CD ಕೇಸ್ ಸಂತ್ರಸ್ತೆ ಯುವತಿ ಪರ ವಕೀಲೆಗೆ ಅನಾರೋಗ್ಯ; ವಿಚಾರಣೆ ಮುಂದೂಡಿದ ಹೈಕೋರ್ಟ್​

CD ಕೇಸ್ ಸಂತ್ರಸ್ತೆ ಯುವತಿ ಪರ ವಕೀಲೆಗೆ ಅನಾರೋಗ್ಯ; ವಿಚಾರಣೆ ಮುಂದೂಡಿದ ಹೈಕೋರ್ಟ್​

ಬೆಂಗೂಳೂರು :ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅನಾರೋಗ್ಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಪೀಠದಲ್ಲಿ ವಿಚಾರಣೆ ಆರಂಭವಾಗಿತ್ತು. ಈ ವೇಳೆ ಯುವತಿಯ ಪರವಾಗಿ ಸುಪ್ರೀಂ ಕೋರ್ಟ್ ವಕೀಲೇ ಇಂದಿರಾ ಜೈಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಪರ ಸಿ.ವಿ.ನಾಗೇಶ್ ಹಾಜರಿದ್ದರು.
ಮೊದಲು SIT ರಚನೆ ಪ್ರಶ್ನಿಸಿದ್ದ ಅರ್ಜಿ ಕೈಗೆತ್ತಿಕೊಂಡ ಪೀಠ ಅರ್ಜಿದಾರೆ ಗೀತಾ ಮಿಶ್ರಾ ಪರ ವಕೀಲ ಜಿ.ಆರ್ ಮೋಹನ್ ಎಸ್ಐಟಿ ರಚನೆ ಕಾನೂನು ಬದ್ಧವಾಗಿಲ್ಲ ಎಂದು ವಾದ ಮಂಡಿಸಿದರು.

ಇದನ್ನೂ ಓದಿ:ಶಾಸಕ, ಸಂಸದರ ಕೇಸ್​ ಹಿಂಪಡೆತ -ಸ್ಪಷ್ಟ ನಿಲುವು ಸೂಚಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್​

ಅನಾರೋಗ್ಯದ ನಡುವೆ ವಾದ ಮಂಡಿಸಲು ಮುಂದಾಗಿದ್ದ ಇಂದಿರಾ ಜೈಸಿಂಗ್ ಅವರ ಅನಾರೋಗ್ಯ ವಿಚಾರವನ್ನ ಪರಿಗಣಿಸಿದ ಹೈಕೋರ್ಟ್. ಅಗತ್ಯವಿದ್ದರೇ ವಿಚಾರಣೆಯನ್ನು ಮುಂದೂಡುವುದಾಗಿ ಹೇಳಿ ವಿಚಾರಣೆಯನ್ನ ಸೆಪ್ಟೆಂಬರ್​ 17 ಕ್ಕೆ ಮುಂದೂಡಿ ಹಂಗಾಮಿ ಸಿಜೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್; ತಮಿಳುನಾಡು ಮೂಲದ ಯುವಕ, ಯುವತಿ ಸಾವು

Source: newsfirstlive.com Source link