‘ನನ್ನ ಬಟ್ಟೆ ಮುಟ್ಟಬೇಡಿ’- ತಾಲಿಬಾನ್​​ಗಳ ವಿರುದ್ಧ ಅಫ್ಘಾನ್​​ ಮಹಿಳೆಯರ ಆಂದೋಲನ

‘ನನ್ನ ಬಟ್ಟೆ ಮುಟ್ಟಬೇಡಿ’- ತಾಲಿಬಾನ್​​ಗಳ ವಿರುದ್ಧ ಅಫ್ಘಾನ್​​ ಮಹಿಳೆಯರ ಆಂದೋಲನ

ಅಫ್ಘಾನ್​ನಲ್ಲಿ ಮಹಿಳೆಯರು ಹೊಸ ದಂಗೆ ಆರಂಭಿಸಿದ್ದಾರೆ. ತಾಲಿಬಾನ್​ಗಳ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ನನ್ನ ಬಟ್ಟೆಗಳನ್ನ ಮುಟ್ಟಬೇಡಿ ಅನ್ನೋ ಮೂಲಕ ಆನ್​ಲೈನ್​ ವಾರ್ ಶುರು ಮಾಡಿದ್ದಾರೆ. ತಾಲಿಬಾನ್​ ಹೇಡಿಗಳ ವಿರುದ್ಧ ಅಫ್ಘಾನ್​ ನಾರಿಯರು ಸಿಡಿದೆದ್ದಿದ್ದಾರೆ.

ಜಸ್ಟ್​ ಒಂದೇ ಒಂದು ಫೋಟೋ.. ಅಫ್ಘಾನ್​ ನಾರಿಯರ ಶಕ್ತಿ ಏನು ಅನ್ನೋದನ್ನ ಇಡೀ ಜಗತ್ತಿಗೆ ಸಾರಿತ್ತು. ತಾಲಿಬಾನ್​ ಬಂದೂಕಿಗೆ ಬೆದರುವ ಪ್ರಶ್ನೆ ಇಲ್ಲ ಅನ್ನೋ ಸಂದೇಶವನ್ನ ಉಗ್ರರ ಕ್ಯಾಂಪ್​​ಗೆ ತಲುಪುವಂತೆ ಮಾಡಿತ್ತು.. ಎಸ್.. ತಾಲಿಬಾನ್​ ಹೇಡಿಯೊಬ್ಬ ಪ್ರತಿಭಟನಾ ನಿರತ ಮಹಿಳೆಯೊಬ್ಬರ ಎದೆಗೆ ಬಂದೂಕಿನಲ್ಲಿ ಗುರಿ ಇಟ್ಟು, ಆ ಮಹಿಳೆಯನ್ನ ಹೆದರಿಸುವ ಪ್ರಯತ್ನ ಮಾಡಿದ್ದಾನೆ. ಆದ್ರೆ ಉಗ್ರ ಎದೆಗೆ ಬಂದೂಕಿನಿಂದ ಗುರಿ ಇಟ್ರೂ ಕೂಡ, ಆ ಗಟ್ಟಿಗಿತ್ತಿ ಮಾತ್ರ ಒಂದೇ ಒಂದು ಹೆಜ್ಜೆ ಇಟ್ಟಿಲ್ಲ. ಬದಲಾಗಿ ಕನ್ನಡಕ ಧರಿಸಿ , ಅದೇನ್​ ಶೂಟ್​ ಮಾಡ್ತಿಯೋ ಮಾಡು ಅನ್ನೋ ಹಾಗೆ ಗುರಿ ಇಟ್ಟ ಉಗ್ರನ ಕಡೆಗೆ ಹೆಜ್ಜೆ ಹಾಕಿದ್ದಾರೆ.

ಎಸ್… ಈ ಫೋಟೋ ಜಗತ್ತಿನೆಲ್ಲೆಡೆ ಬಾರಿ ಸಂಚಲನ ಸೃಷ್ಟಿಸಿತ್ತು.. ಅಲ್ಲದೇ ಅಫ್ಘಾನ್​ ನಾರಿಯರ ತಾಕತ್ತು ಏನ್ ಅನ್ನೋದ್ನನ ಜಗತ್ತಿನೆದುರು ಸಾರಿತ್ತು. ಇದೀಗ ತಾಲಿಬಾನ್​​ಗಳ ನಾಡಲ್ಲಿ ಮತ್ತೆ ಅಫ್ಘಾನ್​ ಮಹಿಳೆಯರು ಹೊಸ ದಂಗೆ ಆರಂಭಸಿದ್ದಾರೆ. ಮನೆಯಲ್ಲಿದ್ದ ಮಹಿಳೆಯರು ಬೀದಿಯಲ್ಲಿ ನಿಂತು ತಾಲಿಬಾನ್​​ ವಿರುದ್ಧ ಹೊಸ ಅಸ್ತ್ರ ಮೊಳಗಿಸಿದ್ದಾರೆ..

