ಕಾಂಗ್ರೆಸ್​ ಜತೆ JDS ಮೈತ್ರಿ ಬಗ್ಗೆ ಸಿದ್ದರಾಮಯ್ಯ ಮಾತಾಡಲಿ ಎಂದು ಪಟ್ಟು; HDK ಹೀಗೆ ಹಠಕ್ಕೆ ಬಿದ್ದಿದ್ಯಾಕೆ?

ಕಾಂಗ್ರೆಸ್​ ಜತೆ JDS ಮೈತ್ರಿ ಬಗ್ಗೆ ಸಿದ್ದರಾಮಯ್ಯ ಮಾತಾಡಲಿ ಎಂದು ಪಟ್ಟು; HDK ಹೀಗೆ ಹಠಕ್ಕೆ ಬಿದ್ದಿದ್ಯಾಕೆ?

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ವಿಚಾರದಲ್ಲಿ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಹಾಗಾಗಿಯೇ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಳ್ಳಿ ಎಂದು ಮಾತಾಡಿದರೂ ರಾಜ್ಯ ನಾಯಕರೇ ನಮ್ಮೊಂದಿಗೆ ಚರ್ಚಿಸಲಿ ಎಂದು ಎಚ್​​ಡಿಕೆ ಪಟ್ಟು ಹಿಡಿದಿದ್ದಾರೆ.

ಮಲ್ಲಿಕಾರ್ಜುನ್​​ ಖರ್ಗೆ ಮನವಿ ಕಾಂಗ್ರೆಸ್​ ಅಭಿಪ್ರಾಯ ಆಗುವುದಿಲ್ಲ. ಇವರದ್ದು ಸ್ಥಳೀಯ ಮನವಿ, ಹಾಗಾಗಿ ರಾಜ್ಯ ನಾಯಕರೇ ನಮ್ಮ ಬಳಿ ಚರ್ಚಿಸಲಿ ಎಂದು ಬಹಿರಂಗವಾಗಿಯೇ ಎಚ್​ಡಿಕೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಎಚ್​ಡಿಕೆ ಬಳಿ ಮಾತಾಡಲಿ ಎಂಬ ಸಂದೇಶ ಸಾರಿದಂತೆ ಕಾಣುತ್ತಿದೆ.

ಇದನ್ನೂ ಓದಿ: ಬಸವನಗುಡಿಯಿಂದ ಕಾಂಗ್ರೆಸ್​ MLC ಯು.ಬಿ ವೆಂಕಟೇಶ್ ಕಣಕ್ಕೆ​​​; ಬ್ರಾಹ್ಮಣರ ಒಲೈಕೆಗೆ ಸರ್ಕಸ್​​..!

ರಾಜ್ಯದಲ್ಲಿ ಜೆಡಿಎಸ್​​ ಅಸ್ತಿತ್ವಲೇ ಇಲ್ಲ? ಇದು ಬಿಜೆಪಿ ಬಿ ಟೀಮ್​​​ ಎಂದು ಸಿದ್ದರಾಮಯ್ಯ ಪದೇಪದೇ ಮಾಧ್ಯಮಗಳ ಮುಂದೆ ಲಘುವಾಗಿ ಮಾತಾಡುತ್ತಾರೆ. ಆದ್ದರಿಂದ ಜೆಡಿಎಸ್​ ಜತೆ ಕಾಂಗ್ರೆಸ್​ ಮೈತ್ರಿ ಮಾಡಬೇಕೋ ಬೇಡವೋ ಎಂದು ಸಿದ್ದರಾಮಯ್ಯ ಬಾಯಿಂದಲೇ ಬರಲಿ ಎಂಬುದು ಎಚ್​ಡಿಕೆ ಲೆಕ್ಕಚಾರ.

Source: newsfirstlive.com Source link