ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿರುದ್ಧ ಕೇಸ್​​​

ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿರುದ್ಧ ಕೇಸ್​​​

ಲಕ್ನೋ: ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವಾಗ ರಾಷ್ಟ್ರ ಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಪ್ರಕರಣ ದಾಖಲಾಗಿದೆ. ನಡ್ಡಾ ವಿರುದ್ಧ ಚಂದ್ರ ಕಿಶೋರ್ ಪರಾಶರ್ ದೂರು ನೀಡಿದ್ದು, ಮುಜಾಫರ್‌ಪುರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಯಾಣ್​ಸಿಂಗ್​ ಅಂತ್ಯಕ್ರಿಯೆ ವೇಳೆ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ ಇಟ್ಟಿದ್ರು, ಇದನ್ನ ವಿರೋಧಿಸಿ ಜೆ.ಪಿ ನಡ್ಡಾ ವಿರುದ್ಧ ದೂರು ಕೊಡಲಾಗಿದೆ. ಬಿಜೆಪಿ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದೆ ಅಂತ ದೂರುದಾರರು ಆರೋಪಿಸಿದ್ದು, ತಮ್ಮ ಅರ್ಜಿಗೆ ಪೂರಕವಾಗಿ ಕೆಲವು ಚಿತ್ರಗಳನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ‘ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮ, ಕಾಂಗ್ರೆಸ್​​ ಹೇಳಿದ್ದು ಸತ್ಯ’- ಸ್ವಪಕ್ಷದ ವಿರುದ್ಧವೇ ಈಶ್ವರಪ್ಪ ಕಿಡಿ

Source: newsfirstlive.com Source link