ಕಾಂಗ್ರೆಸ್​ ಸೇರಲಿದ್ದಾರಾ ಜೆಡಿಎಸ್​ ಶಾಸಕ; ‘DKS’​ರನ್ನು ಶ್ರೀನಿವಾಸ ಗೌಡ ದಿಢೀರ್​​ ಭೇಟಿ ಮಾಡಿದ್ಯಾಕೆ?

ಕಾಂಗ್ರೆಸ್​ ಸೇರಲಿದ್ದಾರಾ ಜೆಡಿಎಸ್​ ಶಾಸಕ; ‘DKS’​ರನ್ನು ಶ್ರೀನಿವಾಸ ಗೌಡ ದಿಢೀರ್​​ ಭೇಟಿ ಮಾಡಿದ್ಯಾಕೆ?

ಬೆಂಗಳೂರು: ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ದಿಢೀರ್ ಭೇಟಿಯಾಗಿದ್ದಾರೆ. ಡಿ.ಕೆ ಶಿವಕುಮಾರನ್ನ ಭೇಟಿ ಮಾಡಿ ಒಂದು ಗಂಟೆ ಕಾಲ ರಹಸ್ಯ ಮಾತುಕತೆ ನಡೆಸಿರುವ ಶಾಸಕನ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಡಿಕೆಎಸ್​ ಜೊತೆ ಅರ್ಧ ಗಂಟೆ ಕಾಲ ಚರ್ಚಿಸಿರುವ ಶ್ರೀನಿವಾಸ್ ಗೌಡ ತೆನೆ ಇಳಿಸಿ ಕೈ ಹಿಡಿಯಲು ಹೊರಟ್ರಾ ಎಂಬ ಗುಲ್ಲೆದ್ದಿದೆ. ಪಕ್ಷ ಸೇರ್ಪಡೆ ಸಂಬಂಧ ಡಿಕೆಎಸ್​ ಜೊತೆ ಶ್ರೀನಿವಾಸ್ ಗೌಡ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಪಕ್ಷದ ವರಿಷ್ಠರ ವಿರುದ್ಧ ಶಾಸಕ ತಿರುಗಿಬಿದ್ದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಶ್ರೀನಿವಾಸ್ ಗೌಡ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದ ಬೆನ್ನಲ್ಲೇ ದಿಢೀರ್ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿರುವ ಶ್ರೀ‌ನಿವಾಸ್ ಗೌಡ ಚುನಾವಣೆ ಹೊತ್ತಿಗೆ ಕೈ ಹಿಡಿಯುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ವಿರುದ್ಧ ಕೇಸ್​​​

ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಜಿ ಸಚಿವ ಜಿ.ಟಿ ದೇವೇಗೌಡ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಜೊತೆಗೆ ಗುಬ್ಬಿ ಶ್ರೀನಿವಾಸ್, ಕಾಂತರಾಜ್, ಚಿಕ್ಕನಾಯಕನ ಹಳ್ಳಿ ಸುರೇಶ್ ಬಾಬು, ಸಿ.ಎಸ್ ಪುಟ್ಟರಾಜ್ ಸೇರಿದಂತೆ ಹಲವರು ಕೈ ಹಿಡಿಯಲು ತಯಾರಿ ನಡೆಸಿದ ಬೆನ್ನಲ್ಲೇ ಕೋಲಾರ ಶಾಸಕರು ಆ ಪಟ್ಟಿಗೆ ಸೇರ್ಪಡೆಯಾಗ್ತಾರಾ ಕಾದು ನೋಡಬೇಕು..

Source: newsfirstlive.com Source link