ಕಾಶ್ಮೀರವನ್ನೇ ಟಾರ್ಗೆಟ್​​ ಮಾಡುತ್ತಿರುವ ಪಾಕ್​​, ಚೀನಾ ಮತ್ತು ಅಫ್ಘಾನಿಸ್ತಾನ; ಯಾಕೆ ಗೊತ್ತಾ?

ಕಾಶ್ಮೀರವನ್ನೇ ಟಾರ್ಗೆಟ್​​ ಮಾಡುತ್ತಿರುವ ಪಾಕ್​​, ಚೀನಾ ಮತ್ತು ಅಫ್ಘಾನಿಸ್ತಾನ; ಯಾಕೆ ಗೊತ್ತಾ?

ತಾಲಿಬಾನ್‌ ಉಗ್ರರು ಅಫ್ಘಾನಿಸ್ತಾನ್‌ ವಶಪಡಿಸಿಕೊಂಡಿದ್ದೇ ತಡ. ಅದರ ಕರಿನೆರಳು ಭಾರತದ ಮೇಲೆ ಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅದರಲ್ಲಿಯೂ ಭಾರತದ ಸುತ್ತ ಮೂರು ಭೂತಗಳು ಸುತ್ತುವರಿದಿವೆ. ಆ ಭೂತಗಳು ಯಾವುವು? ಭಾರತದ ವಿರುದ್ಧ ಅವರ ಸಂಚು ಏನು? ಅದಕ್ಕೆ ಭಾರತ ಹೂಡಿದ ಪ್ರತಿತಂತ್ರ ಏನು?

ತಾಲಿಬಾನ್‌ ಸರ್ಕಾರ ಪತನವಾದ ಮೇಲೆ 2001ರಲ್ಲಿ ಅಫ್ಘಾನಿಸ್ತಾನ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಿತ್ತು. ಅಲ್ಲಿಂದ ಅಂದ್ರೆ 2001 ರಿಂದ 2021ರ ವರೆಗೂ ಭಾರತ ಅಫ್ಘಾನ್‌ನಲ್ಲಿ ಮೂಲಭೂತ ಸೌಲಭ್ಯಕ್ಕೆ ಧನ ಸಹಾಯ ನೀಡಿದೆ, ಕುಡಿಯುವ ನೀರು ಸರಬರಾಜು, ರಸ್ತೆ ನಿರ್ಮಾಣ, ಡ್ಯಾಂ ನಿರ್ಮಾಣ ಸೇರಿದಂತ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿತ್ತು. ಸುಮಾರು 20 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ವ್ಯಯಿಸಿತ್ತು. ಆದ್ರೆ, ಅಮೆರಿಕ ಸೇನೆ ಅಫ್ಘಾನ್‌ನಿಂದ ವಾಪಸ್‌ ಆಗುತ್ತಲೇ ತಾಲಿಬಾನ್‌ ಉಗ್ರರ ಅಫ್ಘಾನ್‌ ವಶಪಡಿಸಿಕೊಂಡ್ರು. ತಾಲಿಬಾನ್‌ನ 33 ಸಚಿವರ ಸಂಪುಟದಲ್ಲಿ ಮೋಸ್ಟ್‌ ವಾಂಟೆಡ್‌ ಉಗ್ರರೇ ಸ್ಥಾನ ಪಡೆದಿದ್ದಾರೆ. ವಿಶ್ವಸಂಸ್ಥೆ ನಿಷೇಧಿಸಿದ 14 ಉಗ್ರರೂ ಸ್ಥಾನ ಪಡೆದಿದ್ದಾರೆ. ಇದೀಗ ಈ ಉಗ್ರರನ್ನೇ ಬಳಸಿಕೊಂಡು ಭಾರತವನ್ನು ಹೆಣೆಯಲು ಮೂರು ಭೂತಗಳು ತಂತ್ರ ರೂಪಿಸಿವೆ.

