ಚೊಚ್ಚಲ IPL​​​ ಕಿರೀಟಕ್ಕೆ ಮುತ್ತಿಕ್ಕಲು ಸಜ್ಜಾದ ಡೆಲ್ಲಿಗೆ ಬಲ ತುಂಬ್ತಾರಾ ಈ ಆಟಗಾರರು..?

ಚೊಚ್ಚಲ IPL​​​ ಕಿರೀಟಕ್ಕೆ ಮುತ್ತಿಕ್ಕಲು ಸಜ್ಜಾದ ಡೆಲ್ಲಿಗೆ ಬಲ ತುಂಬ್ತಾರಾ ಈ ಆಟಗಾರರು..?

ಇನ್ನೇನು 4 ದಿನಗಳಲ್ಲಿ ಐಪಿಎಲ್​ ಮಹಾಸಂಗ್ರಾಮ ಶುರುವಾಗುತ್ತೆ. ತಂಡಗಳು ಕೂಡ ತಯಾರಿ ನಡೆಸಿಕೊಂಡಿವೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಪರ್ಫೆಕ್ಟ್​ ಪ್ಲಾನ್​ನೊಂದಿಗೆ ಕಣಕ್ಕಿಳಿಯೋಕೆ ಸಜ್ಜಾಗಿದೆ. ಚೊಚ್ಚಲ ಚಾಂಪಿಯನ್​ ಆಗೋಕೆ ರಿಶಭ್​ ಪಂತ್​ ಪಡೆ ಹೊರಟಿದೆ.

ಮೊದಲ ಹಂತದ ಐಪಿಎಲ್​​ನ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್,​​ ಅಗ್ರಸ್ಥಾನ ಪಡೆದುಕೊಂಡಿದೆ. ಹಾಗೇ ಮೊದಲ ಹಂತದಲ್ಲಿ ಶ್ರೇಯಸ್​​​ ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕಣಕ್ಕಿಳಿದಿತ್ತು. ಆದರೂ ನಾಯಕ ಅಯ್ಯರ್​​​​​ ಕೊರತೆ ಎಲ್ಲೂ ಕಾಡದ ರೀತಿ, ಡೆಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿತ್ತು. ಇದೀಗ ಮುಂಬರುವ ಫೇಸ್​​-ನಲ್ಲೂ ಡೆಲ್ಲಿ, ತನ್ನ ಹಳೆ ಖದರ್​ ತೋರಿಸೋಕೆ ರೆಡಿಯಾಗಿದೆ. ಆದರೀಗ ಹಲವು ಸವಾಲುಗಳನ್ನೇ ಮೆಟ್ಟಿನಿಲ್ಲಬೇಕಿದೆ.

ಯುಎಇನಲ್ಲೇ ರನ್ನರ್​​ ಅಪ್​​ ಆಗಿತ್ತು ಡೆಲ್ಲಿ ಕ್ಯಾಪಿಟಲ್ಸ್​​.!​
2ನೇ ಹಂತದ ಐಪಿಎಲ್​ಗಾಗಿ ಡೆಲ್ಲಿ ಗ್ಯಾಂಗ್​, ತಿಂಗಳ ಮೊದಲೇ ಯುಎಇನಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಭರ್ಜರಿ ಪ್ರಾಕ್ಟೀಸ್​​​​ ನಡೆಸಿರುವ ರಿಷಭ್​ ಪಡೆ, ರನ್​​ ಸಂಗ್ರಾಮದಲ್ಲಿ ಗೆಲುವಿನ ರಣಕಹಳೆ ಮೊಳಗಿಸಲು ತಯಾರಿ ನಡೆಸಿದೆ. ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನ ಗೆದ್ದಿರುವ ಡೆಲ್ಲಿಗೆ, ಕಪ್​ ಗೆಲ್ಲೋಕೆ ಅಡ್ವಾಂಟೇಜ್ ಕೂಡ ಇದೆ. ಕಳೆದ ಸೀಸನ್​​​ನಲ್ಲಿ ಯುಎಇ ಪಿಚ್​​ಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ರನ್ನರ್​​​ಅಪ್​​ಗೆ ತೃಪ್ತಿಪಟ್ಟುಕೊಂಡಿದ್ದ ಡೆಲ್ಲಿ, ಈ ಬಾರಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ.

