದ 25 ಸಾವಿರ ದಂಡ ವಿಧಿಸಿದ್ದಾರೆ. ಅಪ್ರಾಪ್ತೆಗೆ ಆಶ್ರಯ‌ ನೀಡಿದ್ದ ಆರೋಪಿ A2 ಮಹಿಳೆಗೆ 5 ವರ್ಷ ಶಿಕ್ಷೆ, 2 ಲಕ್ಷ ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 7.5 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಲಾಗಿದೆ. ಸರ್ಕಾರದ ಪರವಾಗಿ ವಕೀಲ ಕೆ.ಯೋಗೇಶ್ ವಾದ‌‌ ಮಂಡಿಸಿದ್ದರು.

Source: newsfirstlive.com Source link