ಭಾರತ ಸುತ್ತುವರಿದ ಮೂರು ಭೂತಗಳು

ಜಾಗತಿಕವಾಗಿ ಭಾರತ ಭಾರೀ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಆರ್ಥಿಕವಾಗಿಯೂ ಅಭಿವೃದ್ಧಿ ಸಾಧಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಘನತೆ ಗೌರವನ್ನು ಭಾರತ ಪಡೆಯುತ್ತಿದೆ. ಜೊತೆಗೆ ಮೇಕ್‌ ಇನ್‌ ಇಂಡಿಯಾ ಮೂಲಕ ಯುದ್ಧ ವಿಮಾನ, ಶಸ್ತ್ರಾಸ್ತ್ರ, ರಾಕೆಟ್‌…. ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಉತ್ಪಾದಿಸುತ್ತಿದೆ. ಹೀಗಾಗಿ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದೆ. ಆಮದು ಮಾಡಿಕೊಳ್ಳುವ ಪ್ರಮಾಣ ಕಡಿನೆಯಾಗಿದೆ. ರಫ್ತು ಹೆಚ್ಚಾಗಿದೆ.. ಆದ್ರೆ, ಇದು ಭಾರತ ವಿರೋಧಿಗಳ ಕಣ್ಣು ಕೆಂಪಾಗಿಸಿದೆ. ಇದಕ್ಕಾಗಿಯೇ ಭಾರತವನ್ನು ಹೆಣೆಯಲು ಅಫ್ಘಾನಿಸ್ತಾನ್‌, ಪಾಕಿಸ್ತಾನ, ಚೀನಾ ರಾಷ್ಟ್ರಗಳು ಸುತ್ತುವರಿದಿವೆ. ಇವೇ ಮೂರು ರಾಷ್ಟ್ರಗಳು ಭಾರತಕ್ಕೆ ಭೂತಗಳಾಗಿ ಕಾಣಿಸಿಕೊಳ್ಳುತ್ತಿವೆ. ಹಾಗಾದ್ರೆ ಆಯಾ ರಾಷ್ಟ್ರಗಳ ತಂತ್ರ ಏನು ಗೊತ್ತಾ?

ಕಾಶ್ಮೀರದ ಮೇಲೆ ಕಣ್ಣಿಟ್ಟ ತಾಲಿಬಾನ್‌ ಉಗ್ರರು

ಅಫ್ಘಾನಿಸ್ತಾನ್‌, ಪಾಕಿಸ್ತಾನ, ಚೀನಾ ಮೂರು ರಾಷ್ಟ್ರಗಳಿಂದ ಪಕ್ಕಾ ಗೇಮ್‌ ಪ್ಲಾನ್‌ ನಡೆಯುತ್ತಿದೆ. ಪಾಕಿಸ್ತಾನ ಮತ್ತು ಚೀನಾ ಹಿಂದೆ ನಿಂತು ತಾಲಿಬಾನಿ ಉಗ್ರರನ್ನು ಭಾರತದ ವಿರುದ್ಧ ಚೂಬಿಡುಲು ಪ್ಲಾನ್‌ ಮಾಡಿದ್ದಾರೆ. ಇದರ ಪ್ರಾಥಮಿಕ ಹಂತವಾಗಿ ತಾಲಿಬಾನ್‌ ಉಗ್ರರು ಕಾಶ್ಮೀರ ಮುಸ್ಲಿಮರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಹೌದು, ಸೆಪ್ಟೆಂಬರ್‌ 15 ರಂದು ಅಫ್ಘಾನ್‌ ಅನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಂಡಾಗ ಮಾತನಾಡಿದ ತಾಲಿಬಾನ್‌ ಉಗ್ರನೊಬ್ಬ ನಾವು ಕಾಶ್ಮೀರದ ತಂಟೆಗೆ ಹೋಗಲ್ಲ. ಅದು ಭಾರತ ಮತ್ತು ಕಾಶ್ಮೀರದ ಆಂತರಿಕ ವಿಚಾರವಾಗಿದೆ. ಅದರಲ್ಲಿ ನಾವು ತಲೆ ಹಾಕಲ್ಲ ಅಂದಿದ್ದ. ಆದ್ರೆ, ಇದನ್ನು ಹೇಳಿ ಎರಡೇ ದಿನಕ್ಕೆ ಮತ್ತೊಬ್ಬ ತಾಲಿಬಾನ್‌ ವಕ್ತಾರ ಮಾತನಾಡಿ ನಾವು ಕಾಶ್ಮೀರ ಮುಸ್ಲಿಂ ಸೇರಿದಂತೆ ಜಗತ್ತಿನಲ್ಲಿರೋ ಮುಸ್ಲಿಮರ ಪರ ಧ್ವನಿ ಎತ್ತುತ್ತೇವೆ ಎಂದು ತಿಳಿಸಿದ್ದ. ಈ ಮೂಲಕ ಎರಡೇ ದಿನದಲ್ಲಿ ತಾಲಿಬಾನಿ ಉಗ್ರರ ಬಣ್ಣ ಬದಲಾಗಿತ್ತು. ತಾವು ಎರಡು ತಲೆಯ ಹಾವು ಅನ್ನೋದನ್ನು ಸಾಬೀತು ಮಾಡಿ ಬಿಟ್ರು.

