‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ; ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ’

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ; ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ’

ಬೆಂಗಳೂರು: ನೂತನ ಶಿಕ್ಷಣ ನೀತಿ ಜಾರಿ ಬಗ್ಗೆ ಸರ್ಕಾರ ಮುಕ್ತ ಚರ್ಚೆಗೆ ಸಿದ್ಧವಿದೆ, ಯಾರೂ ಗೊಂದಲಕ್ಕೆ ಒಳಗಾಗೋದು ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು.. ಇದೊಂದು ಕ್ರಾಂತಿಕಾರಕ ಬದಲಾವಣೆ. ಪ್ರಸ್ತುತ ‌ಕಾಲಕ್ಕೆ ಶಿಕ್ಷಣ ನೀಡಿ, ಒಳ್ಳೆಯ ಭವಿಷ್ಯ ನೀಡಬೇಕು ಎಂಬ ಗುರಿ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕು. ಪ್ರಾಥಮಿಕ ಹಾಗೂ ಸೆಂಕಡರಿ ಎಜುಕೇಶನ್ ಬಗ್ಗೆ ಕಮಿಟಿ ಮಾಡಿ ಇಂಪ್ಲೆಮೆಂಟ್ ಮಾಡಲಿದ್ದೇವೆ. ಯಾರೂ ಗೊಂದಲ ಆಗುವ ಅವಶ್ಯಕತೆ ಇಲ್ಲ. ಚರ್ಚೆಗೆ ನಮ್ಮ ಸರ್ಕಾರ ಸಿದ್ಧವಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಸುವ ಕೆಲಸ ಮಾಡಬೇಕಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅಳವಡಿಸೋ ಬಗ್ಗೆ ಸಮಿತಿ ರಚಿಸುತ್ತೇವೆ ಎಂದರು.

ಇಂದು ಕೆಆರ್ ಸರ್ಕಲ್ ನಲ್ಲಿ ವಿಶ್ವೇಶ್ವರಯ್ಯ ಪ್ಲಾಜಾ ಮಾಡಿದ್ದೇವೆ. ಇಲ್ಲಿ ಲೈಬ್ರರಿ, ಭಿತ್ತಿಚಿತ್ರ ಅಳವಡಿಸಲಾಗಿದೆ. ಇಲ್ಲಿ ಜನ ಸರ್​ಎಂವಿ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಇದೇ ಮಾದರಿಯಲ್ಲಿ ಬೆಂಗಳೂರಿನ 30 ಸರ್ಕಲ್ ಅಭಿವೃದ್ಧಿ ಮಾಡ್ತೀವಿ ಎಂದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಸಿಸಿ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತಿಯಿದ್ದರು.

Source: newsfirstlive.com Source link