ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು ತವರೂರಲ್ಲಿಯೇ ವಿದ್ಯಾರ್ಥಿಗಳು ಬಸ್​ಗಳಿಗಾಗಿ ಪರದಾಟ ನಡೆಸಿದ ಘಟನೆ ನಡೆದಿದೆ.
ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ, ಒಂದೇ ಬಸ್‌‌ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಬಸ್​ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ನರಕ ದರ್ಶನ ಅನುಭವಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಬಸ್ ಹತ್ತುತ್ತಿದ್ದಾರೆ.
ಬಳ್ಳಾರಿಯಿಂದ ಹಡ್ಲಿಗಿ ಮಾರ್ಗವಾಗಿ ಸಂಚಾರ ಮಾಡುವ ಬಸ್​ನಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್​ ಬಾಗಿಲಲ್ಲಿ ನೇತಾಡುತ್ತ ಸಂಚಾರ ಮಾಡುತ್ತಿದ್ದಾರೆ.

ಮಧ್ಯಾಹ್ನ 3 ಗಂಟೆಯ ಬಸ್ ತಪ್ಪಿದರೆ ಮತ್ತೆ ಸಂಜೆವರೆಗೆ ಯಾವುದೇ ಬಸ್​ ಇಲ್ಲ. ಆದ್ದರಿಂದ ಬಸ್ ಪಾಸ್ ಇರುವ ವಿದ್ಯಾರ್ಥಿಗಳ ಪರದಾಟ ನಡೆಸಿದ್ದು ಸಾರಿಗೆ ಸಚಿವರು ಮಾತ್ರ ಇದರತ್ತ ಗಮನ ಹರಿಸಿಲ್ಲ.ಜೊತೆಗೆ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದರು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link