2ನೇ ಹಂತದ IPL​ ಆರಂಭಕ್ಕೆ ಕೌಂಟ್​​ಡೌನ್​..ಡೆಲ್ಲಿ ಡ್ಯಾಶರ್​​​ ಮುಂದಿದೆ ಆ ಒಂದು​ ಪ್ರಶ್ನೆ

2ನೇ ಹಂತದ IPL​ ಆರಂಭಕ್ಕೆ ಕೌಂಟ್​​ಡೌನ್​..ಡೆಲ್ಲಿ ಡ್ಯಾಶರ್​​​ ಮುಂದಿದೆ ಆ ಒಂದು​ ಪ್ರಶ್ನೆ

2ನೇ ಹಂತದ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ, ಈ ಆಟಗಾರರ ಪ್ರದರ್ಶನ ಹೇಗಿರುತ್ತೆ ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕೆಲವರು ಇಂಜುರಿಯಿಂದ ಕಮ್​ಬ್ಯಾಕ್​ ಮಾಡ್ತಿದ್ರೆ, ಇನ್ನು ಕೆಲವರು ಲಾಂಗ್​ ಗ್ಯಾಪ್​ ಬಳಿಕ ಮೈದಾನಕ್ಕೆ ಇಳಿಯುತ್ತಿದ್ದಾರೆ. ಕಮ್​ಬ್ಯಾಕ್​ ಅಗ್ನಿ ಪರೀಕ್ಷೆಗೆ ಸಿದ್ಧವಾಗಿರುವ ಆಟಗಾರರ ಕುರಿತ ಒಂದು ರಿಪೋರ್ಟ್​ ಇಲ್ಲಿದೆ ನೋಡಿ.

ಕೊರೊನಾ ಕಾಟದಿಂದ ಅರ್ಧಕ್ಕೆ ರದ್ದಾದ 14ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಪುನಾರಂಭಕ್ಕೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಅರಬ್ಬರ ನಾಡಲ್ಲಿ 5 ದಿನಗಳ ಬಳಿಕ ಕ್ರಿಕೆಟ್​​ ಜಾತ್ರೆ ಆರಂಭವಾಗಲಿದೆ. ಒಂದು ಕಪ್​ಗಾಗಿ 8 ತಂಡಗಳ ತಾಲೀಮು ಒಂದೆಡೆಯಾದ್ರೆ, ಹಲವು ಆಟಗಾರರ ವಿಶೇಷ ತಯಾರಿ ಇನ್ನೊಂದೆಡೆ ನಡೀತಿದೆ. ಇವರ ಪಾಲಿಗೆ ಇದು ಅಗ್ನಿ ಪರೀಕ್ಷೆಯ ಕಣವಾಗಿ ಮಾರ್ಪಟ್ಟಿದೆ.

13ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ತಂಡವನ್ನೂ ಫೈನಲ್​ನಡೆಗೆ ಮುನ್ನಡೆಸಿದ್ದ ಶ್ರೇಯಸ್​​ ಅಯ್ಯರ್​ ಪಾಲಿಗೆ ಇದು ನಿರ್ಣಾಯಕ ಟೂರ್ನಿ. ಇಂಜುರಿಯಿಂದಾಗಿ ​​ಕಳೆದ ಐಪಿಎಲ್​ ಟೂರ್ನಿಯನ್ನಾಡದ ಶ್ರೇಯಸ್​ ಅಯ್ಯರ್​, ಹಲವು ತಿಂಗಳ ಅಂತರದ ಬಳಿಕ ಅಂಗಳಕ್ಕಿಳಿಯೋಕೆ ಸಜ್ಜಾಗಿದ್ದಾರೆ. ರಿಸರ್ವ್​ ಪ್ಲೇಯರ್​ ಆಗಿ ವಿಶ್ವಕಪ್​ ಸ್ಥಾನ ಪಡೆದಿರೋ ಮುಂಬೈಕರ್​​ ಉಳಿದ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

blank

ಇಷ್ಟೇ ಅಲ್ಲ… ಗಾಯದ ಸಮಸ್ಯೆಯನ್ನ ಎದುರಿಸಿದ್ದ ಟಿ. ನಟರಾಜನ್​, ಶುಭ್​ಮನ್​ ಗಿಲ್​ ಪಾಲಿಗೂ ಇದು ಅಗ್ನಿ ಪರೀಕ್ಷೆಯ ಕಣವೆ. ತಮ್ಮ ಫಿಟ್​ನೆಸ್​​ ಹಾಗೂ ಫಾರ್ಮ್​ ಅನ್ನ ಇಲ್ಲಿ ಪ್ರೂವ್ ಮಾಡಬೇಕಿದೆ.​ ಇವರ ಜೊತೆಗೆ ಮೊದಲಾರ್ಧದಲ್ಲಿ ಸಖತ್​ ಪರ್ಫಾಮೆನ್ಸ್​ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್​ ಪಾಳಯದ ಫಾಫ್​ ಡು ಪ್ಲೆಸಿಸ್​​ ಕೂಡ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಸೆಕೆಂಡ್​ ಹಾಫ್​ನಲ್ಲಿ ಚೆನ್ನೈ ಆರಂಭಿಕನ ಪ್ರದರ್ಶನದ ಮೇಲೂ ಕುತೂಹಲ ಹೆಚ್ಚಾಗಿದೆ.

ಇಂಜುರಿ ಕಮ್​ಬ್ಯಾಕ್​ ನಡುವೆ ಭಾರಿ ಅಂತರದ ಬಳಿಕ ಅಂಗಳಕ್ಕಿಳಿಯಲು ಸಜ್ಜಾಗಿರೋ ಆಟಗಾರರ ಮೇಲೂ ನಿರೀಕ್ಷೆ ಹೆಚ್ಚಿದೆ. ಪ್ರಮುಖವಾಗಿ ಡೆಲ್ಲಿ ಕ್ಯಾಪಿಟಲ್ಸ್​​ನ ಅಕ್ಷರ್​ ಪಟೇಲ್, ಆರ್​ಸಿಬಿಯ ಎಬಿ ಡಿವಿಲಿಯರ್ಸ್​, ಎಸ್​​ಆರ್​​​ಹೆಚ್​ನ ಡೇವಿಡ್​​ ವಾರ್ನರ್​​, ಕೆಕೆಆರ್​​ನ ದಿನೇಶ್​​ ಕಾರ್ತಿಕ್​ ಸುದೀರ್ಘ ಅವಧಿಯ ಬಳಿಕ ಮೈದಾನಕ್ಕಿಳಿಯುತ್ತಿದ್ದಾರೆ. ತಂಡದ ಪ್ರಮುಖ ಆಟಗಾರರಾಗಿರುವ ಇವರ ಪ್ರದರ್ಶನ ತಂಡದ ಸೋಲು-ಗೆಲುವನ್ನೇ ನಿರ್ಧರಿಸಲಿದೆ. ಹೀಗಾಗಿ ಅರಬ್ಬರ ನಾಡಲ್ಲಿ ಅಬ್ಬರಿಸಬೇಕಾದ ಒತ್ತಡ ಇವರ ಮೇಲಿದೆ.

 

Source: newsfirstlive.com Source link