ಮತ್ತೆ ದಾವೂದ್, ಪಾಕ್ ಖತರ್ನಾಕ್ ಸ್ಕೆಚ್​; ಬಗೆದಷ್ಟೂ ಬಿಚ್ಚಿಕೊಳ್ತಿದೆ ಬಂಧಿತ ಉಗ್ರರ ಬ್ಲಾಸ್ಟ್​ ಪ್ಲಾನ್​

ಮತ್ತೆ ದಾವೂದ್, ಪಾಕ್ ಖತರ್ನಾಕ್ ಸ್ಕೆಚ್​; ಬಗೆದಷ್ಟೂ ಬಿಚ್ಚಿಕೊಳ್ತಿದೆ ಬಂಧಿತ ಉಗ್ರರ ಬ್ಲಾಸ್ಟ್​ ಪ್ಲಾನ್​

ಈ ಸ್ಟೋರಿ ಓದಿದ್ರೆ ನೀವು ಭಾರತೀಯ ತನಿಖಾ ತಂಡಗಳಿಗೆ ಧನ್ಯವಾದ ಹೇಳೇ ಹೇಳ್ತೀರಾ.. ಯಾಕಂದ್ರೆ, ಒಂದು ವೇಳೆ ಈ ಉಗ್ರರನ್ನ ಏನಾದ್ರೂ ಬಂಧಿಸದೇ ಇದ್ದಿದ್ದರೆ.. ಹಬ್ಬದ ಖುಷಿಯಲ್ಲಿ ಇರಬೇಕಾಗಿದ್ದ ಭಾರತೀಯರನ್ನ ರಕ್ತದ ಮಡುವಲ್ಲಿ ಈ ಕಿರಾತಕರು ಮಲಗಿಸಿ ಬಿಡುತ್ತಿದ್ದರು. ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದಂತೆ, ಇಡೀ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಈ ಉಗ್ರರು, ಸರಣಿ ಬಾಂಂಬ್​​ ಸ್ಫೋಟಿಸಿ ಬಿಡ್ತಾ ಇದ್ರು..

ಎಸ್.. ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ನಿನ್ನೆ ಮಹಾ ಕಾರ್ಯಾಚರಣೆಯೊಂದರಲ್ಲಿ 6 ಮಂದಿ ಉಗ್ರರನ್ನು ಬಂಧಿಸಿತ್ತು ಬಂಧಿತರಲ್ಲಿ ನಾಲ್ವರು ಉಗ್ರರ ಫೋಟೋಗಳನ್ನ ರಿಲೀಸ್ ಮಾಡಿದೆ. ಜೀಷನ್ ಕಮಾರ್, ಒಸಾಮಾ, ಜನ್ ಮೊಹಮ್ಮದ್ ಅಲಿ ಶೇಖ್, ಮೊಹಮ್ಮದ್ ಅಬುಬಕ್ಕರ್ ಬಂಧಿತ ಉಗ್ರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ನಂಟು-ದಾವುದ್​ನ ಸ್ಕೆಚ್ಚು

ವಿಶೇಷ ಅಂದ್ರೆ ಈ ಆರು ಜನ ಬಂಧಿತರಲ್ಲಿ ಒಸಾಮಾ ಮತ್ತು ಜೀಶಾನ್ ಅನ್ನೋ ವ್ಯಕ್ತಿಗಳು ಮೂಲತಃ ಭಾರತೀಯರೇ ಆಗಿದ್ದರೂ, ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಟ್ರೇನಿಂಗ್ ಪಡೆದುಕೊಂಡು ಬಂದಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಇವರು ಹೇಗೆ ಪಾಕಿಸ್ತಾನಕ್ಕೆ ಹೋದರು? ಅಲ್ಲಿ ಇವರಿಬ್ಬರೇ ಇದ್ದರಾ? ಅಥವಾ ಇನ್ನೂ ಹಲವರು ಇದ್ದರಾ? ಅನ್ನೋ ಪ್ರಶ್ನೆಗೆ ಕೂಡ ಇದೇ ಉಗ್ರರು, ಪ್ರಾಥಮಿಕ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ ಅಂತಾ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ತಿಳಿಸಿದೆ.