“ನನ್ನ ತಾಯಿ ಇದೇ ರೀತಿಯ ಬಟ್ಟೆ ಧರಿಸುತ್ತಿದ್ದರು, ಈಗ ನಾನು, ಮುಂದೆ ನನ್ನ ಮಗಳು ಹೀಗೆಯೇ ಬಟ್ಟೆ ಧರಿಸುತ್ತಾಳೆ… ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆದ್ರೆ ನಾವು ಸಹಿಸಲ್ಲ”. ಎಸ್​… ಇದು ತಾಲಿಬಾನ್​ ವಿರುದ್ಧ ಅಫ್ಘಾನ್​ ಮಹಿಳೆಯರು ರಣಕಹಳೆ ಮೊಳಗಿಸಿದ ರೀತಿ..

ಅಫ್ಘಾನ್ ಕ್ರೂರಿ ತಾಲಿಬಾನ್​ಗಳ ಕಪಿಮುಷ್ಟಿಗೆ ಬಿದ್ದಿವೆ. ಅಫ್ಘಾನ್​ ಚಿತ್ರಣವೇ ಬದಲಾಗಿ ಹೋಗಿವೆ. ಮಹಿಳೆಯರ ತಮ್ಮ ಮನೆಗ ಅಂಗಳಲ್ಲೂ ಕಾಲಿಡಲು ಭಯ ಪಡ್ತಿದ್ರು.. ತಾಲಿಬಾನ್​​ಗಳ ದಮನಕಾರಿ ಆಡಳಿತವನ್ನ ನೋಡಿ ನಡುಗುತ್ತಿದ್ರು. ಆದ್ರೆ ಇದೀಗ ಮತ್ತೆ ಮಹಿಳೆಯರು ಸಿಡಿದೆದ್ದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಮಹಿಳೆಯರ ಮೇಲೆ ಹತ್ಯೆ, ಅತ್ಯಾಚಾರ, ಹಲ್ಲೆ ಸೇರಿದಂತೆ ದಿನದಿಂದ ದಿನಕ್ಕೆ ಶೋಷಣೆ ಹೆಚ್ಚಾಗುತ್ತಿವೆ. ಅಫ್ಘಾನ್ ತಾಲಿಬಾನ್​ಗಳ ತೆಕ್ಕೆಗೆ ಜಾರಿದ ಕೆಲವೇ ಸಮಯದಲ್ಲಿ ಅಫ್ಘಾನ್​ನಲ್ಲಿ ಕೆಲ ಮಹಿಳೆಯರು ಹತ್ಯೆ ಮಾಡಲಾಗಿತ್ತು. ಇನ್ನೂ ಕೆಲ ಮಹಿಳೆಯರು ತಮ್ಮ ಕೆಲಸಗಳನ್ನ ಕಳೆದುಕೊಂಡು ಮನೆ ಸೇರ್ಕೊಂಡು ಬಿಟ್ಟಿದ್ರು. ಇನ್ನೂ ಕೆಲ ಮಹಿಳೆಯರು ಅಫ್ಘಾನ್​ ಸೇಫ್​ ಅಲ್ಲ ಕಾರಣಕ್ಕೆ ದೇಶವೇ ತೊರೆದು ಓಡಿ ಹೋಗಿದ್ರು.

ಆದ್ರೆ ಇದೀಗ ಕಾಲ ಬದಲಾಗಿವೆ.. ಮಹಿಳೆಯರ ಸಹನೆಯ ಕಟ್ಟೆ ಹೊಡೆದು ಹೋಗಿದೆ. ಪ್ರತಿಭಟನೆಯ ಕಿಚ್ಚು ಜೋರಾಗಿದೆ. ಬೀದಿ ಬೀದಿಯಲ್ಲಿ ನಿಂತು ನಾರಿಯರು ತಾಲಿಬಾನ್​ಗಳ ವಿರುದ್ಧ ಪ್ರತಿಭಟನೆಯ ಧ್ವನಿ ಮೊಳಗಿಸಿದ್ದಾರೆ. ತಾಲಿಬಾನ್​ ಬಂದೂಕಿಗೆ ಬೆದರದೆ ಬೀದಿಯಲ್ಲಿ ನಿಂತು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಷ್ಟು ದಿನ ತಾಲಿಬಾನ್​ಗಳ ಬಂದೂಕಿಗೆ ಬೆದರಿ ಮನೆಯೊಳಗಡೆ ಬಂಧಿಯಾಗಿದ್ದ ನಾರಿಯರು ತಾಲಿಬಾನ್​ ಬಂದೂಕಿನ ಎದುರು ನಿಂತು ಘರ್ಜನೆ ಶುರು ಮಾಡಿದ್ದಾರೆ.

