ಸೋಷಿಯಲ್ ಮೀಡಿಯಾಗೆ ಗುಡ್​ಬೈ; 3ನೇ ಪ್ರಿಯಕರನೊಂದಿಗೆ ಮಸ್ತಿ ಮಾಡಲು ಹೋದ ಬ್ರಿಟ್ನಿ

ಸೋಷಿಯಲ್ ಮೀಡಿಯಾಗೆ ಗುಡ್​ಬೈ; 3ನೇ ಪ್ರಿಯಕರನೊಂದಿಗೆ ಮಸ್ತಿ ಮಾಡಲು ಹೋದ ಬ್ರಿಟ್ನಿ

ಜಗತ್ತಿನಾದ್ಯಂತ ಅಭಿಮಾನಿಗಳನ್ನ ಹೊಂದಿರೋ ಸಿಂಗರ್ ಬ್ರಿಟ್ನಿ ಸ್ಪಿಯರ್ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ನಾಪತ್ತೆಯಾಗಿದ್ದಾರೆ. ಇದರಿಂದ ಅಭಿಮಾನಿಗಳು ಕಳವಳಗೊಂಡಿದ್ದಾರೆ. ಆದ್ರೆ ವಿಚಾರದಲ್ಲಿ ಅಭಿಮಾನಿಗಳು ಆತಂಕಗೊಳ್ಳೋದು ಬೇಡ ಅಂತ ಸ್ವತಃ ಬ್ರಿಟ್ನಿ ಸ್ಪಿಯರ್ ಸೋಷಿಯಲ್ ಮೀಡಿಯಾ ತೊರೆಯುವ ಮುನ್ನ ಸಂದೇಶ ನೀಡಿದ್ದಾರೆ. ಅಲ್ಲದೇ ಈ ಸಮಯದಲ್ಲಿ ತಾವು ತಮ್ಮ ಎಂಗೇಜ್​ಮೆಂಟ್ ಸೆಲಿಬ್ರೇಟ್ ಮಾಡಲು ಬ್ರೇಕ್ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

blank

ಕೆಲವು ದಿನಗಳ ಹಿಂದಷ್ಟೇ ಬ್ರಿಟ್ನಿ ಸ್ಪಿಯರ್ ತಮ್ಮ ಗೆಳೆಯನ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಕ್ಯೂಟ್ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಎಂಗೇಜ್​ಮೆಂಟ್ ಅನೌನ್ಸ್ ಮಾಡಿದ್ದರು. ಬ್ರಿಟ್ನಿ ಪ್ರಿಯಕರ ಸ್ಯಾಮ್ ಅಸ್ಘರಿ ತಾನು ಬ್ರಿಟ್ನಿಗೆ ತೊಡಿಸಿದ ರಿಂಗ್​ನ ಫೋಟೋವನ್ನೂ ಹಂಚಿಕೊಂಡಿದ್ದರು.

ಬ್ರಿಟ್ನಿ ಸ್ಪಿಯರ್ ಮತ್ತು ಸ್ಯಾಮ್ ಅಸ್ಘರಿ 2016 ರಲ್ಲಿ ಸ್ಲಂಬರ್ ಒಆರ್ಟಿ ಮ್ಯೂಸಿಕ್ ವಿಡಿಯೋ ನಿರ್ಮಾಣದ ವೇಳೆ ಭೇಟಿಯಾಗಿ ಲವ್​ನಲ್ಲಿ ಬಿದ್ದಿದ್ದರು. ಬ್ರಿಟ್ನಿ ಸ್ಪಿಯರ್ ಈ ಹಿಂದೆ ಜೇಸನ್ ಅಲೆಕ್ಸಾಂಡರ್​​ನ್ನ ಮದುವೆಯಾಗಿದ್ದರು.. 2004 ರಲ್ಲಿ ಇವರಿಬ್ಬರ ವಿಚ್ಛೇದನವಾಗಿತ್ತು, ನಂತರ ಅದೇ ವರ್ಷ ಡ್ಯಾನ್ಸರ್ ಕೆವಿನ್ ಫೆಡೆರ್​ಲಿನ್ ಎಂಬುವರನ್ನ ಮದುವೆಯಾಗಿದ್ದರು. 2007 ರಲ್ಲಿ ವಿಚ್ಛೇದನ ಪಡೆದುಕೊಂಡರು. ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.

 

 

View this post on Instagram

 

A post shared by Sam Asghari (@samasghari)

Source: newsfirstlive.com Source link