blank

ಮೊದಲು ಮಸ್ಕತ್​​ಗೆ ನಂತರ ಪಾಕಿಸ್ತಾನಕ್ಕೆ

ಈ ಇಬ್ಬರೂ ಶಂಕಿತ ಉಗ್ರರು ಪಾಕಿಸ್ತಾನಕ್ಕೆ ಹೋಗಿದ್ದೇ ರೋಚಕ ಜರ್ನಿ ಹೌದು.. ಇವರಿಬ್ಬರು ಅಲ್ಲದೇ ಸುಮಾರು 15-16 ಬಾಂಗ್ಲಾ ಭಾಷೆ ಮಾತನಾಡುತ್ತಿದ್ದ ಮತ್ತಷ್ಟು ಜನರನ್ನು ಮಸ್ಕತ್​​ಗೆ ಕರೆಸಲಾಗಿರುತ್ತೆ. ಅಲ್ಲಿ ಅವರನ್ನು ಹಲವು ಪುಟ್ಟ ಪುಟ್ಟ ಗ್ರೂಪ್​ಗಳನ್ನಾಗಿ ವಿಂಗಡಿಸಲಾಗುತ್ತೆ. ಬಳಿಕ ಒಸಾಮಾ ಮತ್ತು ಜೀಶಾನ್ ಈ ಇಬ್ಬರನ್ನು ಕಡಲ ಮಾರ್ಗದ ಮೂಲಕ ಪಾಕಿಸ್ತಾನಕ್ಕೆ ಸಾಗಿಸಲಾಗುತ್ತೆ. ಅದೂ ಕೂಡ ನೇರ ಹಡಗು ಅಥವಾ ಬೋಟ್ ಮೂಲಕ ಅಲ್ಲ.. ಇದಕ್ಕಾಗಿ ಹಲವು ದಿನಗಳನ್ನ ತೆಗೆದುಕೊಳ್ಳಲಾಗಿರುತ್ತೆ.. ಮಾರ್ಗ ಮಧ್ಯದಲ್ಲಿ ಸಾಕಷ್ಟು ಬಾರಿ ಹಡಗು, ಬೋಟ್​ಗಳನ್ನ ಕೂಡ ಬದಲಿಸಲಾಗಿರುತ್ತೆ.. ಬಳಿಕ ಅವರನ್ನ ಪಾಕಿಸ್ತಾನದ ಕರಾಚಿಯಲ್ಲಿರುವ ಗ್ವಾದರ್ ಬಂದರಿಗೆ ಕರೆ ತರಲಾಗುತ್ತೆ. ಗ್ವಾದರ್​ ಬಳಿಯ ಜಿಯೋನಿ ಅನ್ನೋ ಗ್ರಾಮದಲ್ಲಿ ಇವರನ್ನು ಪಾಕಿಸ್ತಾನಿಯೊಬ್ಬ ಸ್ವಾಗತಿಸ್ತಾನೆ. ಬಳಿಕ ಇವರನ್ನ ಥಟ್ಟ ಅನ್ನೋ ಪ್ರದೇಶದಲ್ಲಿಯ ಫಾರ್ಮ್ ಹೌಸ್ ಒಂದಕ್ಕೆ ಕರೆ ತರಲಾಗಿರುತ್ತೆ. ಆ ಫಾರ್ಮ್ ಹೌಸಿನಲ್ಲಿ ಮೂರು ಜನ ಪಾಕಿಸ್ತಾನಿ ನಾಗರಿಕರು ಇರ್ತಾರೆ. ಅಷ್ಟೇ ಅಲ್ಲ ಇವರಿಬ್ಬರಿಗಗೆ ಟ್ರೇನಿಂಗ್ ನೀಡಲು ಪಾಕಿಸ್ತಾನಿ ಆರ್ಮಿಯ ಇಬ್ಬರು ಅಧಿಕಾರಿಗಳಾದ ಜಬ್ಬಾರ್ ಮತ್ತು ಹಮ್ಜಾ ಅನ್ನೋರು ಕರೆದೊಯ್ಯುತ್ತಾರೆ..

ಇವರಿಗೆ ಕೊಟ್ಟ ಟ್ರೇನಿಂಗ್ ಏನು?

ಪಾಕಿಸ್ತಾನದಲ್ಲಿ ಇವರಿಗೆ ಪ್ರಮುಖವಾಗಿ ಚಿಕ್ಕ ಚಿಕ್ಕ ಗನ್​ಗಳನ್ನು ಹೇಗೆ ಆಪರೇಟ್ ಮಾಡೋದು? ಎ.ಕೆ 47 ಆಪರೇಟ್ ಮಾಡೋದು ಹೇಗೆ? ಅದನ್ನು ಅಸೆಂಬಲ್ ಮತ್ತು ಡಿಸೇಬಲ್ ಮಾಡೋದು ಹೇಗೆ? ಅನ್ನೋದರ ಬಗ್ಗೆ ವಿಸ್ತೃತವಾದ ಟ್ರೇನಿಂಗ್ ನೀಡಲಾಗುತ್ತೆ. ಅಷ್ಟೇ ಅಲ್ಲ ಸ್ಫೋಟಕಗಳನ್ನು ಹೇಗೆ ಬಳಸಬೇಕು? IED ಗಳನ್ನು ಜೋಡಿಸೋದು ಹೇಗೆ? ಸಾಗಾಣಿಕೆ ಹೇಗೆ ಮಾಡಬೇಕು? ಮುಂತಾದ ವಿಚಾರಗಳನ್ನು ಕೂಡ ಹೇಳಿಕೊಡಲಾಗಿರುತ್ತೆ. ಈ ಇಬ್ಬರು ಪ್ರಾರಂಭಿಕ ಉಗ್ರರಿಗೆ ಸುಮಾರು 15 ದಿನಗಳ ಕಾಲ ಟ್ರೇನಿಂಗ್ ಅನ್ನು ಪಾಕಿಸ್ತಾನದಲ್ಲಿ ನೀಡಲಾಗಿರುತ್ತೆ ಅಂತಾ ಮೂಲಗಳಿಂದ ತಿಳಿದು ಬಂದಿದೆ.

blank

ಉಗ್ರರ ಪ್ಲಾನಿಂಗ್ ಏನಿತ್ತು? 