ಅಫ್ಘಾನ್ ಮಹಿಳೆಯರಿಂದ ಆನ್​ಲೈನ್​ ವಾರ್
‘ನನ್ನ ಬಟ್ಟೆಗಳನ್ನುಮುಟ್ಟಬೇಡಿ’ ಎಂದ ಮಹಿಳೆಯರು

ಇದೀಗ ಆನ್​ಲೈನ್​ನಲ್ಲಿ ತಾಲಿಬಾನ್​ ವಿರುದ್ಧ ಪ್ರತಿರೋಧದ ಸುನಾಮಿ ಎಬ್ಬಿಸಿದ್ದಾರೆ. ನನ್ನ ಬಟ್ಟೆಗಳನ್ನು ಮುಟ್ಟಬೇಡಿ ಎಂದು ಮಹಿಳೆಯರು ತಾಲಿಬಾನ್​ಗಳಿಗೆ ಆನ್​ಲೈನ್​​ನಲ್ಲಿ ಸವಾಲು ಹಾಕಿದ್ದಾರೆ. ಮಾಡೆರ್ನ್​ ಡ್ರೆಸ್​ಗಳನ್ನ ಧರಿಸಿರುವ ಫೋಟೋಗಳನ್ನ ಶೇರ್ ಮಾಡುವ ಮೂಲಕ ಮಹಿಳೆಯರು ತಾಲಿಬಾನ್​ ವಿರುದ್ಧ ಹೊಸ ದಂಗೆ ಆರಂಭಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​ಗಳು ಮಹಿಳೆಯರ ಮೇಲೆ ಕರಾಳ ನಿರ್ಬಂಧ ಹೇರಿದ್ರು. ಮಹಿಳೆಯರು ಹಾಕುವ ಬಟ್ಟೆಗಳು ಮೇಲೂ ನಿರ್ಬಂಧ ವಿಧಿಸಿದ್ರು. ಆದ್ರೆ ಎಲ್ಲದಕ್ಕೂ ಒಂದು ಲಿಮಿಟ್ಸ್​​​ ಅನ್ನೋದು ಇರುತ್ತಲ್ವಾ..? ಇಷ್ಟು ದಿನ ತಾಲಿಬಾನ್​ ರಕ್ಕಸರಿಗೆ ಹೆದರಿ ಕೂತಿದ್ದ ಅಫ್ಘಾನ್​ ನಾರಿಯರು ಇದೀಗ ಹೊಸ ಯುದ್ಧ ಶುರು ಮಾಡ್ಕೊಂಡು ಬಿಟ್ಟಿದ್ದಾರೆ. ಆನ್​ಲೈನ್​ನಲ್ಲಿ ವಾರ್​ ಶುರುಮಾಡಿದ್ದಾರೆ. ನಮ್ಮ ಬಟ್ಟೆ ನಮ್ಮ ಹಕ್ಕು ಅನ್ನೋ ಮೂಲಕ ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸಿದ್ದಾರೆ.

ಟ್ವಿಟರ್​ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ DoNotTouchMyClothes “ನನ್ನ ಬಟ್ಟೆಗಳನ್ನು ಮುಟ್ಟಬೇಡಿ” ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಹೊಸ ಸಮರ ಶುರು ಮಾಡಿದ್ದಾರೆ. ಅಲ್ಲದೇ ಮಾಡೆರ್ನ್​ ಡ್ರೆಸ್ ತೊಟ್ಟ ಫೋಟೋಗಳನ್ನ ಶೇರ್ ಮಾಡುವ ಮೂಲಕ ” ನಾವು ತಾಲಿಬಾನ್​ಗಳ ಗುಲಾಮರಾಗಲ್ಲ” ಅನ್ನೋ ಸಂದೇಶ ಸಾರಿದ್ದಾರೆ.

