RTPCR ರಿಪೋರ್ಟ್​ ಇಲ್ಲದ ಮಹಾರಾಷ್ಟ್ರಿಗರನ್ನು ರಾಜ್ಯಕ್ಕೆ ಕರೆ ತರುತ್ತಿದ್ದ ಕಿಲಾಡಿಗಳು ಅಂದರ್..

RTPCR ರಿಪೋರ್ಟ್​ ಇಲ್ಲದ ಮಹಾರಾಷ್ಟ್ರಿಗರನ್ನು ರಾಜ್ಯಕ್ಕೆ ಕರೆ ತರುತ್ತಿದ್ದ ಕಿಲಾಡಿಗಳು ಅಂದರ್..

ಬೆಳಗಾವಿ: ಮಹಾರಾಷ್ಟ್ರದಿಂದ RTPCR ವರದಿ ಇಲ್ಲದೆ ಬರುವ ಪ್ರಯಾಣಿಕರಿಗೆ ಕಳ್ಳ ಮಾರ್ಗದಿಂದ ಕರ್ನಾಟಕಕ್ಕೆ ಕರೆದುಕೊಂಡು ಬರುತ್ತಿದ್ದ ಖಾಸಗಿ ವಾಹನಗಳ ಮೇಲೆ ಜಿಲ್ಲಾ ಪೋಲಿಸರು ದಾಳಿ ನಡೆಸಿದ್ದಾರೆ.

ಕೊರೊನಾ ಆತಂಕದ ಹಿನ್ನೆಲೆ ಕರ್ನಾಟಕದ ಗಡಿಯಲ್ಲಿ ಇನ್ನು ಕಟ್ಟೆಚರ ಮುಂದುವರೆದಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ RTPCR ರಿಪೋರ್ಟ್ ಕಡ್ಡಾಯ ಎಂದು ಸರ್ಕಾರದ ಆದೇಶವಿದೆ. ಅದರಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹತ್ತಿರ ಗಡಿಯಲ್ಲಿರುವ ಕೋಗನೊಳಿ ಚೆಕ್ ಪೋಸ್ಟ್ ಬಳಿ ಬಿಗಿ ಪೋಲಿಸ್ ಬಂದೋಬಸ್ತ್ ಇದ್ದು ಖಡಕ್ ತಪಾಸಣೆ ಕೂಡ ನಡೆಯುತ್ತಿದೆ‌.

ಈ ವೇಳೆ RTPCR ವರದಿ ಇಲ್ಲದೆ ಬಂದಂತವರಿಗೆ ವಾಪಸ ಕಳುಹಿಸಲಾಗುತ್ತಿದೆ. ಈ ಪರಿಸ್ಥಿತಿಯನ್ನೇ ದುರುಪಯೋಗ ಮಾಡಿಕೊಂಡ ಸ್ಥಳೀಯ ಖಾಸಗಿ ವಾಹನಗಳು RTPCR ವರದಿ ಇಲ್ಲದೆ ಬಂದ ಪ್ರಯಾಣಿಕರಿಗೆ ದುಬಾರಿ ಹಣ ಪಡೆದು ಕಳ್ಳ ಮಾರ್ಗದಿಂದ ಕರ್ನಾಟಕ ರಾಜ್ಯದಲ್ಲಿ ತಂದು ಬಿಡುತ್ತಿದ್ದಾರೆ‌.

ಸಿನಿಮೀಯ ರೀತಿಯಲ್ಲಿ ಪ್ರಯಾಣಿಕರ ಸಾಗಾಟ 

ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಗಡಿಯಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ ಸಿಬ್ಬಂದಿಗಳು ನಿಮಗೆ RTPCR ವರದಿ ಕೊಡಿಸುತ್ತೇವೆ ಅಂತಾ ಹೇಳಿ 200 ರೂ ಹಣ ಪಡೆದು ಅವರನ್ನು ಪುಣೆಯಿಂದ ಮಹಾರಾಷ್ಟ್ರದ ಕಾಗಲ ಪಟ್ಟಣದ ಹತ್ತಿರ ಪ್ರಯಾಣಿಕರನ್ನು ಇಳಿಸುತ್ತಾರೆ. ನಂತರ ಮ್ಯಾಕ್ಸಿಕೊ ಕ್ಯಾಬ್ ಮೂಲಕ ಕಳ್ಳ ಮಾರ್ಗದಿಂದ ಕರ್ನಾಟಕದ ಮಾಂಗ್ನೂರ ಕ್ರಾಸ್ ಬಳಿ ತಂದು ಬಿಡುತ್ತಿದ್ದರು. ನಂತರ ಬಸ್ ಮೂಲಕ ಅವರನ್ನು ಹುಬ್ಬಳಿಗೆ ಕರೆದೊಯ್ಯಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣದ ಪಕ್ಕಾ ಮಾಹಿತಿ ಪಡೆದ ಪೊಲೀಸರು ಇಂತಹ ವಾಹನಗಳ ಮೇಲೆ ಚಿಕ್ಕೋಡಿ ಡಿಎಸ್ಪಿ ಹಾಗೂ ನಿಪ್ಪಾಣಿ ಪೋಲಿಸ್ ನೇತೃತ್ವದಲ್ಲಿ ದಾಳಿ ನಡೆಸಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಒಂದು ಖಾಸಗಿ ಬಸ್ ಹಾಗೂ ಮ್ಯಾಕ್ಸಿಕೊ ಕ್ಯಾಬ್ ಜಪ್ತಿ ಮಾಡಿದ್ದಾರೆ‌. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Source: newsfirstlive.com Source link