ಮೈಸೂರು ಬೆನ್ನಲ್ಲೀಗ ಬೆಳಗಾವಿಯಲ್ಲೂ ದೇವಸ್ಥಾನಗಳ ತೆರವಿಗೆ ಮುಂದಾದ ಸರ್ಕಾರ

ಮೈಸೂರು ಬೆನ್ನಲ್ಲೀಗ ಬೆಳಗಾವಿಯಲ್ಲೂ ದೇವಸ್ಥಾನಗಳ ತೆರವಿಗೆ ಮುಂದಾದ ಸರ್ಕಾರ

ಬೆಳಗಾವಿ: ಮೈಸೂರು ಬೆನ್ನಲ್ಲೀಗ ಬೆಳಗಾವಿಯಲ್ಲೂ ಅತಿಕ್ರಮಣ ದೇವಸ್ಥಾನಗಳ ತೆರವಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 46 ದೇವಸ್ಥಾನಗಳ ತೆರವಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾಹಿತಿ ನೀಡಿದ್ದಾರೆ.

ರಸ್ತೆ, ಸಾರ್ವಜನಿಕ ಸ್ಥಳ ಅತಿಕ್ರಮಣ ಮಾಡಿಕೊಂಡು ಕಟ್ಟಿರುವ ದೇವಸ್ಥಾನಗಳು ಇವೆ. ತೆರವು ಮಾಡಲೇಬೇಕಾದ ದೇವಸ್ಥಾನ, ಮಸೀದಿಗಳ ಲಿಸ್ಟ್ ರೆಡಿ ಮಾಡಿಕೊಂಡಿದ್ದೇವೆ. ಈಗಾಗಲೇ 46 ದೇವಸ್ಥಾನಗಳ ಪೈಕಿ 17 ದೇವಸ್ಥಾನಗಳ ತೆರವು ಮಾಡಿದ್ದೇವೆ ಎಂದಿದ್ದಾರೆ ಹಿರೇಮಠ.

39 ದೇವಸ್ಥಾನಗಳ ತೆರವಿಗೆ ಗಣೇಶ ಚತುರ್ಥಿ ನಂತರ ಡೇಟ್​​ ಫಿಕ್ಸ್ ಮಾಡಿದ್ದೆವು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಸ್ಥಾನ ತೆರವಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಇನ್ನು, ನಿಪ್ಪಾಣಿ ಪಟ್ಟಣದಲ್ಲೂ ನಾಲ್ಕು ದೇವಸ್ಥಾನಗಳನ್ನು ಬೇರೆಡೆ ಸ್ಥಳಾಂತರಕ್ಕೆ ನಿರ್ಧಾರ ಮಾಡಲಾಗಿದೆ. ಇದುವರೆಗೆ ಸ್ಥಳಾಂತರ ಮಾಡಿದ ದೇವಸ್ಥಾನದ ವಿಚಾರದಲ್ಲೂ ಯಾರೂ ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್​​ಗೆ ಸಿಎಂ ಬಸವರಾಜ್​​ ಬೊಮ್ಮಾಯಿ ಫುಲ್​​​ ಕ್ಲಾಸ್​​​; ಯಾಕೆ ಗೊತ್ತಾ?

Source: newsfirstlive.com Source link