ಸದಾ ಲಿಂಗ ತಾರತಮ್ಯವನ್ನೇ ಉಸಿರಾಡುತ್ತಿದ್ದ ತಾಲಿಬಾನ್​ಗಳು ಅಲ್ಲಿಯ ಮಹಿಳೆಯರ ಮೇಲೆ ಉಗ್ರ ನಿರ್ಬಂಧ ವಿಧಿಸಿದ್ರು. ಕರಾಳ ಕಾನೂನಿನ ಮೂಲಕ ಮಹಿಳೆಯರ ಸ್ವಾತಂತ್ರ್ಯವನ್ನ ಹತ್ತಿಕ್ಕಿದ್ರು. ಬುರ್ಖಾ ಧರಿಸದೇ ಹೊರಗಡೆ ಬಂದ ಮಹಿಳೆಯರನ್ನ ನಡು ಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ರು. ಆದ್ರೆ ಇದೀಗ ಮಹಿಳೆಯರು ಸಿಡಿದು ನಿಂತಿರೋದ್ರಿಂದ ತಾಲಿಬಾನ್​ಗಳು ಪತರುಗುಟ್ಟಿದ್ದಾರೆ.

ಯಾವ ಬೀದಿಯಲ್ಲಿ ತಾಲಿಬಾನ್​ಗಳು ಹೆಣ್ಣುಮಕ್ಕಳನ್ನ ಹತ್ಯೆ ಮಾಡಲಾಯ್ತೋ ಇಂದು ಅದೇ ಬೀದಿಯಲ್ಲಿ ನಿಂತು ತಾಲಿಬಾನ್​​ಳಿಗೆ ಸವಾಲು ಹಾಕುತ್ತಿದ್ದಾರೆ. ಪ್ರತಿಭಟನೆಯ ಕಿಚ್ಚು ಜೋರಾಗಿದೆ.. ಇಷ್ಟು ದಿನ ಮನದಲ್ಲಿ ಬೂದಿಮುಚ್ಚಿದ್ದ ಕೆಂಡದಂತ್ತಿದ್ದ ಕೋಪ ಇದೀಗ ಪ್ರತಿಭಟನೆಯ ಮೂಲಕ ಹೊರ ಹೊಮ್ಮಿದೆ. ಅಲ್ಲದೆ ಮಹಿಳೆಯರ ಈ ಆನ್​​ಲೈನ್​​ ವಾರ್​​ಗೆ ಹಲವು ಜನರು ಟ್ವಿಟ್ಟರ್​​ನಲ್ಲಿ ಬೆಂಬಲ ಸೂಚಿಸಿದ್ದಾರೆ..

“ONCE A TERR0RIST ALWAYS TERRORIST ಉಗ್ರ ಯಾವತ್ತಿಗೂ ಉಗ್ರನೇ , ಉಗ್ರನ ಕ್ರೌರ್ಯದ ಮನಸ್ಸು ಬದಲಾಗಲು ಸಾಧ್ಯವಿಲ್ಲ” ಇದು ಅಮೆರಿಕದ ವಿಶೇಷಾ ಕಾರ್ಯಾಚರಣೆಗಳ ಕಮಾಂಡರ್ ಬ್ರಿಗೇಡಿಯರ್​ ಜನರಲ್ ಡಾನ್ ಬೊಲ್ಡಾಕ್​ ಉಗ್ರರ ವಿರುದ್ಧ ಆಡಿರುವ ಮಾತುಗಳು.

ಡಾನ್ ಬೊಲ್ಡಾಕ್ ಈ ಮಾತು ತಾಲಿಬಾನ್​​ಗಳ ವಿಷ್ಯಾದಲ್ಲಿ ನೂರಕ್ಕೂ ನೂರರಷ್ಟು ಸತ್ಯ.. ನಾವು ಬದಲಾಗಿದ್ದೇವೆ,.. ಮಹಿಳೆಯರನ್ನ ಗೌರವಿಸುತ್ತೇವೆಂದು ಪುಂಗಿಯ ಸರಮಾಲೆಗಳನ್ನೇ ಸೃಷ್ಟಿಸಿದ್ದ ತಾಲಿಬಾನ್​ಗಳು ಮತ್ತೆ ಹಳೇಯ ಚಾಳಿಯನ್ನ ಮುಂದುವರೆಸುತ್ತಲೇ ಬಂದಿದ್ದಾರೆ.

