ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್; ತಮಿಳುನಾಡು ಮೂಲದ ಯುವಕ, ಯುವತಿ ಸಾವು

ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್; ತಮಿಳುನಾಡು ಮೂಲದ ಯುವಕ, ಯುವತಿ ಸಾವು

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಬೈಕ್​​ಗೆ ಕಾರು ಬಂದು ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಫ್ಲೈಓವರ್ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದು, ಮೃತರು ತಮಿಳುನಾಡು ಮೂಲದವರು ಎಂದು ಗುರುತಿಸಲಾಗಿದೆ.

30 ವರ್ಷದ ಪ್ರೀತಮ್ ಮತ್ತು 28 ವರ್ಷದ ಯುವತಿ ಒಬ್ಬರು ಮೃತಪಟ್ಟಿದ್ದಾರೆ. ಓವರ್ ಟೇಕ್ ಮಾಡುವ ರಭಸದಲ್ಲಿ ಕಾರು ಬೈಕ್​​ಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಫ್ಲೈಓವರ್​​ನಿಂದ ಕೆಳಗೆ ಬಿದ್ದು ಅಸುನೀಗಿದ್ದಾರೆ.

ಪ್ರೀತಮ್ ಹಾಗೂ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರೀತಮ್ ಹಾಗೂ ಯುವತಿ ಇಬ್ಬರು ಸ್ನೇಹಿತರು. ಸದ್ಯ ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ತಮಿಳುನಾಡಿನ ಚೆನ್ನೈನಿಂದ ಮೃತ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಓವರ್​ ಟೇಕ್ ಮಾಡಲು ಹೋಗಿ ಇಬ್ಬರು ಸಾವು

Source: newsfirstlive.com Source link