‘ಮಹದೇವಮ್ಮ ದೇಗುಲ ಪುರಾತತ್ವ ಇಲಾಖೆಗೆ ಸೇರಿಲ್ಲ’ ನಂಜನಗೂಡು ತಹಶೀಲ್ದಾರ್

‘ಮಹದೇವಮ್ಮ ದೇಗುಲ ಪುರಾತತ್ವ ಇಲಾಖೆಗೆ ಸೇರಿಲ್ಲ’ ನಂಜನಗೂಡು ತಹಶೀಲ್ದಾರ್

ಮೈಸೂರು: ಜಿಲ್ಲೆಯ ಹುಚ್ಚಗನಿ ಮಹದೇವಮ್ಮ ದೇಗುಲ ನೆಲಸಮ ವಿಚಾರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ಕುರಿತು ಒಂದೆಡೆ ಪ್ರತಿಪಕ್ಷಳು ವಾಗ್ದಾಳಿ ನಡೆಸುತ್ತಿದ್ದರೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಈ ನಿಟ್ಟಿನಲ್ಲಿ ಮಹದೇವಮ್ಮ ದೇಗುಲ ಪುರಾತತ್ವ ಇಲಾಖೆಗೆ ಸೇರಿಲ್ಲ ಎಂದು ತಹಶೀಲ್ದಾರ್​ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ‘ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮ, ಕಾಂಗ್ರೆಸ್​​ ಹೇಳಿದ್ದು ಸತ್ಯ’- ಸ್ವಪಕ್ಷದ ವಿರುದ್ಧವೇ ಈಶ್ವರಪ್ಪ ಕಿಡಿ

ಶಕ್ತಿದೇವತೆ ಮಹಾದೇವಮ್ಮ ದೇಗುಲ ಪುರಾರತ್ವ ಇಲಾಖೆಗೆ ಒಳಪಟ್ಟಿಲ್ಲ ಎಂದು ಪುರಾತತ್ವ ಇಲಾಖೆ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಹೇಳಿದ್ದಾರೆ. ಸುಪ್ರಿಂಕೋರ್ಟ್ ಆದೇಶ, ಮೇಲಾಧಿಕಾರಿಗಳ ಸೂಚನೆಯಂತೆ ದೇವಾಲಯ ತೆರವುಗೊಳಿಸಲಾಗಿದೆ. ದೇವಾಲಯದ ಮರು ನಿರ್ಮಾಣದ ಬೇಡಿಕೆ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದಿದ್ದಾರೆ.

Source: newsfirstlive.com Source link