ಕರೀನಾ ಕೈ ತಪ್ಪಿದ ಸೀತೆ ಪಾತ್ರದಲ್ಲಿ ನಟಿ ಕಂಗನಾ

ಮುಂಬೈ: ಕರೀನಾ ಕೈ ತಪ್ಪಿದ ಸೀತೆ ಪಾತ್ರದಲ್ಲಿ ನಟಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ತಲೈವಿ ಯಶಸ್ಸಿನ ಖುಷಿಯಲ್ಲಿರುವಾಗಲೇ ನಟಿ ಕಂಗನಾ ರಣಾವತ್ ಮತ್ತೊಂದು ಚಿತ್ರದ ಘೋಷಣೆಯನ್ನು ಮಾಡಿದ್ದಾರೆ.

ದಿ ಇನ್‍ಕಾರ್ನೇಷನ್ ಸೀತಾ ಚಿತ್ರದಲ್ಲಿ ಸೀತಾ ಮಾತೆ ಪಾತ್ರ ಅಭಿನಯಿಸಲು ಅವರು ಸಜ್ಜಾಗಿದ್ದು, ತಮ್ಮ ಹೊಸ ಸಿನಿಮಾ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಅಧಿಕೃತ ಪಡಿಸಿದ್ದಾರೆ.ಮಣಿಕರ್ಣಿಕಾ- ದಿ ಕ್ಷೀನ್ ಆಫ್ ಝಾನ್ಸಿ, ತಲೈವಿ ಅಂತ ವಿಶೇಷ ಪಾತ್ರಗಳಲ್ಲಿ ಮಿಂಚಿರುವ ನಟಿ ಕಂಗನಾ ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಅಲೌಕಿಕ್ ದೇಸಾಯಿ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ:
ಬಿಕಿನಿಯಲ್ಲಿ ಸಾರಾ ಅಲಿ ಖಾನ್ ಸಖತ್ ಹಾಟ್

 

View this post on Instagram

 

A post shared by Kangana Thalaivii (@kanganaranaut)

ವಿಶೇಷ ಎಂದರೆ ಈ ಚಿತ್ರದ ಕಥೆಯನ್ನು ಕೆ.ವಿ ವಿಜಯೇಂದ್ರ ಪ್ರಸಾದ್ ಬರೆತ್ತಿದ್ದಾರೆ. ಈಗಾಗಲೇ ಬಾಹುಬಲಿ, ಮಗಧೀರದಂತಹ ಹಿಟ್ ಚಿತ್ರ ನೀಡಿರುವ ಅವರ ಬತ್ತಳಿಕೆಯಲ್ಲಿ ಈಗ ಸೀತೆ ಹೊರ ಬರುತ್ತಿದ್ದಾಳೆ.ಈ ಹಿಂದೆ ಸೀತೆ ಪಾತ್ರಕ್ಕೆ ನಟಿ ಕರೀನಾ ಕಪೂರ್ ಹೆಸರು ಕೇಳಿ ಬಂದಿತ್ತು. ಆದರೆ, ಕರೀನಾ ಸೀತೆ ಪಾತ್ರ ನಿರ್ವಹಣತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಕರೀನಾ ದುಬಾರಿ ಸಂಭಾವನೆ ಕೇಳಿದ್ದರು. ಬಳಿಕ ಕೆವಿ ವಿಜಯೇಂದ್ರ ಅವರೇ ಸೀತೆಯ ಪಾತ್ರಕ್ಕೆ ನಟಿ ಕಂಗನಾ ಅವರನ್ನು ಆಯ್ಕೆ ಮಾಡಿದ್ದರು. ಈ ಸಂಬಂಧ ಚಿತ್ರತಂಡದೊಂದಿಗೆ ನಟಿ ಕಂಗನಾ ಜೊತೆ ಮಾತನಾಡಿದ್ದಾರೆ.

 

View this post on Instagram

 

A post shared by Kangana Thalaivii (@kanganaranaut)

ಸದ್ಯ ಕರೀನಾ ಕಪೂರ್ ಕೈ ತಪ್ಪಿದ ಪಾತ್ರ ನಟಿ ಕಂಗನಾ ಪಾಲಾಗಿದೆ. ಚಿತ್ರ ತಂಡ ಕೂಡ ನಟಿ ಕಂಗನಾರನ್ನು ಸೀತೆ ಪಾತ್ರಕ್ಕೆ ಅಂತಿಮಗೊಳಿಸಿದ್ದು, ಅವರ ಪಾತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಮೂಡಿದೆ.

Source: publictv.in Source link