ವಿದ್ಯುತ್​​ ತಂತಿ ತಗುಲಿ ರೈತ ಸಾವು; ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ವಿದ್ಯುತ್​​ ತಂತಿ ತಗುಲಿ ರೈತ ಸಾವು; ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ಬಳ್ಳಾರಿ: ವಿದ್ಯುತ್ ತಂತಿ ರೈತನ ಮೇಲೆ ಬಿದ್ದು ರೈತನೋರ್ವ ಸಾವನ್ನಪ್ಪಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ರೈತ ಮಂಜುನಾಯ್ಕ್ ಮೃತ ದುರ್ದೈವಿ ಅಂತ ತಿಳಿದುಬಂದಿದೆ.

ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ಡುಂಗಾವತ್ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ಮೈಮೇಲೆ ಬಿದ್ದಿದ್ದರಿಂದ ವಿದ್ಯುತ್‌ ಪ್ರವಹಿಸಿ, ರೈತನ ದೇಹ ಸಂಪೂರ್ಣ ಸುಟ್ಟು ಹೋಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನು ಮನೆಗೆ ಬೆನ್ನೆಲುಬಾಗಿದ್ದ ರೈತನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ..

Source: newsfirstlive.com Source link