ನಂಬರ್​​ ಪ್ಲೇಟ್​​ ಕನ್ನಡ ಬಾವುಟದ ಸ್ಟಿಕ್ಕರ್​​ ಹಾಕಿದ್ದ ಬೈಕ್​​ ಸವಾರನಿಗೆ 500 ರೂ. ದಂಡ ಹಾಕಿದ ಪೊಲೀಸರು

ನಂಬರ್​​ ಪ್ಲೇಟ್​​ ಕನ್ನಡ ಬಾವುಟದ ಸ್ಟಿಕ್ಕರ್​​ ಹಾಕಿದ್ದ ಬೈಕ್​​ ಸವಾರನಿಗೆ 500 ರೂ. ದಂಡ ಹಾಕಿದ ಪೊಲೀಸರು

ಬೆಂಗಳೂರು: ಸ್ಕೂಟರ್‌ನ ನಂಬರ್‌ ಪ್ಲೇಟ್‌ ಮೇಲೆ ಕನ್ನಡ ಬಾವುಟದ ಸ್ಟಿಕ್ಕರ್‌ ಹಾಕಿದ್ದಕ್ಕೆ ಪೊಲೀಸರು ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಘು ಎಂಬ ವಾಹನ ಸವಾರ ತನ್ನ ಗಾಡಿಯ ನಂಬರ್‌ ಪ್ಲೇಟ್‌ ಮೇಲೆ ಕನ್ನಡ ಬಾವುಟದ ಸ್ಟಿಕ್ಕರ್‌ ಹಾಕಿಸಿದ್ದ, ಇದನ್ನ ಕಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು, ಗಾಡಿ ನಿಲ್ಲಿಸಿ 500 ರೂಪಾಯಿ ದಂಡ ವಿಧಿಸಿದ್ದಾರೆ.

ದಂಡ ಕಟ್ಟಲಾಗದೇ ವಾಹನ ಸವಾರ ಪೊಲೀಸರ ಬಳಿ ಪರಿಪರಿಯಾಗಿ ಕೇಳಿಕೊಂಡಿದ್ದಾನೆ,… ಸಾರ್‌,,, ನಾನು ದಿನಗೂಲಿ ಕಾರ್ಮಿಕ, ನನ್ನ ಬಳಿ ಅಷ್ಟೊಂದು ಹಣವಿಲ್ಲ ಅಂತೇಳಿದ್ರು, ಬಿಡದೇ ದಂಡ ಕಟ್ಟಿಸಿಕೊಂಡಿದ್ದಾರೆ, ಇನ್ನು ಬೇಸರಗೊಂಡ ವಾಹನ ಸವಾರ, ನಿಮ್ಗೆ ಕಿಂಚಿತ್ತು, ಭಾಷಾಭಿಮಾನವಿಲ್ಲವೇ ಅಂತ ಪ್ರಶ್ನೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಟೋಸ್‌ ಶೇರ್‌ ಮಾಡಿ ಬೇಸರ ಹೊರಹಾಕಿದ್ದಾನೆ.

ಇದನ್ನೂ ಓದಿ: ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

Source: newsfirstlive.com Source link