ಅಸಾದುದ್ದೀನ್ ಓವೈಸಿ ಬಿಜೆಪಿಯ ‘ಚಾಚಾ ಜಾನ್’- ರೈತ ನಾಯಕ

ಅಸಾದುದ್ದೀನ್ ಓವೈಸಿ ಬಿಜೆಪಿಯ ‘ಚಾಚಾ ಜಾನ್’- ರೈತ ನಾಯಕ

ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬಿಜೆಪಿಯ ‘ಚಾಚಾ ಜಾನ್’ ಎಂದು ಭಾರತೀಯ ರೈತ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಟೀಕಿಸಿದ್ದಾರೆ. ಉತ್ತರ ಪ್ರದೇಶದ ಬಾಗ್​​​ಪತ್​​ನಲ್ಲಿ ರೈತರ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಟಿಕಾಯತ್​​​, ಓವೈಸಿ ಬಿಜೆಪಿಯ ‘ಚಾಚಾ ಜಾನ್’. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಎಐಎಂಐಎಂ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಿಜೆಪಿಯೇ ಕಾರಣ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯನ್ನು ಎಷ್ಟು ಟೀಕಿಸದರೂ ಓವೈಸಿ ವಿರುದ್ಧ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ಮತ್ತು ಓವೈಸಿ ಪಕ್ಷ ಒಂದೇ. ಒಂದು ಮಾತಲ್ಲಿ ಹೇಳೋದಾದರೆ ಬಿಜೆಪಿಯ ‘ಚಾಚಾ ಜಾನ್’ ಓವೈಸಿ ಎಂದು ಆರೋಪಿಸಿದ್ದಾರೆ.

ಓವೈಸಿಗೆ ಬಿಜೆಪಿಯ ಆಶೀರ್ವಾದ ಇದೆ. ಈ ಕಾರಣದಿಂದಲೇ ಬಿಜೆಪಿಯನ್ನು ಧೈರ್ಯವಾಗಿ ನಿಂದಿಸುತ್ತಾರೆ. ಹೀಗಿದ್ದರೂ ಒಮ್ಮೆಯೂ ಓವೈಸಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಓವೈಸಿ ರೈತರನ್ನು ನಾಶ ಮಾಡಲಿದ್ದಾರೆ. ಬಿಜೆಪಿ ಓವೈಸಿಯನ್ನು ಮುಂದೆ ಬಿಟ್ಟು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಪಡೆಯುತ್ತಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಮೈಸೂರು ದೇವಸ್ಥಾನ ನೆಲಸಮ: ಅಸಲಿಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಇರೋದೇನು..?

Source: newsfirstlive.com Source link