ಬಸವನಗುಡಿಯಿಂದ ಕಾಂಗ್ರೆಸ್​ MLC ಯು.ಬಿ ವೆಂಕಟೇಶ್ ಕಣಕ್ಕೆ​​​; ಬ್ರಾಹ್ಮಣರ ಒಲೈಕೆಗೆ ಸರ್ಕಸ್​​..!

ಬಸವನಗುಡಿಯಿಂದ ಕಾಂಗ್ರೆಸ್​ MLC ಯು.ಬಿ ವೆಂಕಟೇಶ್ ಕಣಕ್ಕೆ​​​; ಬ್ರಾಹ್ಮಣರ ಒಲೈಕೆಗೆ ಸರ್ಕಸ್​​..!

ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಕಂಟೆಸ್ಟ್​ ಮಾಡಲು ಪ್ಲಾನ್​​ ಮಾಡಿಕೊಂಡಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಈಗಾಗಲೇ ಮಾಜಿ ಸಿಎ ಸಿದ್ದರಾಮಯ್ಯ ಅವರನ್ನು ಕರೆಸಿ ಬಡವರಿಗೆ ಫುಡ್​​ ಕಿಟ್​​​ ವಿತರಣೆ ಮಾಡಿರುವ ಯು.ಬಿ ವೆಂಕಟೇಶ್​​​ ಈಗ ಕಲಾಪದಲ್ಲಿ ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತಿದ್ದಾರೆ.

ವಿಧಾನ ಪರಿಷತ್‌ ಕಲಾಪದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಯು.ಬಿ ವೆಂಕಟೇಶ್, ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ ಬಹುಕೋಟಿ ವಂಚನೆ ವಿಚಾರ ಪ್ರಸ್ತಾಪಿಸಿದ್ದಾರೆ. ಬಸವನಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ನಾಗರಿಕರಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಅದರಲ್ಲೂ ಬ್ರಾಹ್ಮಣ ಸಮುದಾಯದವರೇ ಹೆಚ್ಚಾಗಿ ಠೇವಣಿ ಇಟ್ಟಿದ್ದು, ಈಗ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಂದು ಕಲಾಪದ ಗಮನ ಸೆಳೆದರು.

ಇನ್ನು, ಸಹಕಾರ ಇಲಾಖೆ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದ ಯು.ಬಿ ವೆಂಕಟೇಶ್​​​​, ಕಲಾಪದಲ್ಲಿ ಬ್ಯಾಂಕ್ ಅವ್ಯವಹಾರದಲ್ಲಿ ಸರ್ಕಾರ ಕೂಡ ಶಾಮೀಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ‘ನನ್ನ ಬಟ್ಟೆ ಮುಟ್ಟಬೇಡಿ’- ತಾಲಿಬಾನ್​​ಗಳ ವಿರುದ್ಧ ಅಫ್ಘಾನ್​​ ಮಹಿಳೆಯರ ಆಂದೋಲನ

ಇಷ್ಟು ದಿನ ಸುಮ್ಮನಿದ್ದ ಯು.ಬಿ ವೆಂಕಟೇಶ್ ಈಗಿನಿಂದಲೇ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿಕೊಂಡಿದ್ದಾರೆ. ಇದರ ಭಾಗವಾಗಿ ಬಸವನಗುಡಿ ಕ್ಷೇತ್ರದ ಬ್ರಾಹ್ಮಣರನ್ನು ಸೆಳೆಯಲು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗುತ್ತಿದೆ.

Source: newsfirstlive.com Source link