‘ಉಗ್ರರ ಮೇಲೆ ಡ್ರೋನ್​​ ದಾಳಿಗೆ ಭಾರತದ ವಾಯುನೆಲೆ ಬಳಕೆ’- ಅಮೆರಿಕಾ

‘ಉಗ್ರರ ಮೇಲೆ ಡ್ರೋನ್​​ ದಾಳಿಗೆ ಭಾರತದ ವಾಯುನೆಲೆ ಬಳಕೆ’- ಅಮೆರಿಕಾ

ವಾಶಿಂಗ್ಟನ್: ಅಫ್ಘಾನಿಸ್ತಾನ ಹಾಗೂ ಅಲ್ಲಿಯ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ವೈಮಾನಿಕ ಕಣ್ಗಾವಲಿಡುವ ಸಂಬಂಧ ಭಾರತದೊಂದಿಗೆ ಅಮೆರಿಕಾ ಮಾತುಕತೆ ನಡೆಸಿದೆ. ಉಗ್ರರ ಮೇಲೆ ಡ್ರೋನ್ ದಾಳಿ ನಡೆಸಲು ಭಾರತದ ವಾಯುನೆಲೆಗಳನ್ನು ಬಳಸಿಕೊಳುವುದಾಗಿ ಚರ್ಚಿಸಲಾಗಿದೆ.

ಈ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಮಾಹಿತಿ ನೀಡಿದ್ದು, ತಾಲಿಬಾನಿಗಳು ಹಾಗೂ ಪಾಕಿಸ್ತಾನದ ಐಎಸ್‌ಐ ನಡುವೆ ಭಾಂದವ್ಯ ಹೆಚ್ಚಿದೆ. ಇದರಿಂದ ಅಮೆರಿಕಾಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಭಾರತದ ವೈಮಾನಿಕ ನೆಲೆ ಬಳಸುವುದಕ್ಕಾಗಿ ಬೈಡನ್ ಆಡಳಿತ ಮೋದಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಎಂದರು.

ಇದನ್ನೂ ಓದಿ: ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ: ಕಳ್ಳರ ಕೈ ಕಟ್, ಅಕ್ರಮ ಸಂಬಂಧಕ್ಕೆ ಏನು ಶಿಕ್ಷೆ ಗೊತ್ತಾ?!

Source: newsfirstlive.com Source link