ಬ್ಯುಸಿ ಶೆಡ್ಯೂಲ್​​ನಿಂದ ಬಸವಳಿದ ರೋಹಿತ್​​​, ಬುಮ್ರಾ; ಹ್ಯಾಟ್ರಿಕ್​​​​ IPL ಕಪ್​​ ಗೆಲ್ಲೋ ಲೆಕ್ಕಚಾರದಲ್ಲಿ ಮುಂಬೈ

ಬ್ಯುಸಿ ಶೆಡ್ಯೂಲ್​​ನಿಂದ ಬಸವಳಿದ ರೋಹಿತ್​​​, ಬುಮ್ರಾ; ಹ್ಯಾಟ್ರಿಕ್​​​​ IPL ಕಪ್​​ ಗೆಲ್ಲೋ ಲೆಕ್ಕಚಾರದಲ್ಲಿ ಮುಂಬೈ

13ನೇ ಆವೃತ್ತಿ ಐಪಿಎಲ್​ನಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ್ದ ಮುಂಬೈ ಇಂಡಿಯನ್ಸ್​ ತಂಡ, ಮತ್ತೆ ಕಿರೀಟ ಗೆಲ್ಲೋ ಕನವರಿಕೆಯಲ್ಲಿದೆ. ಹ್ಯಾಟ್ರಿಕ್​ ಐಪಿಎಲ್​ ಕಪ್​ ಗೆಲ್ಲೋ ಲೆಕ್ಕಾಚಾರದಲ್ಲಿರುವ ರೋಹಿತ್​ ಬಳಗದ ಮುಂದೆ, ಸವಾಲುಗಳೂ ಇವೆ. ಆ ಚಾಲೆಂಜಸ್​​ಗಳನ್ನ ಹಾಲಿ ಚಾಂಪಿಯನ್ಸ್ ಪಡೆ​ ಮೆಟ್ಟಿ ನಿಲ್ಲುತ್ತಾ.?

blank

14ನೇ ಆವೃತ್ತಿಯ 2ನೇ ಹಂತದ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಕ್ಕೆ, 5 ದಿನ ಮಾತ್ರ ಬಾಕಿ ಇದೆ..! ಸೂಪರ್​ ಸಂಡೆಯ ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್​​ ಕಿಂಗ್ಸ್​ ನಡುವಿನ ಹೈವೋಲ್ಟೆಜ್​ ಹಣಾಹಣಿಯೊಂದಿಗೆ, 2ನೇ ಹಂತದ ಐಪಿಎಲ್​ಗೆ ಕಿಕ್​ ಸ್ಟಾರ್ಟ್​​ ಸಿಗಲಿದೆ. ಮೊದಲಾರ್ಧದ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ಇದೀಗ ಹ್ಯಾಟ್ರಿಕ್ ಕಪ್​​ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದ್ರೆ, ಈ ಬಾರಿಯ ಗೆಲುವು ರೋಹಿತ್​ ಪಡೆಗೆ ಸವಾಲಿನದ್ದಾಗಿದೆ.

ಬ್ಯುಸಿ ಶೆಡ್ಯೂಲ್​ನಿಂದ ಬಸವಳಿದಿದ್ದಾರೆ ರೋಹಿತ್ ​- ಬೂಮ್ರಾ.!

ನಾಯಕ ರೋಹಿತ್​ ಶರ್ಮಾ, ಕೀ ಬೌಲರ್​ ಜಸ್​​ಪ್ರಿತ್​ ಬೂಮ್ರಾ ಕಳೆದ ಕೆಲ ತಿಂಗಳಿನಿಂದ ಟೆಸ್ಟ್​ ಕ್ರಿಕೆಟ್​ನಲ್ಲೇ ಬ್ಯುಸಿಯಾಗಿದ್ರು. ಸತತ ಲಾಂಗರ್​ ಫಾರ್ಮ್ಯಾಟ್​ ಆಡಿರುವ ಸ್ಟಾರ್​​ಗಳ ಆಟಗಾರರು ಒಮ್ಮೆಲೆ ಟಿ20 ಮಾದರಿಗೆ ಹೇಗೆ ಶಿಫ್ಟ್​ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಅದರ ಜೊತೆಗೆ ಸುದೀರ್ಘ ಕ್ರಿಕೆಟ್​​ನಿಂದ ಬಸವಳಿದಿರುವ ಇವರು ಫಿಟ್​​ನೆಸ್​ ಕಾಯ್ದುಕೊಳ್ತಾರಾ ಅನ್ನೋ ಪ್ರಶ್ನೆಯೂ ಹುಟ್ಟಿದೆ.

