ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮುಂದೂಡುತ್ತಾ ಸರ್ಕಾರ..?

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮುಂದೂಡುತ್ತಾ ಸರ್ಕಾರ..?

ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ಸರ್ಕಾರ ಮುಂದಾಗಿದೆಯಂತೆ. ಈ ವಿಧೇಯಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆಗೆ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.

ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮರು ವಿಂಗಡಣೆ, ವಾರ್ಡ್, ಕ್ಷೇತ್ರಗಳ ಗಡಿ ಗುರುತಿಸುವಿಕೆಗಾಗಿ ಆಯೋಗ ರಚನೆಯಾಗಲಿದ್ದು ಸರ್ಕಾರ ನಿವೃತ್ತ ಸಿಎಸ್ ಅಥವಾ ಎಸಿಎಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಪಂಚಾಯತ್ ಚುನಾವಣೆಯನ್ನ ಮುಖ್ಯಮಂತ್ರಿ ಮುಂದೂಡ್ತಾರಾ ಎಂಬ ಪ್ರಶ್ನೆ ಉದ್ಘವಿಸಿದೆ.

Source: newsfirstlive.com Source link