‘ರಾಹುಲ್​​ ದ್ರಾವಿಡ್​​ ಟೀಮ್​​ ಇಂಡಿಯಾದ ತಾತ್ಕಲಿಕ ಕೋಚ್’- ಗಂಗೂಲಿ ಹೀಗೆ ಅಂದಿದ್ಯಾಕೆ?

‘ರಾಹುಲ್​​ ದ್ರಾವಿಡ್​​ ಟೀಮ್​​ ಇಂಡಿಯಾದ ತಾತ್ಕಲಿಕ ಕೋಚ್’- ಗಂಗೂಲಿ ಹೀಗೆ ಅಂದಿದ್ಯಾಕೆ?

ಟೀಮ್​ ಇಂಡಿಯಾ ಕೋಚ್​ ಆಗೋ ವಿಷಯದಲ್ಲಿ, ದ್ರಾವಿಡ್​​ ಪಾತ್ರ ಏನಿರಲಿದೆ.? ಹೀಗೊಂದು ಪ್ರಶ್ನೆ ಕ್ರಿಕೆಟ್​ ಲೋಕದಲ್ಲಿ ಮಾರ್ದನಿಸುತ್ತಿದೆ. ಆದರೀಗ ಇದಕ್ಕೆ ಸಂಬಂಧಪಟ್ಟಂತೆ ಬಿಸಿಸಿಐನಿಂದ, ಹೊಸ ಅಪ್​ಡೇಟ್​ ಒಂದು ಬಂದಿದೆ. ಹಾಗಾದ್ರೆ ದ್ರಾವಿಡ್​​​​​ ಕೋಚ್​ ಆಗ್ತಾರಾ, ಇಲ್ವಾ ಎಂಬ ಪ್ರಶ್ನೆ ಎದ್ದಿದೆ.

ಟಿ20 ವಿಶ್ವಕಪ್ ನಂತರ ಟೀಮ್​​ ಇಂಡಿಯಾ ಹೆಡ್ ​ಕೋಚ್ ರವಿ ಶಾಸ್ತ್ರಿ ಅವಧಿ ಮುಕ್ತಾಯವಾಗಲಿದೆ. ಆದ್ರೆ ಶಾಸ್ತ್ರಿ ಒಪ್ಪಂದವನ್ನ ವಿಸ್ತರಿಸೋಕೆ, BCCI ಇಚ್ಛಿಸುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. ಇನ್ನೊಂದೆಡೆ ರಾಹುಲ್ ದ್ರಾವಿಡ್ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಳ್ಳಬಹುದು ಎನ್ನಲಾಗ್ತಿದೆ. ಆದರೆ​​ ದ್ರಾವಿಡ್​​ ಕೋಚ್​ ಆಗ್ತಾರಾ ಅನ್ನೋದೇ, ಕುತೂಹಲ ಮೂಡಿಸಿದೆ. ಜೊತೆಗೆ ದ್ರಾವಿಡ್​ ನಡೆ ಏನು ಎಂಬುದೇ, ಸದ್ಯ ಯಾರಿಗೂ ತಿಳಿಯದಂತಾಗಿದೆ.

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳಿದ ಲಸಿತ್​ ಮಲಿಂಗ..!

ಇತ್ತ ವಿಶ್ವಕಪ್​ ಬಳಿಕ ರವಿ ಶಾಸ್ತ್ರಿ ವಿದಾಯ ಹೇಳೋದು ಖಚಿತವಾಗಿದೆ. ಅದಕ್ಕಾಗಿಯೇ ಬಿಸಿಸಿಐ ಆಗಸ್ಟ್​​​ನಲ್ಲಿಯೇ ಟೀಮ್​ ಇಂಡಿಯಾ ಹೆಡ್​​ಕೋಚ್​ ಹುದ್ದೆಗೆ ಅರ್ಜಿ ಕರೆದಿದೆ. ಆದರೆ ಶಾಸ್ತ್ರಿ ಬಳಿಕ ದ್ರಾವಿಡ್ ಕೋಚ್​ ಆಗ್ತಾರೆ ಎಂದುಕೊಂಡಿದ್ದ ಕೋಟ್ಯಂತರ ಅಭಿಮಾನಿಗಳ ಕನಸು, ಕಮರಿತು.! ಏಕಂದ್ರೆ ದಿ ವಾಲ್,​​ ಮತ್ತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ಮರು ನೇಮಕ ಬಯಸಿ, ಅರ್ಜಿ ಸಲ್ಲಿಸಿದ್ದಾರೆ.

