ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ; ಆಟೋ ವಲಯಕ್ಕೆ 26,000 ಕೋಟಿ ಸ್ಕೀಮ್​​ಗೆ ಕೇಂದ್ರ ಅನುಮೋದನೆ

ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ; ಆಟೋ ವಲಯಕ್ಕೆ 26,000 ಕೋಟಿ ಸ್ಕೀಮ್​​ಗೆ ಕೇಂದ್ರ ಅನುಮೋದನೆ

ಮಾರಕ ಕೊರೋನಾ ಲಾಕ್ಡೌನ್​​ನಿಂದ ಆಟೋ ವಲಯ ಸಂಪೂರ್ಣ ತತ್ತರಿಸಿ ಹೋಗಿದೆ. ಎಷ್ಟೋ ಆಟೋ ಮೊಬೈಲ್ಸ್​ ಕಂಪನಿಗಳು ಮುಚ್ಚಿ ಹೋಗಿವೆ. ಇದರಿಂದ ಕೋಟ್ಯಾಂತರ ಜನ ಉದ್ಯೋಗಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ನಡುವೆಯೇ ಆಟೋ ವಲಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಎಲೆಕ್ಟ್ರಿಕ್​​ ಮತ್ತು ಹೈಡ್ರೋಜನ್​​ ಇಂಧನ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ನಿರ್ಧರಿಸಿದೆ. ಹಾಗಾಗಿಯೇ ಆಟೋ ವಲಯಕ್ಕಾಗಿ ಕೇಂದ್ರ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೊಸ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (PLI)ಯೋಜನೆಗೆ ಅನುಮೋದನೆ ನೀಡಿದೆ. ಈ ಯೊಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಅಂದಾಜು ಪ್ರಕಾರ 7.5 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.

Source: newsfirstlive.com Source link