ಅದ್ಯಾವಾಗ ಅಫ್ಘಾನ್​ನಲ್ಲಿ ದೊಡ್ಡಣ್ಣನ ಸೇನೆ ರಕ್ಷಣಾ ತಡೆಗೋಡೆ ನಿರ್ಮಿಸುತ್ತೋ, ಅಫ್ಘಾನ್​ನಲ್ಲಿ ಮಹಿಳೆಯರು ಕೂಡ ಬೀದಿ ಬೀದಿಯಲ್ಲಿ ಆರಾಮಾಗಿ ಓಡಾಡುತ್ತಿದ್ರು.. ಬುರ್ಖಾ ಹಾಕದೆ ನೆಮ್ಮದಿಯಾಗಿ ತಿರುಗಾಡುತ್ತಿದ್ರು.. ಆದ್ರೆ ಅಫ್ಘಾನ್​ ಮತ್ತೆ ತಾಲಿಬಾನ್​ ತೆಕ್ಕೆಗೆ ಜಾರುತ್ತಿದ್ದಂಗೆ ಮತ್ತೆ ಕರಾಳ ಯುಗ ಶುರುವಾಯ್ತು.. ಮಹಿಳೆಯರು ಮತ್ತೆ ಬುರ್ಖಾದೊಳಗೆ ಬಂಧಿಯಾಗುವಂತಾಯಿತು.

‘ಇಷ್ಟದ ಬಟ್ಟೆ ತೊಟ್ಟ ಮಹಿಳೆಯರನ್ನು ಬೆತ್ತಲೆ ಮಾಡಿ ಹೊಡೆಯುತ್ತಿದ್ದೀರಿ. ಹೀಗೆ ಮುಂದುವರೆದರೆ ನಮ್ಮ ಸಂಸ್ಕೃತಿಯನ್ನ ರಕ್ಷಣೇ ಮಾಡುತ್ತೀರಿ ಎಂದು ಟ್ವಿಟ್ಟರ್​ನಲ್ಲಿ ಜನರು ತಾಲಿಬಾನ್​ಗಳಿಗೆ ಗುಮ್ಮಿದ್ದಾರೆ.

blank

ತಾಲಿಬಾನಿಗಳಿಂದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಸಮಾಧಿ ಸೇರಿವೆ. ವಿಶ್ವವಿದ್ಯಾಲಯಗಳ ತರಗತಿಯಲ್ಲಿ ಪರದೆ ಎಳೆಯಲಾಗಿದೆ. ಪರದೆ ಹಿಂದೆ ಕೂತು ಪಾಠ ಕೇಳುವಂತಹ ದುಸ್ಥಿತಿ ಮಹಿಳೆಯರಿಗೆ ಒದಗಿದೆ. ಪದವಿ ತರಗತಿ ಒಳಗಡೆ ಕೂಡ, ವಿದ್ಯಾರ್ಥಿನಿಯರು ಮುಖದ ಬಹುಭಾಗ ಮುಚ್ಚಿಕೊಳ್ಳುವ ನಿಖಾಬ್​ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಾಲಿಬಾನ್ ಆದೇಶ ಹೊರಡಿಸಿದ್ದಾರೆ. ಒಂದೇ ತರಗತಿಯಲ್ಲಿ ಪುರುಷರು ಹಾಗೂ ಮಹಿಳೆಯರು ಕೂರುವಂತ್ತಿಲ್ಲವೆಂದು ಕಟ್ಟಾಜ್ಷೆ ಹೊರಡಿಸಿದ್ದಾರೆ. ಪರಿಣಾಮ ಮಹಿಳೆಯರು ಪರದೆಯ ಹಿಂದೆ ಅದೆಲ್ಲೋ ಮೂಲೆಯಲ್ಲಿ ಕೂತು ಪಾಠ ಕೇಳುವಂತಾಗಿದೆ.

1996 ರಿಂದ 2001 ರ ಸಮಯದಲ್ಲಿ ತಾಲಿಬಾನ್ ದಮನಕಾರಿ ಆಡಳಿತದಲ್ಲಿ ಅನುಭವಿಸಿದ್ದ ಕರಾಳ ದಿನಗಳನ್ನ ನೆನೆದು ಭಯಗೊಂಡಿರುವ ಮಹಿಳೆಯರು ಈ ಬಾರಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡ್ತಿದ್ದಾರೆ. ಪ್ರತಿಭಟನೆಯ ಮೂಲಕ ತಮ್ಮ ಹಕ್ಕುಗಳ ರಕ್ಷಣೆಗೆ ಪಣತೊಟ್ಟಿದ್ದಾರೆ.

