ಶಿಕ್ಷಣ ಸಚಿವ ಬಿ.ಸಿ ನಾಗೇಶ್​​ಗೆ ಸಿಎಂ ಬಸವರಾಜ್​​ ಬೊಮ್ಮಾಯಿ ಫುಲ್​​​ ಕ್ಲಾಸ್​​​; ಯಾಕೆ ಗೊತ್ತಾ?

ಶಿಕ್ಷಣ ಸಚಿವ ಬಿ.ಸಿ ನಾಗೇಶ್​​ಗೆ ಸಿಎಂ ಬಸವರಾಜ್​​ ಬೊಮ್ಮಾಯಿ ಫುಲ್​​​ ಕ್ಲಾಸ್​​​; ಯಾಕೆ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​​ ಹಾವಳಿ ಜೋರಾಗುತ್ತಲೇ ಇದೆ. ಹೀಗಿರುವಾಗಲೇ 6-12ನೇ ತರಗತಿ ಶುರು ಮಾಡಲಾಗಿದೆ. ಈಗ 1ರಿಂದ 5ನೇ ತರಗತಿ ತೆರೆಯಲು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮುಂದಾಗಿದ್ದು, ಸಿಎಂ ಬಸವರಾಜ್​​ ಬೊಮ್ಮಾಯಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೋನಾ ಕೇಸುಗಳು ಹೆಚ್ಚಾಗುತ್ತಿವೆ. ಯಾವುದೇ ಕಾರಣಕ್ಕೂ 1ರಿಂದ 5 ತರಗತಿ ಓಪನ್​​ ಮಾಡುವ ವಿಚಾರಕ್ಕೆ ಕೈ ಹಾಕಬೇಡಿ. ಇಂದು ಕೊರೋನಾ ಕಡಿಮೆ ಇರಬಹುದು, ನಾಳೆ ಮತ್ತೆ ಬರಲ್ಲ ಎಂದು ಏನು ಗ್ಯಾರಂಟಿ. ಮಕ್ಕಳಿಗೆ ಕೊರೋನಾ ಲಸಿಕೆ ಬೇರೆ. ದಿಢೀರ್​​ ಮಕ್ಕಳಿಗೂ ಕೊರೋನಾ ಹರಡಿದರೆ ಏನು ಮಾಡೋದು. ಇದು ಸೂಕ್ಷ್ಮ ವಿಚಾರ ಏಕಾಏಕಿ ಇಂತಹ ನಿರ್ಧಾರಕ್ಕೆ ಬರಬೇಡಿ ಎಂದು ಬಿ.ಸಿ ನಾಗೇಶ್​​ಗೆ ಸಿಎಂ ಖಡಕ್​ ಸೂಚನೆ ನೀಡಿದ್ದಾರೆ.

ಈಗಾಗಲೇ 6-12ನೇ ತರಗತಿ ಶುರುವಾಗಿದೆ. ಇದರಿಂದ ಯಾರಿಗೂ ಕೊರೋನಾ ಬಂದಿಲ್ಲ ಎಂಬ ಕಾರಣಕ್ಕೆ ಉಳಿದ ತರಗತಿಗಳು ಆರಂಭ ಮಾಡಲು ಬಿ.ಸಿ ನಾಗೇಶ್​ ಸಿದ್ದತೆ ನಡೆಸಿಕೊಂಡಿದ್ದರು. ಆದರೀಗ, ಈ ಹೊತ್ತಲ್ಲಿ ಯಾವುದೇ ನಿರ್ಧಾರ ಬೇಡ. ಅಧಿವೇಶ ಮುಗಿಯುವತನಕ ಯಾವ ನಿರ್ಧಾರಕ್ಕೂ ಬರಬೇಡಿ. ಇದಕ್ಕೆ ಸೂಕ್ತ ನೀಡಲು ತಾಂತ್ರಿಕ ಸಲಹ ಸಮಿತಿ ಮತ್ತು ಆರೋಗ್ಯ ಸಚಿವರು ಇದ್ದಾರೆ ಎಂದಿದ್ದಾರೆ ಬೊಮ್ಮಾಯಿ.

ಇದನ್ನೂ ಓದಿ: ಕಾಂಗ್ರೆಸ್​ ಜತೆ JDS ಮೈತ್ರಿ ಬಗ್ಗೆ ಸಿದ್ದರಾಮಯ್ಯ ಮಾತಾಡಲಿ ಎಂದು ಪಟ್ಟು; HDK ಹೀಗೆ ಹಠಕ್ಕೆ ಬಿದ್ದಿದ್ಯಾಕೆ?

Source: newsfirstlive.com Source link