1996 ರಿಂದ 2001 ರ ವರೆಗೆ ಅಫ್ಘಾನ್‌ನಲ್ಲಿ ತಾಲಿಬಾನ್‌ ಸರ್ಕಾರ ಇತ್ತು. ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿಯೇ ಇತ್ತು. ಪಾಕಿಸ್ತಾನ ಮತ್ತು ತಾಲಿಬಾನ್‌ ಉಗ್ರರು ಸೇರಿಕೊಂಡು ಭಯೋತ್ಪಾದನೆ ಮಾಡ್ತಾ ಇದ್ರು. ಅವರ ಉದ್ದೇಶ ಕಾಶ್ಮೀರವನ್ನು ಸ್ವತಂತ್ರ ಪಡೆಸಬೇಕು ಇಲ್ಲವೇ ಪಾಕಿಸ್ತಾನದ ಜೊತೆ ಸೇರಿಬೇಕು ಅನ್ನೋದಾಗಿತ್ತು. ಇದೀಗ ಮತ್ತೆ ತಾಲಿಬಾನ್‌ ಸರ್ಕಾರ ಬಂದಿರೋದಿಂದ ಕಾಶ್ಮೀರದ ಮೇಲೆ ಕಣ್ಣು ಹಾಕಿದ್ದಾರೆ.

ಪಾಕ್‌ನಿಂದ ಭಾರತದ ಮೇಲೆ ಭಯೋತ್ಪಾದನೆ ಆರೋಪ
ತಾಲಿಬಾನ್‌ ಉಗ್ರರ ನೆರವು ಪಡೆಯಲು ಪಾಕ್‌ ಸಂಚು

ಭಾರತದ ವಿರುದ್ಧ ನೇರವಾಗಿ ಯುದ್ಧ ಮಾಡಿ ಗೆಲ್ಲಲು ಸಾಧ್ಯವೇ ಇಲ್ಲ ಅನ್ನೋದು ಪಾಕಿಸ್ತಾನಕ್ಕೆ ಅರಿವಾಗಿದೆ. ಹೀಗಾಗಿಯೇ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗಿಸಿ ಕೃತ್ಯ ಮಾಡಿಸುತ್ತಿದೆ. ಮುಂಬೈನ ತಾಜ್‌ ಹೋಟೆಲ್‌ ಮೇಲೆ ದಾಳಿ ಮಾಡಿದ್ದು, ಪುಲ್ವಾಮಾ ದಾಳಿ ನಡೆಸಿದ್ದು ಕೂಡ ಪಾಕಿಸ್ತಾನದ ಭಯೋತ್ಪಾದಕರೇ ಆಗಿದ್ರು. ಆದ್ರೆ, ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಭಯೋತ್ಪಾದಕ ವಿರುದ್ಧ ಇರುವ ಕಾಯ್ದೆಯನ್ನು ಕಠಿಣಗೊಳಿಸಿದ್ದಾರೆ. ಇದರ ಪರಿಣಾಮ ಭಯೋತ್ಪಾದನೆ ಚಟುವಟಿಕೆಗೆ ಕಡಿವಾಣ ಬಿದ್ದಿದೆ. ಆದ್ರೆ, ಇದೀಗ ಅಫ್ಘಾನ್‌ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಲೆ ಪಾಕಿಸ್ತಾನ ಚಿಗುರಿಕೊಂಡು ಬಿಟ್ಟಿದೆ. ಯಾಕಂದ್ರೆ ತಾಲಿಬಾನ್‌ನಲ್ಲಿ ಪಾಕಿಸ್ತಾನ ಮೂಲದ ಹಕ್ಕಾನಿ ನೆಟ್ವರ್ಕ್‌ನಂತಹ ಭಯೋತ್ಪಾದಕರು ಇದ್ದಾರೆ. ಅವರನ್ನು ಬಳಸಿಕೊಂಡು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಪಾಕ್‌ ಪ್ಲಾನ್‌ ಮಾಡಿಕೊಂಡಿದೆ. ಇದೇ ಉದ್ದೇಶಕ್ಕೆ ತಾಲಿಬಾನ್‌ ಸರ್ಕಾರಕ್ಕೆ ಪಾಕಿಸ್ತಾನ ನೆರವು ನೀಡುತ್ತಿದೆ. ಜೊತೆಗೆ ಭಾರತದ ವಿರುದ್ಧವೇ ಭಯೋತ್ಪಾದನೆಯ ಆರೋಪ ಮಾಡಿ ತಾನೇ ಬೆತ್ತಲಾಗುತ್ತಿದೆ.

