‘ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮ, ಕಾಂಗ್ರೆಸ್​​ ಹೇಳಿದ್ದು ಸರಿಯಿದೆ’- ಸ್ವಪಕ್ಷದ ವಿರುದ್ಧವೇ ಈಶ್ವರಪ್ಪ ಕಿಡಿ

‘ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮ, ಕಾಂಗ್ರೆಸ್​​ ಹೇಳಿದ್ದು ಸರಿಯಿದೆ’- ಸ್ವಪಕ್ಷದ ವಿರುದ್ಧವೇ ಈಶ್ವರಪ್ಪ ಕಿಡಿ

ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಂತ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪು ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಈ ಸಂಬಂಧ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಡೀ ಕರ್ನಾಟಕದಲ್ಲಿ ದೇವಸ್ಥಾನ ಒಡೆಯುವ ಆತಂಕ ರಾಜ್ಯದ ಜನರಲ್ಲಿ ವ್ಯಕ್ತವಾಗಿದೆ. ಸುಪ್ರಿಂ ಕೋರ್ಟ್ ಆದೇಶಗಳು ಬೇಕಾದಷ್ಟಿವೆ. ಸಂಸ್ಕೃತಿ ನಂಬಿಕೊಂಡು ಇರುವಂತ ಪಕ್ಷ ಬಿಜೆಪಿ. ಒಂದೇ ಒಂದು ದೇವಸ್ಥಾನ ಒಡೆಯುವುದು ತಪ್ಪೆ. ಯಾಕೆ ದೇವಸ್ಥಾನ ಮಾತ್ರ ಮುಟ್ಟಿದರು ಅನ್ನೋದು ಕೂಡ ಪ್ರಶ್ನೆ. ಮಸೀದಿ, ಚರ್ಚ್​, ಮಂದಿರ ಎನ್ನದೆ ಎಲ್ಲ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡುವುದು ಬಿಜೆಪಿಯ ಕರ್ತವ್ಯ ಎಂದಿದ್ದಾರೆ.

ಇದನ್ನೂ ಓದಿ: ವಿಧಾನಸಭಾ ಅಧಿವೇಶನ; ಪಕ್ಷದ ಸಚಿವರಿಗೆ ಬಿಜೆಪಿ ಮುಖಂಡರು ನೀಡಿದ ಹಲವು ಸಲಹೆಗಳೇನು?

ಯಾರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ನನ್ನ ಉದ್ದೇಶವಲ್ಲ. ಆದರೆ ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾರೂ ಒಡೆಯಬಾರದು. ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ಯಾವುದನ್ನೂ ಒಡೆಯಬಾರದು. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ತೇವೆ

ಇನ್ನು ಕಾಂಗ್ರೆಸ್​ ಬಿಜೆಪಿ ಸರ್ಕಾರ ಇರುವಾಗಲೇ ದೇಗುಲ ಕೆಡವಿದ್ದಾರೆ ಎಂದು ಆರೋಪಿಸುತ್ತಿರುವುದು ಸತ್ಯ. ಕಾಂಗ್ರೆಸ್​ ಕೂಡ ಈ ಕುರಿತು ವಿರೋಧ ವ್ಯಕ್ತಪಡಿಸಿದೆ. ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನ ಉಳಿಸಬೇಕು ಅಂತ ಅನಿಸಿದೆಯಲ್ಲ ಅದು ಮುಖ್ಯ ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ದೇವಾಲಯ ಕೆಡವಿದ ಸಾಧನೆಗಾಗಿ RSS ಸಮಾವೇಶವೇ?- ರಾಮಲಿಂಗಾ ರೆಡ್ಡಿ ಕಿಡಿ

Source: newsfirstlive.com Source link