ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

ಸ್ಯಾಂಡಲ್​ವುಡ್​ ಪದ್ಮಾವತಿ, ಮೋಹಕ ತಾರೆ ರಮ್ಯಾ ರಾಜಕೀಯ ಮತ್ತು ಸಿನಿಮಾ ರಂಗದಿಂದ ದೂರ ಉಳಿದ್ರೂ ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ಸದಾ ಆ್ಯಕ್ಟಿವ್​. ಮೊನ್​ ಮೊನ್ನೆಯಷ್ಟೇ ಕಿಚ್ಚ ಸುದೀಪ್​ ಅವರ ಫೋಟೋಗೆ ಕಮೆಂಟ್​ ಮಾಡುವ ಮೂಲಕ ರಮ್ಯಾ ಸುದ್ದಿಯಾಗಿದ್ರು. ಇದೀಗ ಚಂದನವನದ ಪದ್ಮಾವತಿ ಬಹಳ ದಿನಗಳ ನಂತರ ಒಂದು ಸೆಲ್ಫಿಯನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು, ರಮ್ಯಾ ತಮ್ಮ ಸ್ನೇಹಿತರ ಜೊತೆ ಒಂದು ಸುಂದರವಾದ ಸೆಲ್ಫೆ ಕ್ಲಿಕಿಸಿ ಸೋಶಿಯಲ್​ ಸಮುದ್ರದಲ್ಲಿ ಹಾರಿ ಬಿಟ್ಟಿದ್ದಾರೆ. ಇನ್ನು ಕೊರೊನಾ ಎರಡನೇ ಅಲೆಗೂ ಮೊದಲು ತೆಗೆದ ಫೋಟೋ ಇದಾಗಿದು, ರಮ್ಯಾ ಸಖತ್​ ಸ್ಲಿಮ್​ ಆಗಿ ಕಾಣುತ್ತಿದ್ದಾರೆ. ಶಾರ್ಟ್​ ಹೇರ್​ ಲುಕ್​ನಲ್ಲಿ ಕಂಗೊಳಿಸಿದ್ದಾರೆ. ” ಒಂದೇ ನಾಣ್ಯದ ಎರಡು ಮುಖಗಳು” ಎಂದು ಬರೆದಕೊಂಡು ರಮ್ಯಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ರಮ್ಯಾರ ಈ ಶಾರ್ಟ್​ ಹೇರ್​ ಲುಕ್​ಗೆ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ.

ಇದನ್ನೂ ಓದಿ: ತಲೈವಿ ನಂತರ ಸೀತೆ ಪಾತ್ರದಲ್ಲಿ ಮಿಂಚಲು ಅಣಿಯಾದ ಕಂಗನಾ ರಾಣಾವತ್

Source: newsfirstlive.com Source link