ಅದೇನೋ ಹೇಳ್ತಾರಲ್ಲ, ಕೋತಿ ತಾನು ತುಪ್ಪ ತಿಂದು ಪಕ್ಕದ ಕೋತಿ ಮೂತಿಗೆ ಒರೆಸಿತು ಅಂತ…..ಹಾಗಾಗಿದೆ ಪಾಕಿಸ್ತಾನ ಪರಿಸ್ಥಿತಿ. ಸೋಮವಾರವಷ್ಟೇ ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮದ್​ ಖುರೇಷಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್​ ಯುಸುಫ್​, ಮಾನವ ಹಕ್ಕುಗಳ ಸಚಿವ ಶಿರೀನ್​ ಮಜಾರಿ ಭಾರತದ ಐಸಿಸ್‌ ಉಗ್ರರ ಶಿಬಿರ ನಡೆಸುತ್ತಿದೆ ಅಂತ ಆರೋಪ ಮಾಡಿದ್ದರು.

ಚೀನಾ ಆಡುತ್ತಿದೆ ನವರಂಗಿ ಆಟ
ಅಫ್ಘಾನ್‌, ಪಾಕ್‌ ಹಿಂದೆ ಇರೋದೇ ಚೀನಾ

ಭಾರತದ ಬದ್ಧ ವೈರಿರಾಷ್ಟ್ರಗಳಲ್ಲಿ ಚೀನಾ ಪ್ರಮುಖವಾದ್ದದು. ಇದೀಗ ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಳ್ಳುತ್ತಲೇ ಭಾರತವನ್ನು ಹೆಣೆಯಲು ಚೀನಾ ಸಂಚು ರೂಪಿಸಿದೆ. ತಾನು ಭಯೋತ್ಪಾದಕರನ್ನು ಬೆಂಬಲಿಸಲ್ಲ ಅಂತ ವಿಶ್ವಮಟ್ಟದಲ್ಲಿ ತೋರಿಸಿಕೊಳ್ಳುತ್ತಿರೋ ಚೀನಾ ನವರಂಗಿ ಆಟ ಆಡುತ್ತಿದೆ. ತಾಲಿಬಾನ್‌ ಮತ್ತು ಪಾಕಿಸ್ತಾನವನ್ನು ಭಾರತದ ವಿರುದ್ಧ ಚೂ ಬಿಡುತ್ತಿರುವುದೇ ಚೀನಾ ಆಗಿದೆ. ಯಾಕಂದ್ರೆ, ತಾಲಿಬಾನ್‌ಗಾಗಲಿ, ಪಾಕಿಸ್ತಾನಕ್ಕಾಗಲಿ ಭಾರತದ ವಿರುದ್ಧ ಹೋರಾಡುವ ಶಕ್ತಿ ಇಲ್ಲ. ಅವರ ಹೊಟ್ಟೆಗೆ ಹಿಟ್ಟಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಚೀನಾ ರಾಷ್ಟ್ರವು ಪಾಕ್‌ ಮತ್ತು ತಾಲಿಬಾನ್‌ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದೆ ಎನ್ನಲಾಗಿದೆ. ಏಷ್ಯಾ ರಾಷ್ಟ್ರಗಳಲ್ಲಿ ಭಾರತ ಪ್ರಬಲವಾಗಿ ಬೆಳೆಯುತ್ತಿರುವುದು ಚೀನಾಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೇಗಾದ್ರೂ ಮಾಡಿ ಭಾರತವನ್ನು ಕಟ್ಟಿಹಾಕಬೇಕು ಅನ್ನೋದು ಚೀನಾ ಉದ್ದೇಶವಾಗಿದೆ.

ಇನ್ನು ಅರುಣಾಚಲ ಪ್ರದೇಶದಲ್ಲಿಯೂ ಚೀನಾ ಗಡಿ ತಕರಾರು ತೆಗೆಯುತ್ತಿದೆ. ಆಗಾಗ ಸೇನಾ ಜಮಾವಣೆ ಮಾಡುವುದು, ಯುದ್ಧ ವಿಮಾನಗಳನ್ನು ಗಡಿಯಲ್ಲಿ ಹಾರಿಸುವ ಮೂಲಕ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ. ಭಾರತ ಕೂಡ ಕಾಲಕಾಲಕ್ಕೆ ತಿರುಗೇಟು ನೀಡುತ್ತಿದೆ.