blank

ರಾಹುಲ್​​ ದ್ರಾವಿಡ್​​​ ತಾತ್ಕಾಲಿಕ ಕೋಚ್​ ಎಂದ ಗಂಗೂಲಿ
ಕೋಚ್​ ಆಗ್ತಾರೆಂಬ ವದಂತಿಗಳಿಗೆ, ಎನ್​​ಸಿಎಗೆ ಅರ್ಜಿ ಸಲ್ಲಿಸುವ ಮೂಲಕ ಪುಲ್​ಸ್ಟಾಪ್​​​​​​ ಇಟ್ಟಿದ್ದಾರೆ ದ್ರಾವಿಡ್. ಆದರೀಗ ಟೀಮ್​ ಇಂಡಿಯಾ ಕೋಚ್​ ಕುರಿತು ಹೊಸ ಅಪ್‌ಡೇಟ್​ ಒಂದು ಬಹಿರಂಗಗೊಂಡಿದೆ. ಪೂರ್ಣಾವಧಿ ಕೋಚ್ ಆಗೋಕೆ ದ್ರಾವಿಡ್​ಗೆ ಇಂಟ್ರೆಸ್ಟ್​ ಇಲ್ಲವಾದ್ರೂ, ತಾತ್ಕಾಲಿಕವಾಗಿ ತಂಡಕ್ಕೆ ಗುರುವಾಗಲಿದ್ದಾರಂತೆ. ಹೀಗಂತ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
‘ದ್ರಾವಿಡ್​ ನಡೆಯೇ ನಿಗೂಢ​’

‘ದ್ರಾವಿಡ್ ಜೊತೆ ಕೋಚ್​​ ಸ್ಥಾನದ ಬಗ್ಗೆ ಮಾತುಕತೆ ನಡೆಸಿಲ್ಲ. ಆದರೆ ಶಾಶ್ವತವಾಗಿ ಕೋಚ್​ ಸ್ಥಾನದಲ್ಲಿ ಮುಂದುವರಿಯೋದಕ್ಕೆ, ದ್ರಾವಿಡ್​​ ಆಸಕ್ತಿ ಹೊಂದಿಲ್ಲ ಅನ್ನೋದನ್ನ ಅರ್ಥಮಾಡಿಕೊಂಡಿದ್ದೇನೆ. ಏನಿದ್ದರೂ ತಾತ್ಕಾಲಿಕ ಕಾರ್ಯನಿರ್ವಹಿಸಲು ದೃಷ್ಟಿನೆಟ್ಟಿದ್ದಾರೆ ಅನ್ನೋದು ಅವರ ನಡೆ ಸೂಚಿಸುತ್ತೆ. ಆದರೆ ದ್ರಾವಿಡ್​ ನಡೆಯೇ ನಿಗೂಢ’
                                                                                         -ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಇತ್ತ ಬಿಸಿಸಿಐ ನೋಡಿದ್ರೆ ದ್ರಾವಿಡ್​ ತಾತ್ಕಾಲಿಕ ಕೋಚ್​ ಆಗೋ ಸಾಧ್ಯತೆ ಇದೆ ಅನ್ನೋ ಸುಳಿವು ನೀಡಿದೆ. ಆದರೆ ಮಾಜಿ ಕ್ರಿಕೆಟರ್ಸ್​ ಮಾತ್ರ, ರಾಹುಲ್​​ ದ್ರಾವಿಡೇ ಹೆಡ್​​​​ಕೋಚ್ ಎಂದು ಹೇಳ್ತಿದ್ದಾರೆ. ಅತ್ತ ದ್ರಾವಿಡ್​, ನಾನು ಪ್ರಿಪೇರ್​ ಆಗಿಲ್ಲ. ನನಗೆ ಕೋಚ್​​ ಆಗುವ ಉದ್ದೇಶ ಇಲ್ಲ ಅಂತ, ಈ ಮೊದಲು ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಬಿಸಿಸಿಐಗೆ ಈವರೆಗೂ ಮಾಹಿತಿ ನೀಡದ ದ್ರಾವಿಡ್​ ನಡೆ ಏನಿರಬಹುದು ಅನ್ನೋದು ಕುತೂಹಲ ಮೂಡಿಸಿದೆ. ಹಾಗಾದ್ರೆ ಟೀಮ್ ಇಂಡಿಯಾದ ಮುಂದಿನ ಕೋಚ್​​ ಆಗೋದು ಯಾರು..?

 

Source: newsfirstlive.com Source link