ಕಾಬೂಲ್​​ನಲ್ಲಿ ಭಾರತ ಮೂಲದ ಅಫ್ಘಾನ್ ಪ್ರಜೆ ಅಪಹರಣ

ಕಾಬೂಲ್​​ನಲ್ಲಿ ಭಾರತ ಮೂಲದ ಅಫ್ಘಾನ್ ಪ್ರಜೆ ಅಪಹರಣ

ಅಫ್ಘಾನಿಸ್ತಾನ: ಕಾಬೂಲ್​​ನಲ್ಲಿ ಭಾರತ ಮೂಲದ ಅಫ್ಘಾನ್​​​​ ಒಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ವರದಿಯಾಗಿದೆ. ಭಾರತದ ಅಫ್ಘಾನ್​​ ಪ್ರಜೆಯಾದ ಬನ್ಸಾರಿ ಲಾಲ್​​ ಎಂಬುವರನ್ನು ಸೆಪ್ಟೆಂಬರ್​​ 14 ಮಂಗಳವಾರ ಬೆಳಿಗ್ಗೆ ಅಪಹರಣ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬನ್ಸಾರಿ ಮೂಲತಃ ಉದ್ಯಮಿ. ತನ್ನ ಸ್ಟಾಪ್​​​​ ಜತೆ ಕಾರ್​​ ಒಂದರಲ್ಲಿ ತೆರಳಿದ ವೇಳೆ ಯಾರೋ ಬಂದು ಅಪಹರಿಸಿದ್ದಾರೆ. ಅಲ್ಲದೇ ಬನ್ಸಾರಿ ಡ್ರೈವ್​​ ಮಾಡುತ್ತಿದ್ದಾಗ ಕಾರನ್ನು ಹಿಂದಿನಿಂದ ಬಂದು ಗುದ್ದಿದ್ದಾರೆ. ಇದಾದ ನಂತರ ಅಪಹರಿಸಲಾಗಿದೆ ಎನ್ನುತ್ತಿವೆ ಮೂಲಗಳು.

ಇನ್ನು, ಈ ವಿಚಾರವಾಗಿ ಪ್ರತಿಕ್ರಿಯಿಸಿದ ತಾಲಿಬಾನ್​​ ವಕ್ತಾರ ಸುಹೈಲ್​​ ಶಾಹೀನ್​​, ಬನ್ಸಾರಿ ಅಪಹರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು. ಬನ್ಸಾರಿ ಲಾಲ್​​​ ಕುಟುಂಬ ದೆಹಲಿಯಲ್ಲಿ ವಾಸವಿದೆ.

Source: newsfirstlive.com Source link