‘ಮುಂದಿನ 20 ವರ್ಷ ಸಿದ್ದರಾಮಯ್ಯ, ಡಿಕೆಎಸ್​​​ ನಿರುದ್ಯೋಗಿಯಾಗ್ತಾರೆ’ ಕಟೀಲ್​ ವಾಗ್ದಾಳಿ

‘ಮುಂದಿನ 20 ವರ್ಷ ಸಿದ್ದರಾಮಯ್ಯ, ಡಿಕೆಎಸ್​​​ ನಿರುದ್ಯೋಗಿಯಾಗ್ತಾರೆ’ ಕಟೀಲ್​ ವಾಗ್ದಾಳಿ

ದಕ್ಷಿಣ ಕನ್ನಡ: ನಾವು ಅಧಿಕಾರದಲ್ಲಿದ್ದರಿಂದ ಕಾಂಗ್ರೆಸ್​ಗೆ ಪ್ರತಿಭಟನೆ ಮಾಡೋದಕ್ಕೆ ಎತ್ತುಗಳಾದ್ರು ಇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ರೆ ಎತ್ತುಗಳು ಕಸಾಯಿಖಾನೆಯಲ್ಲಿ ಇರುತ್ತಿದ್ದವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ನಗರದ ಹೊರವಲಯದ ಉಳ್ಳಾಲದ ಮಂಜನಾಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಎತ್ತಿನ ಗಾಡಿಯಲ್ಲಿ ಎತ್ತು ಹಿಡ್ಕೊಂಡಿದ್ದು ಸಿದ್ರಾಮಣ್ಣ. ಚಾಟಿ ಹಿಡಿದವರು ಡಿ.ಕೆ.ಶಿವಕುಮಾರ್. ಡಿಕೆಶಿ ಕೈಯಲ್ಲಿ ಬೆತ್ತ ಮಾತ್ರವಿದೆ ಆದರೆ ಸಿದ್ರಾಮಣ್ಣನ ಕೈಯಲ್ಲಿ ಕಾಂಗ್ರೆಸ್ ಇದೆ. ಚಾಟಿ ಹಿಡಿದವ್ರ ಕೈಯಲ್ಲಿ ಸರ್ಕಾರ ಇರೋದಿಲ್ಲ, ಎತ್ತು ಹಿಡಿದೋರ ಕೈಯಲ್ಲಿ ಅಧಿಕಾರವಿರುತ್ತೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ‘ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡ ಮಮತಾ ಬ್ಯಾನರ್ಜಿ’- ಬಿಜೆಪಿ ಹೀಗೆ ಆರೋಪ ಮಾಡಿದ್ಯಾಕೆ?

ಇನ್ನು ಮುಂದಿನ 20 ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ,ಕೆ.ಶಿವಕುಮಾರ್​  ಸಂಪೂರ್ಣ ನಿರುದ್ಯೋಗಿಯಾಗುತ್ತಾರೆ. ಯಾಕಂದ್ರೆ ಮುಂದಿನ 2 ದಶಕಗಳ ಕಾಲ  ಬಿಜೆಪಿ ದೇಶದಲ್ಲಿ ಅಧಿಕಾರದಲ್ಲಿರುತ್ತದೆ ಹೀಗಾಗಿ ಅವರು ಕೆಲಸವಿಲ್ಲದೆ ನಿರುದ್ಯೋಗಿಯಾಗುತ್ತಾರೆ ಎಂದು ಕಟೀಲ್​ ಟೀಕಿಸಿದ್ದಾರೆ.

Source: newsfirstlive.com Source link