ವಿಧಾನಸಭಾ ಅಧಿವೇಶನ; ಪಕ್ಷದ ಸಚಿವರಿಗೆ ಬಿಜೆಪಿ ಮುಖಂಡರು ನೀಡಿದ ಹಲವು ಸಲಹೆಗಳೇನು?

ವಿಧಾನಸಭಾ ಅಧಿವೇಶನ; ಪಕ್ಷದ ಸಚಿವರಿಗೆ ಬಿಜೆಪಿ ಮುಖಂಡರು ನೀಡಿದ ಹಲವು ಸಲಹೆಗಳೇನು?

ಬೆಂಗಳೂರು: ಅಧಿವೇಶನ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ತನ್ನ ಸರ್ಕಾರದ ಎಲ್ಲಾ ಸಚಿವರಿಗೂ ಒಂದಿಷ್ಟು ಸೂಚನೆಗಳನ್ನು ನೀಡಿದೆಯಂತೆ. ವಿಪಕ್ಷಗಳು ಒಂದಾದ ಮೇಲೊಂದರಂತೆ ಎಸೆಯುವ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿ ಈಗ ಸರ್ಕಾರದ್ದಾಗಿದೆ. ಹೀಗಾಗಿ ಸಚಿವರಿಗೆ ಮುಖಂಡರು ಕೆಲವು ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮುಖಂಡರು ಸಚಿವರಿಗೆ ನೀಡಿದ ಸೂಚನೆಗಳೇನು..?

 1. ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಲು ಪಕ್ಷ , ಸಚಿವರಿಗೆ ಸೂಚನೆ
 2. ತಮ್ಮ ಇಲಾಖೆಯ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವಂತೆಯೂ ಸೂಚನೆ
 3. ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಸೂಕ್ತ ಸಿದ್ಧತೆಯೊಂದಿಗೆ ಬನ್ನಿ
 4. ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಯಾವುದೇ ವಿಧೇಯಕಗಳ ಚರ್ಚೆಯ ಸಂದರ್ಭದಲ್ಲಿ ಮುತುವರ್ಜಿ ವಹಿಸಿ
 5. ವಿಧೇಯಕಗಳಿಗೆ ಸಂಬಂಧಿಸಿದ ಪ್ರತಿ ಪಕ್ಷಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡಿ
 6. ಸದನದ ಗೌರವ ಕಾಪಾಡುವ ಜೊತೆಗೆ, ಸದನದಲ್ಲಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಿ
 7. ಅನಾವಶ್ಯಕವಾಗಿ ಯಾವುದೇ ಗೊಂದಲದ ಚರ್ಚೆ, ಉತ್ತರ ನೀಡಿ, ಮುಜುಗರಕ್ಕೆ ಒಳಗಾಗಬೇಡಿ
 8. ತಮ್ಮ ಬೆಂಬಲಕ್ಕೆ ಹಿರಿಯ ಸಚಿವರು ಇದ್ದಾರೆ.  ಅವರಿಂದ ಅಗತ್ಯ ಮಾರ್ಗದರ್ಶನ ಪಡೆಯಿರಿ.
 9. ಸರ್ಕಾರ ಹಾಗೂ ಪಕ್ಷದ ಇಮೇಜ್ ಹೆಚ್ಚಿಸುವ ಜೊತೆಗೆ ಜನಪರ ಕಾಳಜಿಯನ್ನೂ ಸದನದಲ್ಲಿ ವ್ಯಕ್ತ ಪಡಿಸಿ
 10. ನೂತನ ಸಚಿವರಾದರ ಮೇಲೆ ಎಲ್ಲರ ಕಣ್ಣು ಇರುತ್ತೆ.  ಸದನದಲ್ಲಿ ಜಾಗರೂಕರಾಗಿ ಉತ್ತರ ನೀಡಿ.
 11. ಸದನದಲ್ಲಿ ಪ್ರತಿಪಕ್ಷಗಳಿಗಿಂತ ಹೆಚ್ಚಿನ ಸೌಜನ್ಯ ತೋರಿ,  ಕಾಡು ಹರಟೆ, ಅನಗತ್ಯ ಸಂವಾದ,  ಚರ್ಚೆ ಬೇಡವೇ ಬೇಡ.
 12. ಸಚಿವರು ತಮ್ಮ ಕಾರ್ಯ ದಕ್ಷತೆ ಪ್ರದರ್ಶನಕ್ಕೆ,  ಇಲಾಖೆಯ ಬಗೆಗಿನ ಜ್ಜಾನ ತೋರಲು ಅಧಿವೇಶನ ಉತ್ತಮ ವೇದಿಕೆ
 13. ಸರ್ಕಾರದ ಆಡಳಿತ ವೈಖರಿ ಕುರಿತಾಗಿ ಚರ್ಚೆ ಮಾಡಲು ಪ್ರತಿಪಕ್ಷ ಚರ್ಚೆ ಮಾಡುತ್ತೆ. ಆ ಸಂದರ್ಭದಲ್ಲಿ ಪಾರದರ್ಶಕ ಆಡಳಿತದ ಬಗ್ಗೆ ಪ್ರಸ್ತಾಪ ಮಾಡಿ

Source: newsfirstlive.com Source link