ಮೂರು ರಾಷ್ಟ್ರಗಳಿಂದ ವ್ಯವಸ್ಥಿತ ಸಂಚು

ಅಫ್ಘಾನಿಸ್ತಾನ್‌, ಪಾಕಿಸ್ತಾನ, ಚೀನಾ….ಈ ಮೂರು ರಾಷ್ಟ್ರಗಳಿಂದ ಒಂದು ದುಷ್ಟರ ಕೂಟ ರಚನೆಯಾಗಿದೆ. ಮೂರು ರಾಷ್ಟ್ರಗಳು ಸೇರಿಕೊಂಡು ವ್ಯವಸ್ಥಿತಿ ಸಂಚು ರೂಪಿಸಿದ್ದಾರೆ. ಹೇಗಾದ್ರೂ ಮಾಡಿ ಭಾರತಕ್ಕೆ ಹೊಡೆತ ನೀಡಬೇಕು ಅನ್ನೋದೇ ಅವರ ಉದ್ದೇಶವಾಗಿದೆ. ಆದ್ರೆ, ಭಾರತವೇನು ಸುಮ್ಮನೇ ಕುಳಿತುಕೊಳ್ಳುತ್ತಾ? ಅಫ್ಘಾನ್‌, ಪಾಕಿಸ್ತಾನ, ಚೀನಾ ಎಂಬ ಈ ಮೂರು ಭೂತಗಳನ್ನು ಎದುರಿಸುವುದು ಭಾರತಕ್ಕೆ ಗೊತ್ತಿಲ್ವ?

ಮೂರು ಭೂತಗಳ ತಂತ್ರಗಾರಿಕೆ ಅರಿತ ಭಾರತ
ತಾಲಿಬಾನ್‌ ಉಗ್ರರನ್ನು ಎದುರಿಸಲು ಸನ್ನದ್ಧ

ಕಾಶ್ಮೀರ ಮುಸ್ಲಿಮರ ಹೆಸರಲ್ಲಿ ತಾಲಿಬಾನ್‌ ಉಗ್ರರು ಭಾರತಕ್ಕೆ ಸವಾಲು ಒಡ್ಡುವುದು, ಪಾಕಿಸ್ತಾನ ಕುತಂತ್ರ ಬುದ್ದಿ ತೋರಿಸುವುದು, ಚೀನಾ ಹಿಂಬದಿಯಿಂದ ತಾಲಿಬಾನ್‌, ಪಾಕ್‌ ಉಗ್ರರನ್ನು ಚೂ ಬಿಡುವುದು ಭಾರತಕ್ಕೆ ಗೊತ್ತು. ಇದಕ್ಕಾಗಿಯೇ ಭಾರತ ಎಲ್ಲಾ ರೀತಿಯ ಸವಾಲನ್ನು ಎದುರಿಸಲು ಸಿದ್ಧವಾಗಿಯೇ ನಿಂತಿದೆ. ಬ್ರಿಕ್ಸ್‌ ಸಭೆಯಲ್ಲಿ ಕೂಡ ಪ್ರಧಾನಿ ನರೇಂದ್ರ ಅವರು ತಾಲಿಬಾನ್‌ ಉಗ್ರರ ನಿಯಂತ್ರಣದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಮೂಲಗಳ ಪ್ರಕಾರ ತಾಲಿಬಾನ್‌ ಉಗ್ರರನ್ನು ಎದುರಿಸುವ ಬಗ್ಗೆ ದೆಹಲಿಯಲ್ಲಿ ಸೇನೆಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ತಾಲಿಬಾನ್‌ ಉಗ್ರರ ತಂತ್ರ ಏನು? ಅದಕ್ಕೆ ಪ್ರತಿ ತಂತ್ರ ಏನು ಮಾಡಬೇಕು? ಅವರನ್ನು ಹೊಡೆದುರುಳಿಸುವುದು ಹೇಗೆ? ಅನ್ನೋ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಸಾವಾಲು ಎದುರಿಸಲು ಸಿದ್ಧ ಅನ್ನೋ ಸಂದೇಶ ಭಾರತದಿಂದ ಹೋಗುತ್ತಿದೆ.

ಅಫ್ಘಾನ್‌, ಪಾಕಿಸ್ತಾನ, ಚೀನಾ ಈ ಮೂರು ರಾಷ್ಟ್ರಗಳು ಭಾರತಕ್ಕೆ ಭೂತವಾಗಿವೆ. ಆದ್ರೆ, ಭಾರತ ಈ ಮೊದಲಿನಂತೆ ಅಲ್ಲ, ಬೇರೆ ದೇಶದ ಒಳ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ. ಭಾರತದ ತಂಟೆಗೆ ಬಂದ್ರೇ ಹುಷಾರ್‌

Source: newsfirstlive.com Source link