6 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಎಸಿಬಿ ಬಲೆಗೆ ಸಿಕ್ಕಿಬಿದ್ದ ಮೂವರು ಅಧಿಕಾರಿಗಳು

6 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಎಸಿಬಿ ಬಲೆಗೆ ಸಿಕ್ಕಿಬಿದ್ದ ಮೂವರು ಅಧಿಕಾರಿಗಳು

ಚಿತ್ರದುರ್ಗ: ಭೂಸ್ವಾಧೀನ ಪರಿಹಾರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟು, ಚಿತ್ರದುರ್ಗದಲ್ಲಿ ಮೂವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಹಿನ್ನೆಲೆ, ಪರಿಹಾರದ ಹಣಕ್ಕಾಗಿ ಚಿತ್ರದುರ್ಗದ ಭೂಸ್ವಾಧೀನ ವಿಶೇಷಾಧಿಕಾರಿ ವೀರೇಶ್​ ಕುಮಾರ್, ಮ್ಯಾನೇಜರ್ ಮೋಹನ್ ಮತ್ತು ಚಾಲಕ ಮನ್ಸೂರ್​​ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

6 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಹಿರಿಯೂರಿನ ನೇತ್ರಾ ಕರಿಯಪ್ಪ ಎಂಬುವವರು ಆರೋಪಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಬಸವರಾಜ, ಪಿಐ ಪ್ರವೀಣ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

Source: newsfirstlive.com Source link