ಡ್ರೋನ್ ಉತ್ಪಾದನಾ ವಲಯಕ್ಕೆ ಮೇಜರ್ ಬೂಸ್ಟ್; ಭಾರೀ ಮೊತ್ತ ಮೀಸಲಿಟ್ಟ ಕೇಂದ್ರ

ಡ್ರೋನ್ ಉತ್ಪಾದನಾ ವಲಯಕ್ಕೆ ಮೇಜರ್ ಬೂಸ್ಟ್; ಭಾರೀ ಮೊತ್ತ ಮೀಸಲಿಟ್ಟ ಕೇಂದ್ರ

ನವದೆಹಲಿ: ಕೊರೊನಾ ಸಮಯದಲ್ಲಿ ಸಂಕಷ್ಟಕ್ಕೊಳಗಾದ ಆಟೋ ವಲಯಕ್ಕೆ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಇಂಧನ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ನಿರ್ಧರಿಸಿದೆ. ಹೀಗಾಗಿ 26 ಸಾವಿರ ಕೋಟಿ ರೂ ಮೌಲ್ಯದ ಹೊಸ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ.

ಈ ಪೈಕಿ ಡ್ರೋನ್ ಮತ್ತು ಡ್ರೋನ್ ಪರಿಕರಗಳ ಉತ್ಪಾದನೆಗೆ ಪ್ರಾಮುಖ್ಯತೆ ನೀಡಿರುವ ಕೇಂದ್ರ ಸರ್ಕಾರ ಪಿಎಲ್​ಐ ಸ್ಕೀಮ್​ನಲ್ಲಿ ₹120 ಕೋಟಿ ಮೀಸಲಿರಿಸಿದೆ.

ಇದನ್ನೂ ಓದಿ: ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ; ಆಟೋ ವಲಯಕ್ಕೆ 26,000 ಕೋಟಿ ಸ್ಕೀಮ್​​ಗೆ ಕೇಂದ್ರ ಅನುಮೋದನೆ

ಕೇಂದ್ರ ಸರ್ಕಾರ ಅನುಮತಿ ನೀಡಿರುವ ಸ್ಕೀಮ್​ ನಡಿ ಡ್ರೋನ್ ಮತ್ತು ಡ್ರೋನ್ ಪರಿಕರಗಳ ಉತ್ಪಾದನೆಗೆ ಮೀಸಲಿಟ್ಟ ಹಣ ಎಲ್ಲಾ ಪ್ರಾದೇಶಿಕ ಡ್ರೋನ್ ತಯಾರಕರ ವಾರ್ಷಿಕ ಟರ್ನ್ ಓವರ್​ನ ಮೊತ್ತಕ್ಕಿಂತಲೂ ಡಬ್ಬಲ್ ಇದೆ.

ಈ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ.. 2021 ರ ಡ್ರೋನ್ಸ್ ಜಾರಿ ಮತ್ತು ಸದ್ಯದ ಬೂಸ್ಟ್​ನಿಂದಾಗಿ 2030ರೊಳಗೆ ಜಾಗತಿಕ ಡ್ರೋನ್ ಹಬ್ ಆಗಿ ಭಾರತ ಗುರುತಿಸಿಕೊಳ್ಳಲಿದೆ ಎಂದಿದ್ದಾರೆ.

ಈ ಸ್ಕೀಮ್ ಭಾರತದಲ್ಲಿ ದೊಡ್ಡಮಟ್ಟದ ಆರ್ಥಿಕತೆಗೆ ಕಾರಣವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ಡ್ರೋನ್ ಮತ್ತು ಡ್ರೋನ್ ಪರಿಕರಗಳ ಉತ್ಪಾದನಾ ವಲಯಕ್ಕೆ 5000 ಕೋಟಿ ಬಂಡವಾಳ ಹರಿದುಬರಲಿದೆ ಅಲ್ಲದೇ ನೇರ 10,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಿಂದಿಯಾ ಹೇಳಿದ್ದಾರೆ.

Source: newsfirstlive.com Source link