10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

ನವದೆಹಲಿ: ನಾಲ್ಕರಿಂದ ಆರು ವಾರಗಳ ಅಂತರಕ್ಕಿಂತ 10-14 ವಾರಗಳ ಅಂತರದಲ್ಲಿ ಕೊರೊನಾ ಲಸಿಕೆ ಪಡೆಯುವುದು ಒಳಿತು ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಕ್ಲಿನಿಕಲ್ ಇಮ್ಯುನೊಲೊಜಿಸ್ಟ್ ಮತ್ತು ರುಮಾಟಾಲಜಿಸ್ಟ್ ಡಾ.ಪದ್ಮನಾಭ ಶೆಣೈ ಮತ್ತು ಅವರ ತಂಡದಿಂದ ನಡೆಸಿದ ಅಧ್ಯಯನದಿಂದ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‍ಗಳ ನಡುವಿನ ಅಂತರ ಹೆಚ್ಚಳ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕೇರಳ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಅಫಿಡೆವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್

ಹೈಕೋರ್ಟ್ ಸೂಚನೆ ಹಿನ್ನಲೆ ಎರಡು ಡೋಸ್‍ಗಳ ಅಂತರ ಹೆಚ್ಚಿಸುವುದರಿಂದಾಗುವ ಲಾಭಗಳ ಬಗ್ಗೆ ಕೊಚ್ಚಿಯ ಅಂಖಇ ಆಸ್ಪತ್ರೆಯಲ್ಲಿ ಅಧ್ಯಯನ ನಡೆಸಲಾಗಿತ್ತು. 4-6 ವಾರಗಳಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ 102, 10-12 ವಾರಗಳ ಅಂತರದಲ್ಲಿ ವ್ಯಾಕ್ಸಿನ್ ಪಡೆದ 111 ಜನರ ಮೇಲೆ ಈ ಅಧ್ಯಯನ ನಡೆಸಲಾಗಿತ್ತು.

ಅಧ್ಯಯನದಲ್ಲಿ 4-6 ವಾರಗಳ ಅಂತರದಲ್ಲಿ ವ್ಯಾಕ್ಸಿನ್ ಪಡೆದವರಿಗಿಂತ 10-14 ವಾರಗಳ ಅಂತರದಲ್ಲಿ ಲಸಿಕೆ ಪಡೆದವರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುವುದು ದೃಢವಾಗಿದೆ. ಈ ಜನರಲ್ಲಿ ಉತ್ತಮ ಪ್ರತಿರಕ್ಷಣಾ ಶಕ್ತಿ ದೊರೆತಿದೆ. ಜನರಲ್ಲಿ ಶೇ.3.5ರಷ್ಟು ಹೆಚ್ಚು ಪ್ರತಿಕಾಯಗಳು ಉತ್ಪತಿಯಾಗಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಈ ವರದಿಯಲ್ಲಿ ರಾಜ್ಯ ಸರ್ಕಾರ ಅಫಿಡೆವಿಟ್ ರೂಪದಲ್ಲಿ ಹೈಕೋರ್ಟ್ ಗೆ ಸಲ್ಲಿಸಿದೆ.

Source: publictv.in Source link