ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮುಖಂಡೆ ಆಶಾ ಶೆಟ್ಟಿ; ಕಾರಣ ಇದೇ..

ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮುಖಂಡೆ ಆಶಾ ಶೆಟ್ಟಿ; ಕಾರಣ ಇದೇ..

ಉಡುಪಿ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷ್ಣನೂರು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದ ಕುಕ್ಕಿಕಟ್ಟೆಯಲ್ಲಿ ಘಟನೆ ನಡೆದಿದ್ದು, 48 ವರ್ಷದ ಆಶಾ ಶೆಟ್ಟಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಆಶಾ ಶೆಟ್ಟಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ, ಇದರಿಂದ ಮನನೊಂದಿದ್ದ ತಾಯಿ ಆಶಾ, ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇನ್ನು ಮಣಿಪಾಲ ಕೆಎಂಸಿಗೆ ಆಶಾ ಶೆಟ್ಟಿ ಮೃತದೇಹ ರವಾನಿಸಿದ್ದು, ಘಟನೆ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ನಂಬರ್​​ ಪ್ಲೇಟ್​​ ಕನ್ನಡ ಬಾವುಟದ ಸ್ಟಿಕ್ಕರ್​​ ಹಾಕಿದ್ದ ಬೈಕ್​​ ಸವಾರನಿಗೆ 500 ರೂ. ದಂಡ ಹಾಕಿದ ಪೊಲೀಸರು

Source: newsfirstlive.com Source link