ಈ ಬಾರಿ ಪಾಕಿಸ್ತಾನಿಗಳು ಮತ್ತು ಭಾರತದಲ್ಲೇ ಇರುವ ಭಾರತೀಯರೇ ಆಗಿರುವ ದ್ರೋಹಿಗಳು ಬಹುದೊಡ್ಡ ಸ್ಕೆಚ್​ ಹಾಕಿದ್ದರು. ದೇಶಾದ್ಯಂತ ಸ್ಫೋಟ ನಡೆಸಬೇಕು ಅನ್ನೋದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಇಬ್ಬರು ಪಾಕಿಸ್ತಾನಿ ಟ್ರೇನ್​ಡ್ ಉಗ್ರರು ಮಾತ್ರವಲ್ಲ, ಭಾರತದಲ್ಲಿಯೂ ಈಗ ಬಂಧಿತರಾಗಿರುವ ಇನ್ನೂ ನಾಲ್ಕು ಜನ ಸೇರಿದಂತೆ ಹಲವರ ಸ್ಲೀಪಿಂಗ್ ಸೆಲ್​​ ಆ್ಯಕ್ಟಿವೇಟ್ ಮಾಡಲಾಗಿತ್ತು ಎನ್ನಲಾಗಿದೆ. ಈ ಬಾರಿ ಉಗ್ರರು ಎರಡು ತಂಡಗಳಾಗಿ ಕಾರ್ಯ ನಿರ್ವಹಿಸಲು ಮುಂದಾಗಿದ್ದರು.

ತಂಡ ಒಂದು- ಉಗ್ರರ ಒಂದು ತಂಡದೊಂದಿಗೆ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಉಗ್ರ ದಾವೂದ್ ಇಬ್ರಾಹಿಂನ ಸಹೋದರ, ಅನೀಸ್ ಇಬ್ರಾಹಿಂ ಸ್ಫೋಟಕಗಳನ್ನು ಗಡಿದಾಟಿಸಿ ಹಸ್ತಾಂತರಿಸುತ್ತಿದ್ದ. ಈ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಉಗ್ರರ ಈ ತಂಡ ದೇಶದೊಳಗೆ ಸಾಗಿಸಬೇಕಿತ್ತು. ತಮ್ಮ ನೆಟ್​ವರ್ಕ್​​ ಮೂಲಕ ದೇಶಾದ್ಯಂತ ಇವುಗಳನ್ನು ಸಾಗಿಸಿ ಬಚ್ಚಿಡುವ ಮತ್ತು ಆರ್ಡರ್​ ಬಂದಾಗ ಸ್ಫೋಟಿಸುವ ಟಾರ್ಗೆಟ್​ ಅನ್ನ ನೀಡಲಾಗಿತ್ತು.

ತಂಡ ಎರಡು-  ಉಗ್ರರ ಮತ್ತೊಂದು ತಂಡವನ್ನ ಉಗ್ರ ಚಟುವಟಿಕೆಗಳಿಗೆ ಬೇಕಾಗಿದ್ದ ಹಣಕಾಸಿನ ವ್ಯವಸ್ಥೆ ಮಾಡಲು ನಿಯೋಜನೆ ಮಾಡಲಾಗಿತ್ತು. ಈ ತಂಡ ಹಾವಾಲಾ ಮತ್ತು ಅಂಡರ್​ವರ್ಲ್ಡ್​ ನೆಟ್​ವರ್ಕ್​ ಮೂಲಕ ಬಹುಕೋಟಿ ಹಣಕಾಸಿನ ವ್ಯವಸ್ಥೆ ಮಾಡಲು ಮುಂದಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮುಂಬೈ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಸ್ಫೋಟದ ಸಂಚು ರೂಪಿಸಿದ್ದ 6 ಉಗ್ರರ ಬಂಧನ

ಮುಂಬೈನಲ್ಲಿ ತುರ್ತು ಸಭೆ

ಒಂದು ಕಡೆ ಉಗ್ರರ ಹವಾಲಾ ನಂಟು ಬಹಿರಂಗವಾಗುತ್ತಿದ್ದಂತೆಯೇ, ಮುಂಬೈ ಪೊಲೀಸರು ಕೂಡ ಚುರುಕಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಗೃಹ ಸಚಿವರ ಕಚೇರಿಗೆ ಉನ್ನತ ಪೊಲಿಸ್ ಅಧಿಕಾರಿಗಳು ಭೇಟಿ ನೀಡಿ ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ.

 

Source: newsfirstlive.com Source link