ಈ ಹಿಂದೆ ತಾಲಿಬಾನ್​ಗಳು ವಿಧಿಸಿದ್ದ ಕಟ್ಟರ್ ಷರಿಯಾ ಕಾನೂನಡಿಯಲ್ಲಿ ಮಹಿಳೆಯರು ಶಿಕ್ಷಣಕ್ಕಾಗಿ, ಉದ್ಯೋಗ ಮಾಡುವಂತಿರ್ಲಿಲ್ಲ.. ಹೊರಗಡೆ ಏಕಾಂಗಿಯಾಗಿ ಓಡಾಡುವಂತಿರ್ಲಿಲ್ಲ..ಮಾಡೆಲ್ ಡ್ರೆಸ್​ಗಳನ್ನ ಧರಿಸುವಂತಿರಲಿಲ್ಲ.. ಇದೇ ಕಾನೂನನ್ನ ಮತ್ತೆ ಮುಂದುವರೆಸಲು ತಾಲಿಬಾನ್​ಗಳು ಪ್ಲಾನ್​ ಹಾಕ್ಕೊಂಡಿದ್ದಾರೆ. ಆದ್ರೆ ಅಫ್ಘಾನ್ ನಾರಿಯರು ಮಾತ್ರ ಪ್ರತಿರೋಧದ ಚಂಡಮಾರುತವನ್ನೇ ಎಬ್ಬಿಸಿ ಬಿಟ್ಟಿದ್ದಾರೆ.

ತಾಲಿಬಾನ್​​ಗಳಿಗೆ ಹೆದರಿ, ಅಮೆರಿಕ ಸೇನೆಯೇ ಡೆಡ್​ಲೈನ್​ಗೆ ಒಂದು ದಿನ ಮೊದ್ಲೆ ಜಾಗ ಖಾಲಿ ಮಾಡಿದ್ರೆ, ಅಫ್ಘಾನ್​ ಅಧ್ಯಕ್ಷರೇ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಇನ್ನೂ ಅಫ್ಘಾನ್​ ಸೇನೆಯೇ ತಾಲಿಬಾನ್​ ಎದುರು ಮಂಡಿವೂರಿದ್ರೂ ಕೂಡ ಮಹಿಳೆಯರು ಕಿಂಚಿತ್ತು ಭಯಗೊಂಡಿಲ್ಲ.. ಇದೀಗ ಮತ್ತೊಮ್ಮೆ ವಾರ್​​ ಶುರು ಮಾಡಿದ್ದಾರೆ. ಪಾಪಿಗಳ ನಾಡಲ್ಲಿ, ಉಗ್ರರ ಬೀದಿಯಲ್ಲಿ, ರಕ್ಕಸರ ಸನಿಹಯದಲ್ಲಿ ನಿಂತು ಅವರದ್ದೇ ವಿರುದ್ಧ ಹೊಸ ಮಾರುತವನ್ನೇ ಎಬ್ಬಿಸಿರುವ ಈ ಮಹಿಳೆಯರ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು.

ಮಹಿಳೆಯರು ನಾವು ತಾಲಿಬಾನ್​ಗಳ ಗುಲಾಮರಾಗಲ್ಲ ಅನ್ನೋ ಸಂದೇಶ ಸಾರಿದ್ದಾರೆ. ‘ನನ್ನ ಬಟ್ಟೆ ನನ್ನ ಹಕ್ಕು’ ಅನ್ನೋ ಮೂಲಕ ಹೊಸ ಚಂಡಮಾರುತವನ್ನೇ ಎಬ್ಬಿಸಿದ್ದಾರೆ. ಕ್ರೌರ್ಯದ ಮೂಲಕವೇ ಅಫ್ಘಾನ್​ನಲ್ಲಿ ಅಧಿಕಾರ ಹಿಡಿದಿರುವ ಈ ರಕ್ಕಸ ತಾಲಿಬಾನ್​ಳಿಗೆ ಇದೀಗ ಮಹಿಳೆಯರ ಹೋರಾಟವೇ ಹತ್ತಿಕ್ಕಲು ಅದ್ಯಾವ ಉಗ್ರ ರೂಪ ತಾಳುತ್ತಾರೋ ಅನ್ನೋ ಸಹಜ ಪ್ರಶ್ನೆ ಎಲ್ಲೆಡೆ ಮೂಡಿದೆ.

Source: newsfirstlive.com Source link