ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ: ಕಳ್ಳರ ಕೈ ಕಟ್, ಅಕ್ರಮ ಸಂಬಂಧಕ್ಕೆ ಏನು ಶಿಕ್ಷೆ ಗೊತ್ತಾ?!

ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ: ಕಳ್ಳರ ಕೈ ಕಟ್, ಅಕ್ರಮ ಸಂಬಂಧಕ್ಕೆ ಏನು ಶಿಕ್ಷೆ ಗೊತ್ತಾ?!

ಕಾಬೂಲ್: ಅಫ್ಘಾನಿಸ್ತಾನಕ್ಕೆ ತಾಲಿಬಾನಿಗಳು ವಾಪಸ್ಸಾಗಿ ಸರ್ಕಾರ ರಚಿಸಲು ಮುಂದಾದ ಬೆನ್ನಲ್ಲೇ ಅಲ್ಲಿನ ಜನರಿಗೆ ಸದ್ಗುಣಗಳನ್ನ ಬಿತ್ತುವ ಸಚಿವಾಲಯದವನ್ನ ತೆರೆಯಲು ಮುಂದಾಗಿದ್ದಾರೆ. ಈ ಸಚಿವಾಲಯ ಶರಿಯಾ ಕಾನೂನನಿಂಥ ಕಠೋರ ನೀತಿಗಳನ್ನು ಹೊಂದಿದೆ.

ಈ ಸಚಿವಾಲಯದಡಿಯಲ್ಲಿ ಅಫ್ಘನ್ನರು ತಪ್ಪು ಮಾಡಿದರೆ ಇಂತಿಂಥದ್ದೇ ಶಿಕ್ಷೆಗಳನ್ನು ನೀಡಬೇಕೆಂದು ಪಟ್ಟಿ ಮಾಡಲಾಗಿದೆ. ನೈತಿಕ ಪೊಲೀಸರನ್ನು ಅಫ್ಘಾನಿಸ್ತಾನದ ಬೀದಿಗಳಲ್ಲಿ ಅಡ್ಡಾಡಲು ಬಿಟ್ಟು ಇವರಿಂದ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ತಾಲಿಬಾನಿಗಳು ಮುಂದಾಗಿದ್ದಾರೆ.

ತಾಲಿಬಾನಿಗಳು ನೀಡುವ ಶಿಕ್ಷೆ ಹೇಗಿರಲಿದೆ..?

  • ಉದ್ದೇಶಪೂರ್ವಕ ಕೊಲೆ ಮಾಡಿದವನನ್ನ ಹತ್ಯೆ ಮಾಡುವುದು.
  • ಉದ್ದೇಶರಹಿತ ಕೊಲೆಯಾಗಿದ್ದಲ್ಲಿ ಆತನಿಂದ ದಂಡ ವಸೂಲಿ ಮಾಡುವುದು.
  • ಕಳ್ಳತನ ಮಾಡಿದವರ ಕೈಗಳನ್ನು ಕತ್ತರಿಸುವುದು.
  • ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆಯುವುದು.
  • ಮಹಿಳೆ ಮತ್ತು ಪುರುಷ ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗಿದ್ದರೆ ಅವರನ್ನು ಸಾರ್ವಜನಿಕವಾಗಿ ಹತ್ಯೆಗೈಯ್ಯುವುದು. ಈ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳು ಒಂದೇ ರೀತಿಯಲ್ಲಿ ಸಾಕ್ಷಿ ಹೇಳಬೇಕು.
  • ಅಕಸ್ಮಾತ್ ಸಾಕ್ಷಿಗಳು ಹೇಳುವ ಸಾಕ್ಷಿಯಲ್ಲಿ ಓರ್ವ ವಿಭಿನ್ನ ಕಥೆ ಹೇಳಿದರೆ ಆರೋಪಿಗಳಿಗೆ ಶಿಕ್ಷೆಯಿಲ್ಲ.

Source: newsfirstlive.com Source link