blank

ಹಾರ್ದಿಕ್, ಕಿಶನ್​ ಪ್ರದರ್ಶನವೂ ಆಗಲಿದೆ ನಿರ್ಣಾಯಕ.!
ಮುಂಬೈ ಕ್ಯಾಂಪ್​ನ ನಂಬಿಕಸ್ಥ ಬ್ಯಾಟ್ಸ್​​ಮನ್​ಗಳಾದ ಇಶಾನ್​ ಕಿಶನ್, ಹಾರ್ದಿಕ್​ ಪಾಂಡ್ಯ ಮೊದಲಾರ್ಧದಲ್ಲಿ ಭರವಸೆ ಹುಸಿಗೊಳಿಸಿದ್ದಾರೆ. 5 ಇನ್ನಿಂಗ್ಸ್​​ಗಳನ್ನಾಡಿದ ಕಿಶನ್​ 14.60ರ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ರೆ, 6 ಇನ್ನಿಂಗ್ಸ್​​​​​ಗಳಲ್ಲಿ ಕಣಕ್ಕಿಳಿದ ಹಾರ್ದಿಕ್​ ರನ್​ಗಳಿಕೆಯ ಸರಾಸರಿ ಕೇವಲ 8.66. ಶ್ರೀಲಂಕಾ ಪ್ರವಾಸದಲ್ಲೂ ಈ ಇಬ್ಬರ ಪ್ರದರ್ಶನ ಅಷ್ಟಕಷ್ಟೇ..! ಅದಲ್ಲದೇ ಫಿಟ್​ನೆಸ್​​ ಸಮಸ್ಯೆಯೂ ಹಾರ್ದಿಕ್​ರನ್ನ ಬಿಡದೇ ಕಾಡ್ತಿದೆ. ಸೆಕೆಂಡ್​ ಹಾಫ್​ನಲ್ಲೂ ಇದು ಮುಂದುವರೆದಿದ್ದೇ ಆದ್ರೆ, ತಂಡಕ್ಕೆ ಹಿನ್ನಡೆ ಕಟ್ಟಿಟ್ಟ ಬುತ್ತಿ.

ಇನ್ನು ಕ್ವಿಂಟನ್​ ಡಿ ಕಾಕ್, ಸೂರ್ಯ ಕುಮಾರ್​​​, ಕಿರನ್​ ಪೊಲಾರ್ಡ್ ಕೂಡ ಮೊದಲಾರ್ಧದಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ. ಆಲ್​​​ರೌಂಡರ್​​ ಕೃನಾಲ್​ ಪಾಂಡ್ಯ ಬ್ಯಾಟ್​ ಮತ್ತು ಬೌಲ್​ ಎರಡರಲ್ಲೂ ಫೇಲ್​ ಆಗಿದ್ರೆ, ಜಯಂತ್​ ಯಾದವ್​ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ರು. ಯುಎಇನಲ್ಲಿ ಆಡಬೇಕಿರುವ ಉಳಿದ ಪಂದ್ಯಗಳಲ್ಲಿ ಇವರುಗಳ ಪ್ರದರ್ಶನವೂ ನಿರ್ಣಾಯಕವಾಗಲಿದೆ. ಈಗಾಗಲೇ ಆಡಿರುವ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 3ರಲ್ಲಿ ಸೋತಿರುವ ಮುಂಬೈ ಪಡೆ ಕ್ವಾಲಿಫೈಯರ್​ ಪ್ರವೇಶಕ್ಕೆ ಇನ್ನು ಕನಿಷ್ಟ 4 ಪಂದ್ಯಗಳನ್ನ ಗೆಲ್ಲಬೇಕಿದೆ.

Source: newsfirstlive.com Source link