ಯುಎಇನಲ್ಲೂ ಅಬ್ಬರಿಸುತ್ತಾ ಶಿಖರ್​ – ಪೃಥ್ವಿ ಜೋಡಿ.?
14ನೇ ಆವೃತ್ತಿಯ ಐಪಿಎಲ್​ನಲ್ಲಿ ಹೆಚ್ಚು ಆಕರ್ಷಿಸಿದ್ದು ಅಂದರೆ, ಶಿಖರ್​ ಧವನ್-ಪೃಥ್ವಿ ಶಾ ಜೋಡಿ. ಅದ್ಭುತವಾಗಿ ಇನ್ನಿಂಗ್ಸ್​ ಆರಂಭಿಸುತ್ತಿದ್ದ ಈ ಜೋಡಿ, ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರದಾರಿಗಳಾಗಿದ್ದಾರೆ. ಇನ್ನ ಧವನ್​ ಹೆಚ್ಚು ರನ್​​ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರೋದು ವಿಶೇಷ. ಹಾಗಾಗಿ ಈ ಜೋಡಿ ಮತ್ತೊಮ್ಮೆ ಅಬ್ಬರಿಸುವ ನಿರೀಕ್ಷೆ ಇದೆ. ಇನ್ನ ರಿಷಭ್​ ಪಂತ್​, ಆಟಗಾರನಾಗಿ ನಾಯಕನಾಗಿ ಹೊಸ ಸವಾಲುಗಳನ್ನ ಎದುರಿಸೋಕೆ ಮುಂದಾಗಿದ್ದಾರೆ.

blank

ಡೆಲ್ಲಿ ಕ್ಯಾಪಿಟಲ್ಸ್​​​ ಬಲ ಹೆಚ್ಚಿಸಿದ ಶ್ರೇಯಸ್​ ಅಯ್ಯರ್​.?
ಇಂಡೋ-ಇಂಗ್ಲೆಂಡ್​ ಸರಣಿಯಲ್ಲಿ ಇಂಜುರಿಗೆ ತುತ್ತಾಗಿದ್ದ ಶ್ರೇಯಸ್​ ಅಯ್ಯರ್​, ಮೊದಲ ಹಂತದ ಐಪಿಎಲ್​ನಿಂದ ಹೊರಗುಳಿದಿದ್ರು. ಹೀಗಾಗಿ ರಿಷಭ್​ ಪಂತ್​ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಸಂಪೂರ್ಣ ಫಿಟ್​ ಆಗಿದ್ದು, ​ತಂಡಕ್ಕೆ ಮರಳಿದ್ದಾರೆ. ಇದು ಡೆಲ್ಲಿ ಬಾಯ್ಸ್ ಪಾಳಯದಲ್ಲಿ​ ಹೊಸ ಭರವಸೆ ಮೂಡಿಸಿದೆ. ಆದ್ರೆ ಉಳಿದ ಪಂದ್ಯಗಳಲ್ಲೂ ಪಂತ್​ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ.

ಮ್ಯಾಚ್​ ವಿನ್ನರ್​​ ಆಗ್ತಾರಾ ಸ್ಮಿತ್​,​ ಹೆಟ್ಮಯರ್, ಸ್ಟೊಯ್ನಿಸ್​.?
ಪಂತ್​, ಅಯ್ಯರ್​, ಪೃಥ್ವಿ ಮಾತ್ರವಲ್ಲ, ಸ್ಟೀವ್​ ಸ್ಮಿತ್​, ಶಿಮ್ರಾನ್​ ಹೆಟ್ಮಯರ್​, ಮಾರ್ಕಸ್​ ಸ್ಟೋಯ್ನಿಸ್​​​ ತಂಡದ ಗತಿಯನ್ನೇ ಬದಲಿಸುವ ಬ್ಯಾಟ್ಸ್​​ಮನ್​​​​ಗಳಾಗಿದ್ದು, ನಿರೀಕ್ಷೆ ಡಬಲ್​ ಮಾಡಿದ್ದಾರೆ. ಬೌಲಿಂಗ್​​ನಲ್ಲಿ ಅಕ್ಷರ್​​, ಅಶ್ವಿನ್​ ಮ್ಯಾಜಿಕ್​ ಮಾಡೋಕೆ ಸಿದ್ಧವಾಗಿದ್ರೆ, ರಬಾಡ, ನೋಕಿಯಾ ನಿಖರ ದಾಳಿ ನಡೆಸೋಕೆ ಸಿದ್ಧರಾಗಿದ್ದಾರೆ. ಇನ್ನು ಆಲ್​​​​ರೌಂಡರ್​​ ಕ್ರಿಸ್​ ವೋಕ್ಸ್ ಅಲಭ್ಯರಾಗಲಿದ್ದು, ಅವರ ಸ್ಥಾನಕ್ಕೆ ಆಸಿಸ್​ನ ಬೆನ್ ​ಡ್ವಾರ್ಶಿಯಸ್ ತಂಡ ಸೇರುವ ಮೂಲಕ, ಡೆಲ್ಲಿ ಬಲ ಹೆಚ್ಚಿಸಿದ್ದಾರೆ.

ಒಟ್ನಲ್ಲಿ ಅರಬ್ಬರ ನಾಡಲ್ಲಿ ಐಪಿಎಲ್​​​ ಹಬ್ಬದಲ್ಲಿ ಡೆಲ್ಲಿ, ಮೊದಲ ಹಂತದಲ್ಲಿ ನೀಡಿದ ಪ್ರದರ್ಶನವನ್ನ ಮುಂದುವರೆಸಿದ್ದೇ ಆದರೆ, ಚೊಚ್ಚಲ ಐಪಿಎಲ್​ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ.

 

Source: newsfirstlive.com Source link