ಸಿಸಿಟಿವಿ ಧ್ವಂಸಗೊಳಿಸಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ಬೀದರ್ : ಬ್ಯಾಂಕ್ ಎಟಿಎಂ ಹಾಗೂ ಸಿಸಿ ಟಿವಿ ಧ್ವಂಸ ಮಾಡಿ ದರೋಡೆಕೋರ ಕಳ್ಳತನಕ್ಕೆ ವಿಫಲ ಯತ್ನ ಮಾಡಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ್ ಗ್ರಾಮದಲ್ಲಿ ಎಸ್.ಬಿಐ ಬ್ಯಾಂಕ್ ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ಮಾಡಿ ಹಣ ಸಿಗದೆ ದರೋಡೆಕೋರ ಬರಿಗೈಯಲ್ಲಿ ತೆರಳಿದ್ದಾನೆ. ಇದನ್ನೂ ಓದಿ: ಬೈಕ್ ಅಪಘಾತ- ಚಿಕಿತ್ಸೆ ಫಲಿಸದೆ ಸೈನಿಕ ಸಾವು

ದರೋಡೆಕೋರ ಎಟಿಎಂ ಒಳಗಡೆ ನುಗ್ಗಿ ದರೋಡೆಗೆ ಯತ್ನ ಮಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಕಳ್ಳತನ ಮಾಡಲು ಬಂದಿದ್ದ ಕಳ್ಳ ಸಿಸಿ ಟಿವಿ ಗಮನಿಸಿದ ಬಳಿಕ ಎಚ್ಚರಗೊಂಡು ಸಿಸಿಟಿವಿಯನ್ನು ಧ್ವಂಸ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.  ಇದನ್ನೂ ಓದಿ: ರೌಡಿಶೀಟರ್​ನಿಂದ ಪಾನ್ ಶಾಪ್ ಮಾಲೀಕನ ಬರ್ಬರ ಹತ್ಯೆ

ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಅಧಾರದ ಮೇಲೆ ಮಂಠಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರನ ಶೋಧಕ್ಕಾಗಿ ಬಲೆ ಬಿಸಿದ್ದಾರೆ.

Source: publictv.in Source link